ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ತುರ್ತು ಕಾಂಗ್ರೆಸ್ ಸಭೆ ಕರೆದ ಸೋನಿಯಾ ಗಾಂಧಿ!
ಸೋನಿಯಾ ಗಾಂಧಿ ಆರೋಗ್ಯ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮರುದಿನವೇ ತುರ್ತು ಕಾಂಗ್ರೆಸ್ ಸಂಸದೀಯ ಸಮಿತಿ ಸಭೆ ಕರೆದಿದ್ದಾರೆ. ಸೋನಿಯಾ ಗಾಂಧಿ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ
ನವದೆಹಲಿ(ಸೆ.04) ಕಾಂಗ್ರೆಸ್ ಪಶ್ರದ ಮುಖ್ಯಸ್ಥೆ ಸೋನಿಯಾ ಗಾಂಧಿ ತುರ್ತು ಕಾಂಗ್ರೆಸ್ ಸಂಸದೀಯ ಸಮಿತಿ ಸಭೆ ಕರೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದ ಸೋನಿಯಾ ಗಾಂಧಿ ನಿನ್ನೆ(ಸೆ.03) ಬಿಡುಗಡೆಯಾಗಿದ್ದಾರೆ. ಮನೆಗೆ ಮರಳಿದ ಬೆನ್ನಲ್ಲೇ ಸೋನಿಯಾ ಗಾಂಧಿ ತುರ್ತು ಸಭೆ ಕರೆದಿದ್ದಾರೆ. ಅತ್ತ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಇತ್ತ ಕಾಂಗ್ರೆಸ್ ಅಧಿವೇಶನಕ್ಕೂ ಮೊದಲು ಕುರ್ತು ಸಭೆ ನಡೆಸಿ ರೂಪುರೇಶೆ ಸಿದ್ಧತೆ ನಡೆಸಲು ಪ್ಲಾನ್ ಮಾಡಿದೆ. ನಾಳೆ(ಸೆ.05)ಕ್ಕೆ ಕಾಂಗ್ರೆಸ್ ತುರ್ತು ಸಭೆ ನಡೆಯಲಿದೆ.
ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರದೆ ಬೆನ್ನಲ್ಲೇ ಸೋನಿಯಾ ಗಾಂಧಿ ಅಧಿವೇಶನದಲ್ಲಿನ ಚರ್ಚಾ ವಿಷಯ, ಕಾಂಗ್ರೆಸ್ ನಿಲುವ ಹಾಗೂ ಚರ್ಚೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ವಿಶೇಷ ಅಧಿವೇಶನ ಮುಂದಿಡುವ ಪ್ರಶ್ನೆ, ಸರ್ಕಾರವನ್ನು ಇಕ್ಕಟ್ಟಿಗೆ ಸುಲಿಸಲು ರಣತಂತ್ರ ರೂಪಿಸಲು ಈ ಸಭೆ ಕರೆಯಲಾಗಿದೆ.
ಕಾಂಗ್ರೆಸ್ ಸೇರ್ಪಡೆ ಗುಸುಗುಸು ಬೆನ್ನಲ್ಲೇ ಸೋನಿಯಾ ಜತೆ ಶರ್ಮಿಳಾ ಭೇಟಿ
ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಂಸದರು, ಇಂಡಿಯಾ ಮೈತ್ರಿ ಒಕ್ಕೂಟದ ಸಂಸದರ ಸಭೆ ಕೆರದಿದ್ದಾರೆ. ಮೈತ್ರಿ ಒಕ್ಕೂಟ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕಾದ ವಿಷಯ ಹಾಗೂ ಪ್ರಶ್ನೆಗಳು ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಿಪಕ್ಷಗಳು ಅನುಸರಿಸಬೇಕಾದ ಕಾರ್ಯತಂತ್ರವನ್ನು ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ದೆಹಲಿಯ ರಾಜಾಜಿ ನಗರದಲ್ಲಿರುವ ಖರ್ಗೆ ನಿವಾಸಲ್ಲಿಯೇ ಈ ಸಭೆ ಆಯೋಜಿಸಲಾಗಿದೆ. ಸೆಪ್ಟೆಂಬರ್ 5 ರಂದು ಈ ಸಭೆ ನಡೆಯಲಿದೆ. ಇದಕ್ಕೂ ಮೊದಲು ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೀಯ ರೂಪುರೇಶೆ ಸಮಿತಿ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ್ 18 ರಿಂದ 22ರ ವರೆಗೆ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ವಿಶೇಷ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಖಾಸಗಿ ಮಸೂದೆ ಮಂಡನೆ ಇರುವುದಿಲ್ಲ ಎಂದು ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯ ತಿಳಿಸಿದೆ. ‘17ನೇ ಲೋಕಸಭೆಯ 13ನೇ ಅಧಿವೇಶನ ಸೆ.18ರ ಸೋಮವಾರ ಆರಂಭವಾಗಲಿದೆ. ರಾಜ್ಯಸಭೆಯ 261ನೇ ಅಧಿವೇಶನವೂ ಸೋಮವಾರ ಆರಂಭವಾಗಲಿದೆ. ಹಾಗೆಯೇ 5 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಕಲಾಪದ ಕುರಿತಾಗಿ ಸದಸ್ಯರಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು ಎಂದು ಸದಸ್ಯರಿಗೆ ತಿಳಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.
ಲೋಕಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಗಂಡನಿಂದಲೇ ಸುಳಿವು
ವಿಶೇಷ ಅಧಿವೇಶನ ಕರೆದ ಬೆನ್ನಲ್ಲೇ ಲೋಕಸಭೆ ಚುನಾವಣೆ ಬೇಗನೆ ನಡೆಸಲು ಆಯೋಜಿಸಲಾಗಿದೆ ಅನ್ನೋ ಆರೋಪಗಳಿಗೂ ಕೇಂದ್ರ ಸ್ಪಷ್ಟನೆ ನೀಡಿದೆ. ಲೋಕಸಭೆ ಚುನಾವಣೆ ನಿಗಧಿತ ಸಮಯದಲ್ಲೇ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಅಧಿವೇಶನಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.