ಬರೋಬ್ಬರಿ 14000 ರೂ. ತಲುಪಿದ ದೆಹಲಿ - ಮುಂಬೈ ವಿಮಾನ ದರ: ವಿಶ್ವದಲ್ಲೇ ದುಬಾರಿ ಬೆಲೆಗೆ ಕಾರಣ ಇಲ್ಲಿದೆ..

ಮುಂಬೈ ಮತ್ತು ದೆಹಲಿ ಮೊದಲಿನಿಂದಲೂ ದೇಶದಲ್ಲಿ ಅತ್ಯಂತ ಜನದಟ್ಟಣೆಯ ವಿಮಾನ ಸಂಚಾರ ಮಾರ್ಗವಾಗಿದೆ. ಭಾರತ ಮಾತ್ರವಲ್ಲದೇ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇಂಡೋನೇಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಲ್ಲೂ ವಿಮಾನದ ಟಿಕೆಟ್‌ ದರ ಭಾರೀ ಏರಿಕೆ ಕಂಡಿದೆ

delhi mumbai flight ticket airfares goes as high as rs 14k between two cities ash

ನವದೆಹಲಿ (ಜೂನ್ 14, 2023): ಭಾರತದಲ್ಲಿ ದೆಹಲಿ ಹಾಗೂ ಮುಂಬೈ ನಡುವಿನ ವಿಮಾನ ಟಿಕೆಟ್‌ ದರವು ಗಗನಕ್ಕೇರಿದ್ದು, ಪ್ರಸಕ್ತ ಟಿಕೆಟ್‌ ದರ 14,000 ರೂ.ಗೆ ತಲುಪಿದೆ. ಇದು ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ದೇಶದೊಳಗೆ ಎರಡು ನಗರಗಳ ನಡುವಿನ ಅತಿ ದುಬಾರಿ ಟಿಕೆಟ್‌ ದರದ ಪೈಕಿ ಒಂದೆನ್ನಲಾಗಿದೆ. 

ಮುಂಬೈ ಮತ್ತು ದೆಹಲಿ ಮೊದಲಿನಿಂದಲೂ ದೇಶದಲ್ಲಿ ಅತ್ಯಂತ ಜನದಟ್ಟಣೆಯ ವಿಮಾನ ಸಂಚಾರ ಮಾರ್ಗವಾಗಿದೆ. ಭಾರತ ಮಾತ್ರವಲ್ಲದೇ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇಂಡೋನೇಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಲ್ಲೂ ವಿಮಾನದ ಟಿಕೆಟ್‌ ದರ ಭಾರೀ ಏರಿಕೆ ಕಂಡಿದೆ. ಇನ್ನು ಒಟ್ಟಾರೆ ವಿಮಾನ ದರ ಏರಿಕೆಯಲ್ಲೂ ಭಾರತ ಅಗ್ರಸ್ಥಾನ ಪಡೆದಿದ್ದು, ಭಾರತ ಶೇ.41ರಷ್ಟು, ಯುಎಇ ಶೇ. 34ರಷ್ಟು, ಸಿಂಗಾಪುರ ಶೇ. 30ರಷ್ಟು ಹಾಗೂ ಆಸ್ಪ್ರೇಲಿಯಾ ಶೇ. 23ರಷ್ಟು ಬೆಲೆ ಏರಿಕೆಯಾಗಿದೆ.

ಇದನ್ನು ಓದಿ: ಗೋ ಫಸ್ಟ್‌ ವಿಮಾನ ಸೇವೆ ದಿವಾಳಿ ಎಫೆಕ್ಟ್‌: ದೇಶದಲ್ಲಿ ವಿಮಾನ ಟಿಕೆಟ್‌ ದರ 4 - 6 ಪಟ್ಟು ಹೆಚ್ಚಳ

ಈ ಮಧ್ಯೆ, ದೆಹಲಿಯಿಂದ ಮುಂಬೈಗೆ ನೀವೂ ಸಹ ವಿಮಾನದಲ್ಲಿ ಪ್ರಯಾಣ ಮಾಡಲು ಬಯಸಿದ್ರೆ, ಫ್ಲೈಟ್ ಟಿಕೆಟ್‌ಗಳ ಬೆಲೆಗಳು ಗಗನಕ್ಕೇರುತ್ತಿರುವ ಕಾರಣ ಮುಂಗಡವಾಗಿ ಬುಕ್ ಮಾಡಬೇಕು ಎಂಬುದು ನಮ್ಮ ಸಲಹೆ. ಪ್ರಸ್ತುತ, 24-ಗಂಟೆಗಳ ಮುಂಗಡ ತಡೆರಹಿತ ವಿಮಾನ ಟಿಕೆಟ್ ದರ 14,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಸಿಗುತ್ತಿದೆ. ಈ ಹಿನ್ನೆಲೆ ಇದು ವಿಶ್ವಾದ್ಯಂತ ದುಬಾರಿ ದೇಶೀಯ ಟಿಕೆಟ್ ಎಂದು ಪರಿಗಣಿಸಲಾಗಿದೆ.

ವಿಮಾನ ಪ್ರಯಾಣಿಕರೊಬ್ಬರು ಅದೇ ಮಾರ್ಗದಲ್ಲಿ ಏಕಮುಖ ಟಿಕೆಟ್‌ಗಾಗಿ ಹುಡುಕುತ್ತಿದ್ದ ವೇಳೆ 11,000 ರೂ. ಗಳ ಅಗ್ಗದ ಟಿಕೆಟ್ ಅನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ರುಪಾಯಿ ಮೌಲ್ಯ ಕುಸಿಯುತ್ತಿದ್ದರೂ ಸಹ, US, UK, ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾದ ಜನನಿಬಿಡ ದೇಶೀಯ ಮಾರ್ಗಗಳಲ್ಲಿ ಭಾರತೀಯ ಪ್ರಯಾಣಿಕ ಕೊನೆಯ ಕ್ಷಣದಲ್ಲಿ ಉತ್ತಮ ವ್ಯವಹಾರಗಳನ್ನು ಕಂಡುಕೊಳ್ಳುತ್ತಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ಭೇಟಿ ಸಂಚಲನ: ಹೋಟೆಲ್‌, ವಿಮಾನ ಪ್ರಯಾಣದ ದರ ಭಾರಿ ಏರಿಕೆ; ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ

ಟಿಕೆಟ್ ದರ ಏಕೆ ಹೆಚ್ಚುತ್ತಿದೆ?
ಜೂನ್‌ನಲ್ಲಿ ಉತ್ತರ ಭಾರತದಲ್ಲಿ ಬೇಸಿಗೆ ರಜೆ ಪ್ರಾರಂಭವಾಗುವ ಕಾರಣ. ವಿಮಾನ ಪ್ರಯಾಣದ ಬೇಡಿಕೆಯೂ ಹೆಚ್ಚಾಗಿದೆ. ಇದರಿಂದ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ಮಾರ್ಗಗಳಿಗೆ ಟಿಕೆಟ್ ದರಗಳನ್ನು ಹೆಚ್ಚಿಸಲು ಕಾರಣವಾಗಿದೆ.

ಇಂಧನ ಬೆಲೆಗಳ ಏರಿಕೆ ಮತ್ತು ಹಣದುಬ್ಬರವು ವಿಮಾನ ಪ್ರಯಾಣ ದರಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. 2019 ಕ್ಕೆ ಹೋಲಿಸಿದರೆ 2022 ರಲ್ಲಿ ಇಂಧನ ವೆಚ್ಚವು ಶೇಕಡಾ 76 ರಷ್ಟು ಭಾರಿ ಏರಿಕೆ ಕಂಡಿದೆ. ಇದರ ಹೊರತಾಗಿ, ದೇಶದ ಮೂರನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದ ಗೋ ಫಸ್ಟ್ ಏರ್‌ಲೈನ್ಸ್‌ ಸೇವೆ ತಾತ್ಕಾಲಿಕ ಬಂದ್‌ ಆಗಿದ್ದು ಹಾಗೂ ಕಂಪನಿ ಮುಳುಗುವ ಭೀತಿಯಲ್ಲಿರುವುದು ಸಹ ವಿಮಾನ ದರ ಹಠಾತ್ ಏರಿಕೆಗೆ ಮತ್ತೊಂದು ಅಂಶವೆಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ: ಗಗನಸಖಿ ಬಂದ್ರು ಅಂತ ತಕ್ಷಣ ಹಲ್ಲು ಕಿರೀಬೇಡಿ: ಈ ವಿಮಾನದ ಪುರುಷ ಸಿಬ್ಬಂದಿಗೂ ಮೇಕಪ್‌ಗೆ ಅವಕಾಶ!

Latest Videos
Follow Us:
Download App:
  • android
  • ios