ಲೋಕಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಗಂಡನಿಂದಲೇ ಸುಳಿವು

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಕುರಿತು ಪ್ರಿಯಾಂಕಾ ಪತಿ  ವಾದ್ರಾ ಅವರು ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ.

Robert Vadra hints at Priyanka Gandhi contest for Lok Sabha election 2024 gow

ನವದೆಹಲಿ (ಆ.14): ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಳಿವನ್ನು ಅವರ ಪತಿ ರಾಬರ್ಟ್ ವಾದ್ರಾ ಸಂದರ್ಶನವೊಂದರಲ್ಲಿ  ನೀಡಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ವಾದ್ರಾ,‘ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನಲ್ಲಿ ತುಂಬಾ ಉತ್ತಮ ಪಟು ಆಗಬಹುದು. ಪಕ್ಷವು ಅವರಿಗಾಗಿ ಉತ್ತಮವಾದದ್ದನ್ನು ನೀಡಲು ಯೋಜಿಸುತ್ತಿದೆ. ಅವರು ಲೋಕಸಭೆಯಲ್ಲಿ ಖಂಡಿತ ಇರಬೇಕು. ಆ ಎಲ್ಲ ಅರ್ಹತೆಗಳು ಅವರಿಗಿವೆ’ ಎಂದಿದ್ದಾರೆ. ‘ಪ್ರಿಯಾಂಕಾ ಸಂಸತ್‌ ಸದಸ್ಯರಾಗಲು ಅರ್ಹರು. ಕಾಂಗ್ರೆಸ್‌ ಅವರನ್ನು ಸ್ವೀಕರಿಸುತ್ತದೆ ಎಂಬ ಭಾವನೆ ನನ್ನದು’ ಎಂದೂ ಹೇಳಿದ್ದಾರೆ.

ಸದ್ಯ ಪ್ರಿಯಾಂಕಾ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರದಲ್ಲಿ ಪ್ರಿಯಾಂಕಾ ಕ್ರಿಯಾಶೀಲರಾಗಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಅಬ್ಬರದ ಪ್ರಚಾರ ನಡೆಸುತ್ತಾರೆ.

Latest Videos
Follow Us:
Download App:
  • android
  • ios