ಅಮೆರಿಕದಲ್ಲಿ ಮೋದಿ ಭೇಟಿ ಸಂಚಲನ: ಹೋಟೆಲ್‌, ವಿಮಾನ ಪ್ರಯಾಣದ ದರ ಭಾರಿ ಏರಿಕೆ; ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ

ಜೂನ್‌ 21ರಂದು ಮೋದಿ ಅವರು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಅವರು ಅಮೆರಿಕ ಅಧ್ಯಕ್ಷರ ಆತಿಥ್ಯ ಸ್ವೀಕರಿಸಲಿದ್ದಾರೆ.

indians americans organise lavish welcome for pm modi in us ash

ವಾಷಿಂಗ್ಟನ್‌ (ಜೂನ್ 14, 2023): ಪ್ರಧಾನಿಯಾದ 9 ವರ್ಷಗಳ ಬಳಿಕ ಅಮೆರಿಕಕ್ಕೆ ಮೊದಲ ಅಧಿಕೃತ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಶ್ವದ ದೊಡ್ಡಣ್ಣ’ ಖ್ಯಾತಿಯ ದೇಶದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ಮೋದಿ ಅವರನ್ನು ಕಾಣಲು ಅಮೆರಿಕದ ವಿವಿಧೆಡೆ ನೆಲೆಸಿರುವ ಭಾರತೀಯರು ವಾಷಿಂಗ್ಟನ್‌ನತ್ತ ತೆರಳಲು ಯೋಜನೆ ಹಾಕಿಕೊಂಡಿದ್ದಾರೆ. ಇದರಿಂದಾಗಿ ವಾಷಿಂಗ್ಟನ್‌ನತ್ತ ತೆರಳುವ ವಿಮಾನಗಳು ಹಾಗೂ ಅಲ್ಲಿನ ಹೋಟೆಲ್‌ ಕೋಣೆಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿ ದರ ಹೆಚ್ಚಳವಾಗಿದೆ.

ಜೂನ್‌ 21ರಂದು ಮೋದಿ ಅವರು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಅವರು ಅಮೆರಿಕ ಅಧ್ಯಕ್ಷರ ಆತಿಥ್ಯ ಸ್ವೀಕರಿಸಲಿದ್ದಾರೆ. ಮರುದಿನ ಅಂದರೆ ಜೂನ್‌ 22ರಂದು ಶ್ವೇತಭವನದಲ್ಲಿ ಅವರಿಗೆ 21 ಕುಶಾಲತೋಪು ಸಿಡಿಸಿ ಅಧಿಕೃತವಾಗಿ ಬರಮಾಡಿಕೊಳ್ಳಲಾಗುತ್ತದೆ. ಶ್ವೇತಭವನದ ಹುಲ್ಲು ಹಾಸಿನ ಮೇಲೆ ನಡೆಯುವ ಈ ವೈಭವದ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಅಮೆರಿಕದ ವಿವಿಧೆಡೆ ನೆಲೆಸಿರುವ ಭಾರತೀಯರು ವಾಷಿಂಗ್ಟನ್‌ನತ್ತ ದೌಡಾಯಿಸಲು ಮುಂದಾಗಿದ್ದಾರೆ.

ಇದನ್ನು ಓದಿ: ಮನ್ ಕೀ ಬಾತ್‌ ಮಾಡಲು ಬಂದಿಲ್ಲ, ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ: ಮೋದಿ ವಿರುದ್ಧ ರಾಹುಲ್‌ ವ್ಯಂಗ್ಯ

ಮೋದಿ ಅವರನ್ನು ಸ್ವಾಗತಿಸುವ ಸಮಾರಂಭ ನಡೆಯುವ ವಾಷಿಂಗ್ಟನ್‌ಗೆ ಭಾರತೀಯ ಸಂಘಟನೆಗಳ ಒಕ್ಕೂಟಗಳು ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿಯಿಂದ ಜೂನ್  22ರ ಬೆಳ್ಳಂಬೆಳಗ್ಗೆಯಿಂದಲೇ ಬಸ್‌ಗಳಿಗೆ ವ್ಯವಸ್ಥೆ ಮಾಡಿವೆ. ಇದಲ್ಲದೆ ಮೋದಿ ಆಗಮಿಸುವ ವಿಮಾನ ನಿಲ್ದಾಣ, ಭೇಟಿ ನೀಡುವ ಸ್ಥಳಗಳಿಗೆಲ್ಲಾ ಹೋಗಿ ಹತ್ತಿರದಿಂದ ಅವರನ್ನು ಕಣ್ತುಂಬಿಕೊಳ್ಳಲು ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ.

ಇದೇ ವೇಳೆ, ಮೋದಿ ಅವರಿಗಾಗಿ ಭಾರತೀಯ ಅಮೆರಿಕನ್‌ ಸಮುದಾಯ ಜೂನ್‌ 23ರಂದು ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ರೋನಾಲ್ಡ್‌ ರೇಗನ್‌ ಕಟ್ಟಡದಲ್ಲಿ ಔತಣಕೂಟವನ್ನು ಕೂಡ ಏರ್ಪಡಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜಗತ್ತಿನ ಎಲ್ಲೆಡೆ ಗೌರರ್ವಕ್ಕೆ ಅರ್ಹರು; ಆ ಬಗ್ಗೆ ಹೆಮ್ಮೆ ಇದೆ: ಕಾಂಗ್ರೆಸ್‌ ನಾಯಕನ ಅಚ್ಚರಿಯ ಹೇಳಿಕೆ

ಮೋದಿಗಾಗಿ ಅಮೆರಿಕ ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ
ಜೂನ್ 21ರಿಂದ ಜೂನ್ 24ರವರೆಗೆ ಅಮೆರಿಕಕ್ಕೆ ಮೊದಲ ಅಧಿಕೃತ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ದಂಪತಿ ನಿರ್ಧರಿಸಿದ್ದಾರೆ. ಮೋದಿ ಅವರು ಅಮೆರಿಕಕ್ಕೆ ಬಂದಿಳಿಯುವ ದಿನವೇ ಶ್ವೇತಭವನದಲ್ಲಿ ಬೈಡೆನ್‌- ಜಿಲ್‌ ಬೈಡೆನ್‌ ದಂಪತಿ ಮೋದಿ ಅವರಿಗಾಗಿ ಆತ್ಮೀಯ ಔತಣಕೂಟವೊಂದನ್ನು ಏರ್ಪಡಿಸಿದ್ದಾರೆ. ತನ್ಮೂಲಕ ಮೋದಿ ಅವರಿಗೆ ವಿಶೇಷ ಗೌರವ ನೀಡಲು ಮುಂದಾಗಿದ್ದಾರೆ.

ಜೂನ್ 21ರಂದು ಮೋದಿ ಅವರು ನ್ಯೂಯಾರ್ಕ್‌ಗೆ ಆಗಮಿಸಿ ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗದಿನದಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಜೋ ಬೈಡೆನ್‌ ಅವರ ಮನೆಯಲ್ಲಿ ಮೋದಿ ಅವರ ಔತಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಜೂನ್‌ನಲ್ಲಿ ಅಮೆರಿಕಕ್ಕೆ ಮೋದಿ ಮೊದಲ ಅಧಿಕೃತ ಭೇಟಿ..! ಪ್ರಧಾನಿ ಮೋದಿಗೆ ಅಮೆರಿಕದ ವಿಶೇಷ ಗೌರವ

ಮರುದಿನ ಬೆಳಗ್ಗೆ ಶ್ವೇತಭವನದ ಹುಲ್ಲುಹಾಸಿನ ಮೇಲೆ ಮೋದಿ ಅವರಿಗೆ 21 ಕುಶಾಲ ತೋಪು ಹಾರಿಸಿ ಅಮೆರಿಕ ಸರ್ಕಾರದ ವತಿಯಿಂದ ಅಧಿಕೃತ ಆಹ್ವಾನವನ್ನು ಕೋರಲಾಗುತ್ತದೆ. ಇಡೀ ದಿನ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಸಂಜೆ ಶ್ವೇತಭವನದಲ್ಲಿ ಅಧಿಕೃತ ಔತಣಕೂಟಕ್ಕಾಗಿ ಟೆಂಟ್‌ ವ್ಯವಸ್ಥೆ ಮಾಡಲಾಗುತ್ತದೆ. ಆ ಔತಣದಲ್ಲಿ ಮೋದಿ ಅವರ ಜತೆ ಭಾಗಿಯಾಗಲು ಅಮೆರಿಕದಲ್ಲಿ ಟಿಕೆಟ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಎಷ್ಟು ಮಂದಿ ಈ ಔತಣ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಯಾರ್ಯಾರು ಬರುತ್ತಾರೆ ಎಂಬ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ. ಈ ಡಿನ್ನರ್‌ ಸಭೆ ವೈಭವೋಪೇತವಾಗಿ ನಡೆಯಲಿದ್ದು, ಕನಿಷ್ಠ 120ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಇದಾದ ಬಳಿಕ ಜೂನ್ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹಾಗೂ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಕೂಡ ಮೋದಿಗಾಗಿ ಔತಣಕೂಟ ಏರ್ಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್‌ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್‌ ಫಿಕ್ಸ್‌..!

Latest Videos
Follow Us:
Download App:
  • android
  • ios