ಮಿಶ್ರ ಕೋವಿಡ್ ಲಸಿಕೆ ನೀಡುವ ಕುರಿತು ಸರ್ಕಾರ ಚಿಂತನೆ; ಅಧ್ಯಯನ ವರದಿ ಆಧರಿಸಿ ನಿರ್ಧಾರ!
- ಸದ್ಯ ದೇಶದಲ್ಲಿ ಕೋವಿಡ್ ಲಸಿಕೆ ಅಭಾವ ಎದ್ದುಕಾಣುತ್ತಿದೆ
- ಹೀಗಾಗಿ ಬೇರೆ ಬೇರೆ ಕಂಪನಿಗಳ ಡೋಸ್ ನೀಡುವ ಕುರಿತು ಚಿಂತನೆ
- ಸರ್ಕಾರದ ಚಿಂತನೆಗ ಕಾರಣವಾಯ್ತು ಸ್ಪೇನ್, ಯುಕೆ ಅಧ್ಯಯನ
ನವದೆಹಲಿ(ಮೇ.21): ಕೊರೋನಾ ವೈರಸ್ ವಿರುದ್ಧದ ಹೋರಾಟ ಗೆಲ್ಲಲು ಭಾರತ ಸರ್ಕಾರ ಎಲ್ಲಾ ದಾರಿಗಳನ್ನು ಬಳಸಿಕೊಳ್ಳುತ್ತಿದೆ. ಸದ್ಯ ಕೊರೋನಾ ಲಸಿಕೆ ಅಭಾವದಿಂದ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಈ ಕೊರತೆ ನೀಗಿಸಲು ಇದೀಗ ಮಿಶ್ರ ಲಸಿಕೆ ನೀಡುವಿಕೆ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಆಸೀಸ್ ಕೋವಿಡ್ ಔಷಧ ಇಲಿಗಳ ಮೇಲೆ ಯಶಸ್ವಿ: ವೈರಸ್ 99.9% ಕಡಿಮೆ ಮಾಡಿದ ಔಷಧ!
ಮಿಶ್ರ ಲಸಿಕೆ ನೀಡುವ ಕುರಿತು ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ((NTAGI) ಈ ಕುರಿತು ಅಧ್ಯಯನ ವರದಿಗಳ ಪರಿಶೀಲನೆಯಲ್ಲಿ ತೊಡಗಿದೆ. ಯುಕೆ ಹಾಗೂ ಸ್ಪೇನ್‌ನಲ್ಲಿ ಈ ರೀತಿ ಬೇರೆ ಬೇರೆ ಕಂಪನಿಗಳ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ.
ಸ್ಪಾನೀಶ್ ಆರೋಗ್ಯ ಇಲಾಖೆ ಫೈಜರ್ ಹಾಗೂ ಬಯೋಎನ್‌ಟೆಕ್ ಲಸಿಕೆಯನ್ನು ಮಿಶ್ರವಾಗಿ ನೀಡಿದೆ. ಮೊದಲ ಡೋಸ್ ಫೈಜರ್ ನೀಡಿದ್ದರೆ, ಎರಡನೇ ಡೋಸ್ ಬಯೋಎನ್‌ಟೆಕ್ ಲಸಿಕೆ ನೀಡಿದೆ. 400 ಮಂದಿಗೆ ಈ ರೀತಿ ಲಸಿಕೆ ನೀಡಲಾಗಿದೆ. ಇದರಲ್ಲಿ 200 ಮಂದಿಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ನೂತನ ಹೆಜ್ಜೆ: ಗಡ್ಕರಿ ಮೆಚ್ಚುಗೆ!.
ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅಡ್ಡಪರಿಣಾಮಗಳ ಕುರಿತು ಸಂಶೋಧನೆ ಹಾಗೂ ಅಧ್ಯಯನ ನಡೆಸಲಾಗಿದೆ. ಮಿಶ್ರ ಲಸಿಕೆ ಪಡೆದವರಲ್ಲಿ ಹೆಚ್ಚಿನ ಸಮಸ್ಯೆಗಳೇನು ಕಂಡುಬಂದಿಲ್ಲ. ಇತ್ತ ಯುಕೆಯಲ್ಲೂ ಇದೇ ರೀತಿ ಪ್ರಯೋಗಳನ್ನು ನಡೆಸಲಾಗಿದೆ.
ಈ ವರದಿಗಳೇ ಇದೀಗ ಭಾರತದಲ್ಲೂ ಪ್ರಯೋಗ ಮಾಡಲು ಚಿಂತನೆ ನಡೆಸಿದೆ. ಆದರೆ ಸದ್ಯ ಲಸಿಕೆ ಅಭಾವವಿದ್ದರೂ ಇನ್ನು 3 ತಿಂಗಳಲ್ಲಿ ಎಲ್ಲಾ ರಾಜ್ಯಗಳಿಗೆ ಲಸಿಕೆ ಪೂರೈಕೆಯಾಗಲಿದೆ. ಇತ್ತ ಮಿಶ್ರ ಲಸಿಕೆ ಪ್ರಯೋಗ ಹಾಗೂ ಅನುಮೋದನೆ ಪಡೆಯಲು ಭಾರತದಲ್ಲಿ ಕನಿಷ್ಠ 4 ರಿಂದ 6 ತಿಂಗಳ ಅವಶ್ಯಕತೆ ಇದೆ.