ಕಾಂಗ್ರೆಸ್‌ ಸೇರ್ಪಡೆ ಗುಸುಗುಸು ಬೆನ್ನಲ್ಲೇ ಸೋನಿಯಾ ಜತೆ ಶರ್ಮಿಳಾ ಭೇಟಿ

ಕಾಂಗ್ರೆಸ್‌ ಸೇರ್ಪಡೆ ಗುಸುಗುಸು ಬೆನ್ನಲ್ಲೇ ಸೋನಿಯಾ ಭೇಟಿ ಮಾಡಿದ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸೋದರಿ ವೈ.ಎಸ್‌. ಶರ್ಮಿಳಾ

Y S Jagan Mohan Reddy sister Sharmila meets Congress Leader Sonia gandhi after rumours of joining Congress gow

ನವದೆಹಲಿ (ಸೆ.1): ಕಾಂಗ್ರೆಸ್‌ ಪಕ್ಷದೊಂದಿಗೆ ವೈಎಸ್ಸಾರ್‌ ತೆಲಂಗಾಣ ಪಕ್ಷದ ನಾಯಕಿ ವೈ.ಎಸ್‌. ಶರ್ಮಿಳಾ ಅವರು ತಮ್ಮ ಪಕ್ಷ ವಿಲೀನ ಮಾಡಲಿದ್ದಾರೆ ಎನ್ನುವ ಸುದ್ದಿಗಳ ನಡುವೆಯೇ ಶರ್ಮಿಳಾ ಅವರು ಗುರುವಾರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ಸೋನಿಯಾ ಅವರ 10 ಜನಪಥ್‌ ನಿವಾಸಕ್ಕೆ ಆಗಮಿಸಿದ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸೋದರಿಯೂ ಆದ ಶರ್ಮಿಳಾ ಸುಮಾರು ಅರ್ಧ ಗಂಟೆ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಶರ್ಮಿಳಾ ಅವರ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಅದಾನಿ ಕಂಪನಿ ವಿರುದ್ಧ ಮತ್ತೊಂದು ಆರೋಪ, ಅಮೆರಿಕದ ಸಂಸ್ಥೆಯಿಂದ ಭಾರೀ ಪ್ರಮಾಣದ

ಭೇಟಿ ಬಳಿಕ ಮಾತನಾಡಿ ಶರ್ಮಿಳಾ, ‘ಸೋನಿಯಾ ಜತೆ ಧನಾತ್ಮಕ ಚರ್ಚೆ ನಡೆದಿದೆ. ವೈಎಸ್ಸಾರ್‌ ಅವರ ಮಗಳಾಗಿ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಕೆಸಿಆರ್‌ ಅವರ ಪತನದ ಕ್ಷಣಗಣನೆ ಆರಂಭವಾಗಿದೆ’ ಎಂದರು. ಆದರೆ ಕಾಂಗ್ರೆಸ್‌ ಸೇರ್ಪಡೆ ಅಥವಾ ಮೈತ್ರಿ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.

ವೈಎಸ್‌ಆರ್ ತೆಲಂಗಾಣ ಕಾಂಗ್ರೆಸ್ ಪಕ್ಷದ ವಕ್ತಾರ ಕೊಂಡ ರಾಘವ ರೆಡ್ಡಿ  ವೈಎಸ್‌ಆರ್‌ಟಿಪಿಯ ಯಾವುದೇ ನಾಯಕರು ಅಥವಾ ಕಾರ್ಯಕರ್ತರಿಗೆ ಅವರ ದೆಹಲಿ ಪ್ರವಾಸ ಮತ್ತು ಗಾಂಧಿ ಕುಟುಂಬವನ್ನು ಭೇಟಿಯಾದ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.

ಮೊದಲ ಬಾರಿ ಚಂದ್ರನ ಮೇಲಿನ ಕಂಪನ ಪತ್ತೆ, ಚಂದಮಾಮನ ಉಲ್ಲೇಖ ಮಾಡಿದ ಇಸ್ರೋ

ತೆಲಂಗಾಣದ ಪಲೈರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶರ್ಮಿಳಾ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದರು. ಆಂಧ್ರಪ್ರದೇಶದಲ್ಲಿ 2019 ರ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಅವರು ತಮ್ಮ ಒಡಹುಟ್ಟಿದ ಜಗನ್ ಮೋಹನ್ ರೆಡ್ಡಿಗಾಗಿ ತೀವ್ರವಾಗಿ ಪ್ರಚಾರ ಮಾಡಿದರು ಮತ್ತು ನಂತರ ತೆಲಂಗಾಣದಲ್ಲಿ ತಮ್ಮದೇ ಪಕ್ಷವಾದ YSRTP ಅನ್ನು ಸ್ಥಾಪಿಸಿದರು.

ಜಗನ್ ಮತ್ತು ಶರ್ಮಿಳಾ ಅವರ ತಂದೆ, ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರು ಕಾಂಗ್ರೆಸ್ ಕಟ್ಟಾಳು ಮತ್ತು ಅವಿಭಜಿತ ಆಂಧ್ರಪ್ರದೇಶದ ಎರಡು ಬಾರಿ ಸಿಎಂ ಆಗಿದ್ದರು.  ಕಳೆದ ಕೆಲವು ತಿಂಗಳುಗಳಿಂದ ಶರ್ಮಿಳಾ ಅವರು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಂತಹ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಜೂನ್ ಆರಂಭದಲ್ಲಿ, ಅವರು ವೈಎಸ್‌ಆರ್‌ಟಿಪಿಯನ್ನು ವಿಲೀನಗೊಳಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು ಮತ್ತು ತಮ್ಮ ನಾಯಕರು ಮತ್ತು ಕಾರ್ಯಕರ್ತರಿಂದ ದೂರವಿರಲು ಪ್ರಾರಂಭಿಸಿದರು.

Latest Videos
Follow Us:
Download App:
  • android
  • ios