Asianet Suvarna News Asianet Suvarna News

ಹಾವುಗಳ ಜೊತೆ ಸರಸವಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ: ವಿಡಿಯೋ ವೈರಲ್‌

  • ಮೂರು ಹಾವುಗಳೊಂದಿಗೆ ಸರಸವಾಡಲು ಹೋಗಿ ಕಚ್ಚಿಸಿಕೊಂಡ ಯುವಕ
  • ಶಿರಸಿಯ ಸೈಯದ್ ಎಂಬಾತ ಆಸ್ಪತ್ರೆಗೆ ದಾಖಲು
  • ಹಾವುಗಳೊಂದಿಗೆ ಸರಸವಾಡುತ್ತಿರುವ ವಿಡಿಯೋ ವೈರಲ್
Karnataka Man's Stunt With 3 Cobras Ends Badly watch terrible Video akb
Author
Bangalore, First Published Mar 17, 2022, 3:52 PM IST

ಶಿರಸಿ(ಮಾ.17): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯುವಕನೋರ್ವ ಮೂರು ಹಾವುಗಳೊಂದಿಗೆ ಏಕಕಾಲಕ್ಕೆ ಸರಸವಾಡಲು ಹೋಗಿ ಒಂದು ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ್ದಾನೆ. ಹಾವುಗಳ ಬಗ್ಗೆ ಆಸಕ್ತಿ ಹೊಂದಿರುವ ಶಿರಸಿ ಯುವಕ ಮಾಜ್‌ ಸಯೀದ್‌ (Maaz Sayed) ಎಂಬಾತನೇ ಹೀಗೇ ಹಾವುಗಳೊಂದಿಗೆ ಸರಸವಾಡಲು ಹೋಗಿ ಕಚ್ಚಿಸಿಕೊಂಡ ಯುವಕ. ವಿಡಿಯೋದಲ್ಲಿ ಈತ ಮೂರು ಹೆಡೆ ಎತ್ತಿ ನಿಂತಿರುವ ನಾಗರಹಾವುಗಳ ಮುಂದೆ ಕುಳಿತು ಮೆಲ್ಲ ಮೆಲ್ಲನೇ ಅವುಗಳನ್ನು ಮುಟ್ಟಲು ಅವುಗಳ ಬಾಲವನ್ನು ಎಳೆಯಲು ಆರಂಭಿಸಿದ್ದಾನೆ. ಅಲ್ಲದೇ ಅವುಗಳ ಮುಂದೆ ತನ್ನ ಕೈಗಳನ್ನು ಹಾಗೂ ಕಾಲುಗಳನ್ನು ಹೆಡೆ ಆಡಿಸಿದಂತೆ ಆಡಿಸಿದ್ದಾನೆ. ಈ ವೇಳೆ ಭಯಗೊಂಡ ಹಾವೊಂದು ಆತನ ಮೊಣಕಾಲಿಗೆ ಕಚ್ಚಿದೆ.

ಹಾವಿನಿಂದ ಕಚ್ಚಿಸಿಕೊಂಡ ಈ ಸೈಯದ್‌ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಇಂತಹದ್ದೇ ದೃಶ್ಯಗಳಿರುವ ವಿಡಿಯೋಗಳೇ ತುಂಬಿವೆ. ಅಂದರೆ ಈತ ಈ ಹಿಂದೆಯೂ ಇಂತಹ ಹುಚ್ಚು ಸಾಹಸ ಮಾಡಿ ಯಶಸ್ವಿಯಾಗಿದ್ದಾನೆ. ಆದರೆ ಈ ಬಾರಿ ಆತನ ಗ್ರಹಚಾರ ಕೆಟ್ಟಿತ್ತೇನೋ. ಹಾವು ಚಂಗನೇ ಮೇಲೇರಿ ಈತನಿಗೆ ಕಚ್ಚಿದೆ. ಈ ವೇಳೆ ಕುಳಿತಿದ್ದ ಆತನೂ ಒಮ್ಮೆಲೆ ಮೇಲೇರಿದ್ದು, ಕಚ್ಚಿದ  ಹಾವನ್ನು ತನ್ನ ಕೈಯಿಂದ ಎಳೆಯುತ್ತಾನೆ. ಆದರೆ ಅದು ಗಟ್ಟಿಯಾಗಿ ಕಚ್ಚಿ ಹಿಡಿದಿತ್ತು.

ಈ ಬಗ್ಗೆ ಸುವರ್ಣ ನ್ಯೂಸ್‌.ಕಾಮ್‌ ಜೊತೆ ಮಾತನಾಡಿದ ಯುವಕ ಸೈಯದ್‌ , ಭಾನುವಾರ ಈ ಘಟನೆ ನಡೆದಿದ್ದಾಗಿ ಹೇಳಿದ್ದಾನೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ. ಈ ಘಟನೆಯ ಬಗ್ಗೆ ಆರ್‌ಎಫ್‌ಒ ಬಸವರಾಜ್‌ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಯುವಕ ಸೈಯದ್ ಹೇಳಿದ್ದಾನೆ.

 

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ (susanta Nanda) ಹಾವು ಹಿಡಿಯುವವರನ್ನು ಟೀಕಿಸಿದ್ದಾರೆ. 'ಇದು ನಾಗರಹಾವುಗಳನ್ನು ನಿಭಾಯಿಸುವ ಭಯಾನಕ ವಿಧಾನವಾಗಿದೆ. ಹಾವು ಚಲನೆಯನ್ನು ಬೆದರಿಕೆ ಎಂದು ಪರಿಗಣಿಸುತ್ತದೆ ಮತ್ತು ಚಲನೆಯನ್ನು ಅನುಸರಿಸುತ್ತದೆ. ಕೆಲವೊಮ್ಮೆ, ಪ್ರತಿಕ್ರಿಯೆಯು ಮಾರಕವಾಗಬಹುದು ಎಂದು ಅವರು ಬರೆದಿದ್ದಾರೆ.

Health Tips : ಹಾವು ಕಚ್ಚಿದ್ರೆ ಭಯ ಪಡ್ಬೇಡಿ, ತಕ್ಷಣ ಮಾಡಿ ಈ ಕೆಲಸ

ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಪ್ರಿಯಾಂಕಾ ಕದಮ್ (Priyanka Kadam) ಕೂಡ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಸೈಯದ್‌ಗೆ ಹಾವು ಕಚ್ಚಿದ ಕ್ಷಣ ಹಾಗೂ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವಿಡಿಯೋ ಹಾಗೂ ಫೋಟೋಗಳಿವೆ. ನಾಗರಹಾವು (Cobra) ಎಂಬುದು ವಿವಿಧ ಎಲಾಪಿಡ್ ಹಾವುಗಳ ಸಾಮಾನ್ಯ ಹೆಸರಾಗಿದ್ದು, ತಿಳಿದಿರುವ ಎಲ್ಲಾ ನಾಗರಹಾವುಗಳು ವಿಷಪೂರಿತವಾಗಿವೆ. ಸಯ್ಯದ್ ಅವರ ಪ್ರಕರಣದಲ್ಲಿ, ಅವರ ಸಾಹಸ ತಲೆಕೆಳಗಾಗಿದ್ದು, ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಅವರಿಗೆ ವಿಷ-ವಿರೋಧಿಸುವ 46 ಬಾಟಲು ಔಷಧವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

Snake Bite: ಹಾವು ಕಚ್ಚಿ ಇಮ್ಮಡಿ ಗುರುಮಲ್ಲ ಸ್ವಾಮೀಜಿ ಸಾವು

ಆಸ್ಪತ್ರೆಯಲ್ಲಿ 20 ವರ್ಷದ ಸೈಯದ್‌ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳನ್ನು ಪ್ರಿಯಾಂಕಾ ಕದಮ್ ಹಂಚಿಕೊಂಡಿದ್ದಾರೆ. ಸೈಯದ್‌ ಅವರು  ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಕದಮ್  ಅವರು ಈ ಹಿಂದೆ ಮಾಜ್ ಸಯೀದ್ ಅವರನ್ನು 'ವನ್ಯಜೀವಿಗಳ (wildLife) ದುರುಪಯೋಗದ ವಿಚಾರದಲ್ಲಿ ಬಂಧಿಸಬೇಕೆಂದು ಕರೆ ನೀಡಿದ್ದರು. ಅಲ್ಲದೇ ಅವರು ತಜ್ಞರು ಈ ಯುವಕನಿಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸಬಹುದು ಎಂದು ಸಲಹೆ ನೀಡಿದರು.

 

Follow Us:
Download App:
  • android
  • ios