Asianet Suvarna News Asianet Suvarna News

ಹೀಗೂ ಕನಸು ನನಸಾಗಬಹುದು ನೋಡಿ: ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ

ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಇದನ್ನು ಕನಸು ನನಸಾದ ಕ್ಷಣ ಎನ್ನಬೇಕೋ. ಮೌಢ್ಯ ಎನ್ನಬೇಕೋ ಒಂದು ತಿಳಿಯುತ್ತಿಲ್ಲ. ಜ್ಯೋತಿಷಿಯ ಮಾತುಕೇಳಿ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿಕೊಂಡು ನಾಲಗೆ ಕಳೆದುಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

snake bite dram became fullfilled, man lost his tounge in Tamilnadu akb
Author
First Published Nov 25, 2022, 12:08 PM IST

ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಇದನ್ನು ಕನಸು ನನಸಾದ ಕ್ಷಣ ಎನ್ನಬೇಕೋ. ಮೌಢ್ಯ ಎನ್ನಬೇಕೋ ಒಂದು ತಿಳಿಯುತ್ತಿಲ್ಲ. ಜ್ಯೋತಿಷಿಯ ಮಾತುಕೇಳಿ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿಕೊಂಡು ನಾಲಗೆ ಕಳೆದುಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗೊಬಿಚೆಟ್ಟಿಪಾಳ್ಯಂ ನಿವಾಸಿ 52 ವರ್ಷದ ವ್ಯಕ್ತಿಯೇ ಹೀಗೆ ನಾಲಗೆ ಕಳೆದುಕೊಂಡ ವ್ಯಕ್ತಿ. ಈತನಿಗೆ ದಿನವೂ ಹಾವಿನ ಕನಸು ಬೀಳುತ್ತಿತ್ತಂತೆ. ಹಾವಿನಿಂದ ಕಚ್ಚಿಸಿಕೊಂಡಂತೆ ಕನಸು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಈತ ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಬಳಿ ಹೋಗಿದ್ದಾನೆ. 

ಜ್ಯೋತಿಷಿ (Astrologer) ಈತನಿಗೆ ಈ ಹಾವಿನ ಪೂಜೆ ಮಾಡುವಂತೆ ಸಲಹೆ ನೀಡಿದ್ದಾನೆ. ಜೊತೆಗೆ ಹಾವಿನ ಹುತ್ತ ಇರುವ ದೇಗುಲವನ್ನು ಪೂಜೆಗಾಗಿ ಸಲಹೆ ಮಾಡಿದ್ದಾನೆ. ಅಲ್ಲದೇ ಪೂಜೆಯ ನಂತರ ಹಾವಿಗೆ ತನ್ನ ನಾಲಿಗೆಯನ್ನು (Tounge) ತೋರಿಸುವಂತೆ ಸಲಹೆ ನೀಡಿದ್ದಾನೆ. ಜ್ಯೋತಿಷಿಯ ಸಲಹೆಯಂತೆ ರಾಜ (ಹೆಸರು ಬದಲಾಯಿಸಲಾಗಿದೆ) ತನ್ನ ನಾಲಗೆಯನ್ನು ಹಾವಿನ ಮುಂದೆ ಚಾಚಿ ನಿಂತಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಹಾವು ರಾಜನ ನಾಲಗೆಯನ್ನು ಕಚ್ಚಿದೆ. ಕೂಡಲೇ ರಾಜ ನೋವಿನಿಂದ ನೆಲಕ್ಕೆ ಬಿದ್ದಿದ್ದಾನೆ. 

ಈ ವೇಳೆ ರಾಜನ ಜೊತೆಯಲ್ಲಿದ್ದ ಸಂಬಂಧಿ ಸುರೇಶ್ (Suresh) ಹಾಗೂ ಕುಟುಂಬದವರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಈತನ ಜೀವ ಉಳಿಸುವ ಸಲುವಾಗಿ ವೈದ್ಯರು ಆತನ ನಾಲಗೆಯನ್ನು ಕತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಈರೋಡ್ ಮನಿಯನ್ ಮೆಡಿಕಲ್ ಆಸ್ಪತ್ರೆಯ (Erode Maniyan Medical Hospital) ಮುಖ್ಯಸ್ಥ, ಡಾಕ್ಟರ್ ಎಸ್. ಸೆಂಥಿಲ್ ಕುಮಾರನ್ (Senthil Kumaran), ನವಂಬರ್ 18 ರಂದು ಹಾವು ಕಚ್ಚಿದ ಕಾರಣಕ್ಕೆ ಕುಟುಂಬದವರು ಈ ರಾಜನನ್ನು ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಆತನ ಬಾಯಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಹಾವಿನ ವಿಷದಿಂದಾಗಿ ಆತನ ನಾಲಗೆಯ ಅಂಗಾಂಶಕ್ಕೆ ಭಾರಿ ಹಾನಿಯಾಗಿತ್ತು. ಹೀಗಾಗಿ ಆತನ ಜೀವ ಉಳಿಸುವ ಸಲುವಾಗಿ ನಾವು ನಾಲಗೆಯನ್ನು ಕತ್ತರಿಸಬೇಕಾಯಿತು ಆತನ ನಾಲಗೆಯನ್ನು ಕತ್ತರಿಸಿದ ಬಳಿಕವೂ ಆತನ ಜೀವ ಉಳಿಸಲು ನಾವು ನಾಲ್ಕು ದಿನ ಹರಸಾಹಸ ಪಟ್ಟಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. 

ಬಳ್ಳಾರಿ: ಕಚ್ಚಿದ ಹಾವಿನ ಸಮೇತ ಆಸ್ಪತ್ರೆಗೆ ಬಂದ ಭೂಪ...!

ಕನಸುಗಳು ಎಲ್ಲರಿಗೂ ಬೀಳುತ್ತವೆ. ಬಿದ್ದ ಕನಸುಗಳು ನನಸಾಗುವುದು ಬಹಳ ಕಡಿಮೆ. ಅನೇಕರು ಜೀವನದಲ್ಲಿ ಕಂಡ (ನಿದ್ದೆಯಲ್ಲಿ ಕಂಡ ಕನಸಲ್ಲ) ಕನಸನ್ನು ನನಸು ಮಾಡಲು ಭಾರಿ ಪರಿಶ್ರಮ ಪಡುತ್ತಾರೆ. ಆದರೆ ಕೆಲವೊಮ್ಮೆ ಕನಸುಗಳು ಸಾಕಾರಗೊಳ್ಲುತ್ತವೆ. ಆದರೆ ಇಲ್ಲಿ ನಿದ್ದೆಯಲ್ಲಿ ಬಿದ್ದ ಕನಸು ಜ್ಯೋತಿಷಿಯ ಕಿತಾಪತಿಯಿಂದಾಗಿ ನನಸಾಗಿದ್ದು, ವ್ಯಕ್ತಿ ಮಾತ್ರ ನಾಲಗೆ ಕಳೆದುಕೊಳ್ಳುವಂತಾಗಿದೆ. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

ಹಾವುಗಳ ಜೊತೆ ಸರಸವಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ: ವಿಡಿಯೋ ವೈರಲ್‌

Follow Us:
Download App:
  • android
  • ios