ಸಂಕ್ರಾಂತಿ ವಿಶೇಷ; ಖಾರ ಪೊಂಗಲ್,ಸಕ್ಕರೆ ಪೊಂಗಲ್ ರೆಸಿಪಿ
ನಮ್ ಕಡೆ ಸಂಕ್ರಾಂತಿ ತಮಿಳುನಾಡು ಕಡೆ ‘ಪೊಂಗಲ್’. ನಮ್ಮ ಸಂಕ್ರಾಂತಿಯೂ ಪೊಂಗಲ್, ಹುಗ್ಗಿ ಇಲ್ಲದೇ ಸಂಪೂರ್ಣ ಆಗಲ್ಲ. ಇಲ್ಲಿ ಸಿಹಿ ಪೊಂಗಲ್, ಖಾರ ಪೊಂಗಲ್ ಮಾಡುವ ಕ್ರಮ ಇದೆ. ಸಂಕ್ರಾಂತಿ ಸಂತಸ ಹೆಚ್ಚಿಸಲಿ.
ಖಾರ ಪೊಂಗಲ್
ಬೇಕಾಗುವ ಸಾಮಗ್ರಿ
ತುಪ್ಪ 2 ಸ್ಪೂನ್, ಅರ್ಧ ಕಪ್ ಅಕ್ಕಿ, ಅರ್ಧ ಕಪ್ ಹೆಸರು ಬೇಳೆ, 3 ಕಪ್ ನೀರು, 1 ಸ್ಪೂನ್ ಕಾಳು ಮೆಣಸು, 1 ಸ್ಪೂನ್ ಜೀರಿಗೆ, ಹೆಚ್ಚಿದ ಶುಂಠಿ 1 ಸ್ಪೂನ್, ಸ್ವಲ್ಪ ಗೋಡಂಬಿ, ಚಿಟಿಕೆ ಇಂಗು, ಕರಿಬೇವು, ಉಪ್ಪು.
ವಾಹ್ ಎಂಥಾ ರುಚಿ.. ದಕ್ಷಿಣಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಐದು ಅಡುಗೆಗಳು
ಮಾಡುವ ವಿಧಾನ:
ಕುಕ್ಕರ್‌ಅನ್ನು ಬಿಸಿ ಮಾಡಿ 1 ಸ್ಪೂನ್ ತುಪ್ಪ ಹಾಕಿ. ಇದಕ್ಕೆ ಅರ್ಧ ಕಪ್ ಅಕ್ಕಿ, ಅರ್ಧ ಕಪ್ ಹೆಸರು ಬೇಳೆ ಹಾಕಿ. ಎರಡು ನಿಮಿಷ ಹುರಿಯಿರಿ. ಘಮ ಬರುವಾಗ ಮೂರು ಕಪ್ ನೀರು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಮಿಕ್ಸ್ ಮುಚ್ಚಳ ಮುಚ್ಚಿ 5 ವಿಷಲ್ ಕೂಗಿಸಿ. ತಣ್ಣಗಾದ ಮೇಲೆ ಕುಕ್ಕರ್ ತೆರೆದು ನೋಡಿ. ಅಕ್ಕಿ ಬೇಳೆ ಚೆನ್ನಾಗಿ ಬೆಂದಿರಬೇಕು. ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ, ಉರಿ ಸಣ್ಣಕ್ಕಿರಲಿ. ಇದಕ್ಕೆ ಕಾಳು ಮೆಣಸು ಹಾಕಿ ಒಂದೆರಡು ನಿಮಿಷ ತಿರುವಿ. ಘಮ ಬರುವಾಗ 1 ಸ್ಪೂನ್ ಜೀರಿಗೆ ಹಾಕಿ, ಮಿಕ್ಸ್ ಮಾಡಿ. ನಂತರ ಗೋಡಂಬಿ ಹಾಕಿ. ಚಿಟಿಕೆ ಇಂಗು ಉದುರಿಸಿ. ಕಡಿಮೆ ಉರಿಯಲ್ಲಿ ತಿರುವುತ್ತಿರಿ. ಗೋಡಂಬಿ ಬಂಗಾರದ ಬಣ್ಣಕ್ಕೆ ಬರುವಾಗ ಕರಿಬೇವಿನಸೊಪ್ಪು ಹಾಕಿ ಕೈಯಾಡಿಸಿ. ನಂತರ ಇದನ್ನು ಬೆಂದಿರುವ ಅಕ್ಕಿ, ಬೇಳೆಗೆ ಹಾಕಿ. ಮೇಲಿಂದ 1 ಸ್ಪೂನ್ ಉಪ್ಪು ಹಾಕಿ. ಎರಡು ನಿಮಿಷ ಸಿಮ್‌ನಲ್ಲಿ ಇದನ್ನು ಮಿಕ್ಸ್ ಮಾಡುತ್ತಿರಿ. ಹದವಾದ ಖಾರ ಪೊಂಗಲ್ ರೆಡಿಯಾಯ್ತು.
ಸಕ್ಕರೆ ಪೊಂಗಲ್
ಬೇಕಾಗುವ ಸಾಮಾಗ್ರಿ : ತುಪ್ಪ - 1 ಸ್ಪೂನ್, ಅಕ್ಕಿ - 1/2 ಕಪ್, ಹೆಸರು ಬೇಳೆ 1/4 ಕಪ್, 1 ಕಪ್ ಹಾಲು, 1.5 ಕಪ್ ನೀರು, 1 ಕಪ್ ಬೆಲ್ಲ, 1/2 ಕಪ್ ನೀರು, ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಪಚ್ಚ ಕರ್ಪೂರ, ಉಪ್ಪು.
ಮಾಡುವ ವಿಧಾನ : ಕುಕ್ಕರ್ ಅನ್ನು ಸ್ಟೌಮೇಲಿಟ್ಟು, ಅದಕ್ಕೆ ತುಪ್ಪ ಹಾಕಿ. ಈ ತುಪ್ಪ ಬಿಸಿಯಾದಾಗ ಅಕ್ಕಿ ಹಾಕಿ, ಆಮೇಲೆ ಹೆಸರು ಬೇಳೆ ಹಾಕಿ. ಎರಡು ನಿಮಿಷ ತಿರುವುತ್ತಿರಿ. ಘಮ ಬರಲಾರಂಭಿಸುತ್ತದೆ. ಆಗ 1 ಕಪ್ ಹಾಲು ಹಾಕಿ. ಬಳಿಕ ಒಂದೂವರೆ ಕಪ್ ನೀರು ಹಾಕಿ. ಚೆನ್ನಾಗಿ ಮಿಕ್ಸ್ ಆಗುವಂತೆ ತಿರುವಿ. ಕುಕ್ಕರ್ ಮುಚ್ಚಳ ಹಾಕಿ. ಐದು ವಿಷಲ್ ಕೂಗಿಸಿ. ತಣ್ಣಗಾದ ಮೇಲೆ ಕುಕ್ಕರ್ ಓಪನ್ ಮಾಡಿ ಅನ್ನ, ಬೇಳೆ ಚೆನ್ನಾಗಿ ಬೆಂದಿರುತ್ತದೆ.
ಸೈಡ್ಸ್ ಪ್ಲೀಸ್, ಇದು ಚಪಾತಿ, ದೋಸೆ, ಪುಲ್ಕಾಗೆ ಸೈಡ್ ಡಿಶ್‌ಗಳು!
ಈಗ ದಪ್ಪ ತಳದ ಬಾಣಲೆಗೆ 1 ಕಪ್ ಬೆಲ್ಲ ಹಾಕಿ. ಅರ್ಧ ಕಪ್ ನೀರು ಹಾಕಿ. ಬೆಲ್ಲವನ್ನು ಕರಗಿಸಿ. ಎರಡು ನಿಮಿಷ ಕುದಿಯಲು ಬಿಡಿ. ಬೆಲ್ಲ ಪಾಕವಾಗುತ್ತೆ. ಇದನ್ನು ಬೇಯಿಸಿಟ್ಟಅನ್ನ ಹೆಸರು ಬೇಳೆಗೆ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಅನ್ನ, ಬೇಳೆಯನ್ನು ಸೌಟಿನಲ್ಲೇ ತುಸು ಜಜ್ಜಿ ಹದ ಪಾಕ ಮಾಡಿ. ಇದನ್ನು ಸಿಮ್‌ನಲ್ಲಿ ಎರಡು ನಿಮಿಷ ಬೇಯಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ತಿನ್ನಬಹುದಾದ ಪಚ್ಚ ಕರ್ಪೂರ, ಕಾಲು ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಪೊಂಗಲ್ ರೆಡಿ.