ಜಮ್ಮುಗೆ ಹೋಗೋ ಬದ್ಲು ಪಾಕ್‌ ವಾಯು ಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ: ಕಾರಣ ಹೀಗಿದೆ..

ಇಂಡಿಗೋ 6e-2124 ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು ಮತ್ತು ವಿಮಾನವನ್ನು ಅಮೃತಸರಕ್ಕೆ ಮಾರ್ಗ ಬದಲಾವಣೆ ಮಾಡಲಾಯ್ತು ಎಂದು ವರದಿಯಾಗಿದೆ. 

srinagar bound indigo flight enters pakistan airspace due to bad weather diverted to amritsar ash

ನವದೆಹಲಿ (ಜೂನ್ 26, 2023): ಪ್ರತಿಕೂಲ ಹವಾಮಾನದ ಕಾರಣ ಶ್ರೀನಗರದಿಂದ ಜಮ್ಮುವಿಗೆ ಇಂಡಿಗೋ ವಿಮಾನವೊಂದು ಭಾನುವಾರ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದೆ. ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿ, "ಇಂಡಿಗೋ 6e-2124 ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು ಮತ್ತು ವಿಮಾನವನ್ನು ಅಮೃತಸರಕ್ಕೆ ಮಾರ್ಗ ಬದಲಾವಣೆ ಮಾಡಲಾಯ್ತು" ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ ಘಟನೆ ಕೆಲ ಕಾಲ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತಾದರೂ ಅದೃಷ್ಟವಶಾತ್‌ ವಿಮಾನ ಯಶಸ್ವಿಯಾಗಿ ಅಮೃತಸರದ ಕಡೆಗೆ ಮಾರ್ಗ ಬದಲಾವಣೆಯಾಗಿ ಅಲ್ಲೇ ಲ್ಯಾಂಡ್‌ ಆಗಿದೆ. ಇನ್ನು, ಈ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಪರಿಸ್ಥಿತಿಯ ಬಗ್ಗೆ ವಿಮಾನಯಾನ ಸಂಸ್ಥೆಯು ಎರಡೂ ದೇಶಗಳಲ್ಲಿನ ಅಧಿಕಾರಿಗಳಿಗೆ ತಿಳಿಸಿತ್ತು ಎಂದೂ ತಿಳಿದುಬಂದಿದೆ. ಹಾಗೆ, ವಿಮಾನದ ತಿರುವಿನ ಬಗ್ಗೆ ಜಮ್ಮು ಮತ್ತು ಲಾಹೋರ್ ಎಟಿಸಿ ನಡುವೆ ಸಮನ್ವಯ ಸಾಧಿಸಲಾಗಿತ್ತು ಎಂದೂ ಹೇಳಿದ್ದಾರೆ.

ಇದನ್ನು ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

ಶ್ರೀನಗರದಿಂದ ಹೊರಟಿದ್ದ ಈ ಇಂಡಿಗೋ ವಿಮಾನವು ಜಮ್ಮು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಕೆಟ್ಟ ಹವಾಮಾನದ ಕಾರಣ ವಿಮಾನವನ್ನು ಅಮೃತಸರದಲ್ಲಿ ಲ್ಯಾಂಡ್‌ ಮಾಡುವಂತೆ ಕೇಳಲಾಯಿತು. ಈ ಹಿನ್ನೆಲೆ, ಅದು ಕೆಲ ಕಾಲ ಪಾಕ್‌ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿತ್ತು ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಈ ತಿಂಗಳ ಆರಂಭದಲ್ಲಿ ಸಹ ಅಮೃತಸರದಿಂದ ಅಹಮದಾಬಾದ್‌ಗೆ ಇಂಡಿಗೋ ವಿಮಾನವು ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದಾಗ ಇದೇ ರೀತಿಯ ಘಟನೆ ವರದಿಯಾಗಿತ್ತು.

"ಅಮೃತಸರದಿಂದ ಅಹಮದಾಬಾದ್‌ಗೆ ಕಾರ್ಯಾಚರಿಸುತ್ತಿರುವ ಇಂಡಿಗೋ ಫ್ಲೈಟ್ 6E-645, ಕೆಟ್ಟ ಹವಾಮಾನದಿಂದಾಗಿ ಅಟಾರಿಯಿಂದ ಪಾಕಿಸ್ತಾನದ ವಾಯುಪ್ರದೇಶಕ್ಕೆ ವಿಚಲನವನ್ನು ತೆಗೆದುಕೊಳ್ಳಬೇಕಾಯಿತು. ಈ ವಿಚಲನವನ್ನು ಅಮೃತಸರ ATC ಯಿಂದ ದೂರವಾಣಿ ಮೂಲಕ ಪಾಕಿಸ್ತಾನದೊಂದಿಗೆ ಉತ್ತಮವಾಗಿ ಸಂಯೋಜಿಸಲಾಗಿದೆ. ಪಾಕಿಸ್ತಾನದೊಂದಿಗೆ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿದ್ದರು. ಮತ್ತು ವಿಮಾನವು ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು," ಎಂದು ಇಂಡಿಗೋ ಘಟನೆಯ ಕುರಿತು ಹೇಳಿಕೆಯಲ್ಲಿ ತಿಳಿಸಿತ್ತು.

ಇದನ್ನೂ ಓದಿ: ಬರೋಬ್ಬರಿ 14000 ರೂ. ತಲುಪಿದ ದೆಹಲಿ - ಮುಂಬೈ ವಿಮಾನ ದರ: ವಿಶ್ವದಲ್ಲೇ ದುಬಾರಿ ಬೆಲೆಗೆ ಕಾರಣ ಇಲ್ಲಿದೆ..

ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಅಂದರೆ ಇಂಡಿಗೋ ಸೋಮವಾರ 500 ಏರ್‌ಬಸ್ A320 ಕುಟುಂಬ ವಿಮಾನಗಳನ್ನು ಖರೀದಿಸಲು ಇತ್ತೀಚೆಗೆ ಘೋಷಿಸಿದೆ. ಇಂಡಿಗೋ ಒಂದೇ ಬಾರಿಗೆ ಇಷ್ಟು ದೊಡ್ಡ ಆರ್ಡರ್ ಮಾಡಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಈ ವಿಮಾನಗಳ ವಿತರಣೆಯನ್ನು 2030 ಮತ್ತು 2035 ರ ನಡುವೆ ನಿರೀಕ್ಷಿಸಲಾಗಿದೆ. ವಾಣಿಜ್ಯ ಬಳಕೆಯ ವಿಮಾನಯಾನ ಕ್ಷೇತ್ರದಲ್ಲಿ ಇದುವರೆಗಿನ ಅತೀದೊಡ್ಡ ಆರ್ಡರ್‌ ಇದಾಗಿದೆ.

ಈ ಮೊದಲು ಈ ದಾಖಲೆ ಏರ್‌ಇಂಡಿಯಾದ ಹೆಸರಲ್ಲಿತತು. ಏರ್‌ಇಂಡಿಯಾವನ್ನು ಟಾಟಾ ಖರೀದಿ ಮಾಡಿದ ಬಳಿಕ 470 ವಿಮಾನಗಳ ಖರೀದಿಗೆ ಆರ್ಡರ್‌ ನೀಡಿತ್ತು. ಇಂಡಿಗೋ 500 ಏರ್‌ಬಸ್ A320 ಫ್ಯಾಮಿಲಿ ವಿಮಾನಗಳನ್ನು ಖರೀದಿಸಲು 55 ಬಿಲಿಯನ್ ಡಾಲರ್ ಅಂದರೆ 4.39 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆರ್ಡರ್‌ನ ನಿಜವಾದ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ, ಲಕ್ಷಾಂತರ ಕೋಟಿಯ ವ್ಯವಹಾರಗಳ ವೇಳೆ ರಿಯಾಯಿತಿಗಳು ಕೂಡ ದೊಡ್ಡ ಪ್ರಮಾಣದಲ್ಲಿ ಇರುತ್ತದೆ.

ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ಭೇಟಿ ಸಂಚಲನ: ಹೋಟೆಲ್‌, ವಿಮಾನ ಪ್ರಯಾಣದ ದರ ಭಾರಿ ಏರಿಕೆ; ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ

Latest Videos
Follow Us:
Download App:
  • android
  • ios