ಜಮ್ಮು ಕಾಶ್ಮಿರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾಗೆ ಕೊರೋನಾ| ಟ್ವೀಟ್ ಮಾಡಿ ಮಾಹಿತಿ ನೀಡಿದ ಮಗ ಓಮರ್| ಬೇಗ ಗುಣಮುಖರಾಗಿ ಎಂದ ಪಿಎಂ ಮೋದಿ

ಶ್ರೀನಗರ(ಮಾ.30): ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರಿಗೆ ಕೊರೋನಾ ಸೋಂಕು ತಗುಲಿದೆ. ಈ ಬಗ್ಗೆ ಅವರ ಮಗ ಒಮರ್‌ ಅಬ್ದುಲ್ಲಾ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಇನ್ನು ಕಳೆದ 28 ದಿನಗಳ ಹಿಂದಷ್ಟೇ ಫಾರೂಕ್‌ ಅಬ್ದುಲ್ಲಾ ಕೊರೋನಾ ಲಸಿಕೆಯ ಮೊದಲ ಡೋಸ್‌ ಪಡೆದಿದ್ದರು ಎಂಬುವುದು ಉಲ್ಲೇಖನೀಯ,.

ಉದ್ರಿಕ್ತ ಮುಲ್ಲಾಗಳಿಂದ ಅಹಮ್ಮದಿ ಮಸೀದಿ ಧ್ವಂಸ; ಕೃತ್ಯಕ್ಕೆ ಪಾಕಿಸ್ತಾನ ಪೊಲೀಸ್ ನೆರವು!

ತಂದೆಗೆ ಕೊರೋನಾ ಸೋಂಕು ತಗುಲಿರುವ ಕುರಿತು ಟ್ವೀಟ್ ಮಾಡಿರುವ ಒಮರ್‌ ಅಬ್ದುಲ್ಲಾ 'ನನ್ನ ತಂದೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ ಸೋಂಕಿನ ಕೆಲ ಲಕ್ಷಣಗಳು ಕಂಡು ಬಂದಿವೆ. ಈ ನಿಟ್ಟಿನಲ್ಲಿ ನಾನು ಹಾಗೂ ನನ್ನ ಕುಟುಂಬ ಸದಸ್ಯರು ಐಸೋಲೇಟ್‌ ಆಗುತ್ತಿದ್ದು, ಕೊರೋನಾ ಪರೀಕ್ಷೆಗೊಳಪಡಲಿದ್ದೇವೆ. ಹೀಗಿರುವಾಗ ಕೆಲ ದಿನಗಳಿಂದ ನಮ್ಮ ಸಂಪರ್ಕದಲ್ಲಿದ್ದವರು ಕೊರೋನಾ ಟೆಸ್ಟ್ ಮಾಡಿಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ' ಎಂದು ಬರೆದಿದ್ದಾರೆ. 

Scroll to load tweet…

ಇನ್ನು ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿ ಪಿಎಂ ಮೋದಿ ಟ್ವೀಟ್‌ ಮಾಡಿದ್ದು, ಡಾ. ಫಾರೂಕ್‌ ಅಬ್ದುಲ್ಲಾರವರು ಶೀಘ್ರವಾಗಿ ಗುಣಮುಖರಾಗಲಿ, ಅವರಿಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೊತೆಗೆ ನಿಮ್ಮ(ಒಮರ್ ಅಬ್ದುಲ್ಲಾ) ಹಾಗೂ ನಿಮ್ಮ ಕುಟುಂಬ ಸದಸ್ಯರಿಗೂ ಉತ್ತಮ ಆರೋಗ್ಯ ದೇವರು ಕರುಣಿಸಲಿ' ಎಂದು ಆಶಿಸಿದ್ದಾರೆ.

ಕಾಶ್ಮೀರ ನಿವಾಸಿ ಪ್ರಮಾಣ ಪತ್ರ ಪಡೆದ ಬೆನ್ನಲ್ಲೇ ಪಂಜಾಬಿ ಆಭರಣ ವ್ಯಾಪರಿ ಹತ್ಯೆ!

ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ 

1937ರ ಅಕ್ಟೋಬರ್ 21ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದ ಡಾ. ಫಾರೂಕ್‌ ಅಬ್ದುಲ್ಲಾ MBBS ಪದವೀಧರರು. ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿರುವ ಫಾರೂಕ್ ಅಬ್ದುಲ್ಲಾ, 1982 ರಿಂದ 2002ರ ನಡುವೆ ಕಣಿವೆ ನಾಡು ಜಮ್ಮು ಕಾಶ್ಮೀರದ ಸಿಎಂ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದಾದ ಬಳಿಕ 2009 ರಿಂದ 2014ರವರೆಗೆ ಮನಮೋಹನ್ ಸಿಂಗ್ ಅವಧಿಯಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಕೊರೋನಾ ಲಸಿಕೆ ಮೊದಲ ಡೋಸ್ ಪಡೆದಿದ್ದರು 

ಶ್ರೀನಗರದಿಂದ ಲೋಕಸಭಾ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾ ಮಾರ್ಚ್ 2ರಂದು ಶೇರ್-ಎ-ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದರು. ಕಳೆದ ಮಂಗಳವಾರ 85 ವರ್ಷ ವಯಸ್ಸಿನ ಫರೂಕ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲೂ ಪಾಲ್ಗೊಂಡಿದ್ದರೆಂಬುವುದು ಉಲ್ಲೇಖನೀಯ.