Village Library: ಕಾಶ್ಮೀರದ ಗ್ರಾಮದಲ್ಲಿ ಪ್ರತಿ ಮನೆಲೂ ಗ್ರಂಥಾಲಯ ಸ್ಥಾಪಿಸ್ತಿರೋ ಮಾದರಿ ಯುವಕ

ಪ್ರಸ್ತುತ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಸಿರಾಜುದ್ದೀನ್ ಖಾನ್‌ 'ಲೈಬ್ರರಿ ವಿಲೇಜ್' ಕಲ್ಪನೆಯು ಇಂಗ್ಲೆಂಡ್‌ನಿಂದ ಬಂದಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಈ ಕಲ್ಪನೆಯನ್ನು ಸಾಕಾರಗೊಳಿಸಲು ಪ್ರಾರಂಭಿಸಿದಾಗ, ಕೋವಿಡ್ - ಸಾಂಕ್ರಾಮಿಕ ಜಗತ್ತನ್ನು ಅಪ್ಪಳಿಸಿತು ಎಂದೂ ನೆನಪಿಸಿಕೊಂಡರು.

sirajuddin khan embarks on mission to set up library in every house of kashmir village ash

ನವದೆಹಲಿ (ಮಾರ್ಚ್‌ 6, 2023): ಶಿಕ್ಷಣ, ಸಾಕ್ಷರತೆ ಪ್ರತಿಯೊಬ್ಬರಿಗೂ ಮುಖ್ಯವಾಗಿದ್ದು, ಪ್ರಸ್ತುತ ಅಗತ್ಯವೂ ಆಗಿದೆ. ಈಗಲೂ ಎಷ್ಟೋ ಗ್ರಾಮಗಳಲ್ಲಿ ಹಲವು ಜನರು ಕಡಿಮೆ ಸಾಕ್ಷರತೆ ಹೊಂದಿದ್ದಾರೆ. ಸಾಕ್ಷರತೆ ಹೊಂದಿದ್ದರೂ, ಅವರ ಪ್ರಾಪಂಚಿಕ ಬುದ್ಧಿ ಮಟ್ಟ ಕಡಿಮೆ ಇರುತ್ತದೆ. ಈ ಹಿನ್ನೆಲೆ ಕಾಶ್ಮೀರಿ ಯುವಕನೊಬ್ಬ ತಮ್ಮ ಗ್ರಾಮದಲ್ಲಿ ಪ್ರತಿ ಮನೆಗೂ ಗ್ರಂಥಾಲಯ ಸ್ಥಾಪಿಸೋ ಉದ್ದೇಶ ಹೊಂದಿದ್ದಾನೆ. ಆತನ ಈ ಮಹತ್ವಾಕಾಂಕ್ಷೆಗೆ ಕಾರಣ ಇಂಗ್ಲೆಂಡ್ ಮತ್ತು ಮಹಾರಾಷ್ಟ್ರದ ಗ್ರಂಥಾಲಯದ ಹಳ್ಳಿಯ ಕಲ್ಪನೆಯಿಂದ ಆತ ಪ್ರೇರಿತನಾಗಿದ್ದಾನೆ.

ಹೌದು, ಇಂಗ್ಲೆಂಡ್  (England) ಮತ್ತು ಮಹಾರಾಷ್ಟ್ರದ (Maharashtra) ಗ್ರಂಥಾಲಯದ ಹಳ್ಳಿಯ (Library Village) ಕಲ್ಪನೆಯಿಂದ ಪ್ರೇರಿತರಾದ ಕಾಶ್ಮೀರಿ ಯುವಕ (Kashmiri Youth) ಸಿರಾಜುದ್ದೀನ್ ಖಾನ್ ಉತ್ತರ ಕಾಶ್ಮೀರದ ಬಂಡೀಪೋರ್ (Bandipore) ಜಿಲ್ಲೆಯ ಆರ್ಗಮ್ ಎಂಬ ತಮ್ಮ ಸ್ಥಳೀಯ ಹಳ್ಳಿಯಲ್ಲಿ 22 ಕ್ಕೂ ಹೆಚ್ಚು ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾನೆ. ಈ ಗ್ರಾಮದಲ್ಲಿ ಸುಮಾರು 500 ಜನರಿದ್ದು, ಮತ್ತು ಸುಮಾರು 100 ಮನೆಗಳನ್ನು ಹೊಂದಿದೆ.

ಇದನ್ನು ಓದಿ: ಕಲಬುರಗಿ ಜಿಪಂಗೆ ಡಿಜಿಟಲ್‌ ಸ್ಪರ್ಶ ನೀಡಿದ ಬದೋಲೆ

ಕಾಶ್ಮೀರಿ ಹುಡುಗರು ಮತ್ತು ಹುಡುಗಿಯರ ಶಿಕ್ಷಣವನ್ನು ಬೆಂಬಲಿಸಲು ಸಂಜಯ್ ನಹರ್ ನಡೆಸುತ್ತಿರುವ ಎನ್‌ಜಿಒ ಸಹಾಯದಿಂದ ಸಿರಾಜುದ್ದೀನ್ ಖಾನ್ ಅಧ್ಯಯನ ಮಾಡಿದ್ದಾನೆ. ಮಹಾರಾಷ್ಟ್ರದ ಪುಣೆಯ ಸರ್ಹಾದ್ ಫೌಂಡೇಶನ್‌ ಸಹಾಯದಲ್ಲಿ ಬೆಳವಣಿಗೆ ಕಂಡಿದ್ದು, ಈ ಪೈಕಿ ಅನೇಕ ಯುವಕ - ಯುವತಿಯರು ಭಯೋತ್ಪಾದನೆಗೆ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಪುಸ್ತಕ ಮೇಳದಲ್ಲಿ ಸರ್ಹಾದ್ ಫೌಂಡೇಶನ್‌ನ ಸ್ಟಾಲ್‌ನಲ್ಲಿ ಆವಾಜ್-ದಿ ವಾಯ್ಸ್‌ ಮಾಧ್ಯಮದೊಂದಿಗೆ ಮಾತನಾಡಿದ ಸಿರಾಜುದ್ದೀನ್, "ಪುಸ್ತಕಗಳು ನಿಮ್ಮ ಕಣ್ಣುಗಳನ್ನು ತೆರೆಸುತ್ತವೆ. ಜ್ಞಾನವು ನೀವು ಎಲ್ಲಿ ನಿಂತಿದ್ದೀರಿ ಮತ್ತು ನೀವು ಏನು ಮಾಡಬಹುದು ಎಂಬುದನ್ನು ತಿಳಿಸುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: Chikkaballapur: ಲೈಬ್ರರಿ ಕಟ್ಟಡ ಕಟ್ಟಲು ಸಿಗದ ನರೇಗಾ ಆಸರೆ!

ಪ್ರಸ್ತುತ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಸಿರಾಜುದ್ದೀನ್ ಖಾನ್‌ 'ಲೈಬ್ರರಿ ವಿಲೇಜ್' ಕಲ್ಪನೆಯು ಇಂಗ್ಲೆಂಡ್‌ನಿಂದ ಬಂದಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಈ ಕಲ್ಪನೆಯನ್ನು ಅನುಸರಿಸಲು ಪ್ರಾರಂಭಿಸಿದಾಗ, ಕೋವಿಡ್ - ಸಾಂಕ್ರಾಮಿಕ ಜಗತ್ತನ್ನು ಅಪ್ಪಳಿಸಿತು ಎಂದೂ ನೆನಪಿಸಿಕೊಂಡರು. ಆದರೆ, ಸ್ವಲ್ಪ ಸಮಯದ ನಂತರ ಮಹಾರಾಷ್ಟ್ರದ ಬೆಳ್ಳಾರೆ ಗ್ರಾಮದಲ್ಲೂ ‘ಗ್ರಾಮ ಗ್ರಂಥಾಲಯ’ ತೆರೆದಿರುವುದು ತಿಳಿಯಿತು. ರಾಜ್ಯ ಸರ್ಕಾರದ ನೆರವಿನಿಂದ ಇದನ್ನು ತೆರೆಯಲಾಗಿತ್ತು ಎಂದೂ ತಿಳಿದುಬಂದಿದೆ.

ಸಿರಾಜುದ್ದೀನ್ ಖಾನ್‌ ತನ್ನ ಗ್ರಾಮದಲ್ಲಿ ಈ ಯೋಜನೆಯನ್ನು ಮಾಡುತ್ತಿದ್ದು, ಇದಕ್ಕೆ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (NBT) ಮತ್ತು ಜಮ್ಮು ಹಾಗೂ ಕಾಶ್ಮೀರ ಸರ್ಕಾರ ಸಹ ಬೆಂಬಲ ನೀಡ್ತಿದೆ. ಇದರ ಫಲವಾಗಿ ಕಳೆದ ಎರಡು ತಿಂಗಳಲ್ಲಿ ಆರಗಂ ಗ್ರಾಮದ 100 ಮನೆಗಳ ಪೈಕಿ 22ಕ್ಕೂ ಹೆಚ್ಚು ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ಪ್ರಿಂಗ್‌ಪೀಪಲ್‌ನಿಂದ ಇ-ಲರ್ನಿಂಗ್ ಲೈಬ್ರರಿ, 400 ಕೋರ್ಸ್ ಲಭ್ಯ

ಪ್ರತಿಯೊಂದು ಕುಟುಂಬವು ನಿರ್ದಿಷ್ಟ ವಿಷಯದ ಬಗ್ಗೆ ಪುಸ್ತಕಗಳ ಸಂಗ್ರಹವನ್ನು ಹೊಂದಿರಬೇಕು. ಇದರಿಂದ ಜನರು ಮಾಹಿತಿಗಾಗಿ ಮತ್ತು ವಿಚಾರಗಳು ಹಾಗೂ ಪುಸ್ತಕಗಳ ವಿನಿಮಯಕ್ಕಾಗಿ ಒಬ್ಬರು ಇನ್ನೊಬ್ಬರ ಮನೆಗೆ ಭೇಟಿ ನೀಡಬಹುದು ಎಂಬುದು ‘ಹರ್ ಘರ್ ಲೈಬ್ರರಿ’ಯ ಹಿಂದಿನ ಸಿರಾಜುದ್ದೀನ್ ಖಾನ್‌ ಕಲ್ಪನೆಯಾಗಿದೆ. ಈ ಕ್ರಮವು ಗ್ರಾಮಸ್ಥರ ಒಗ್ಗಟ್ಟನ್ನು ಹೆಚ್ಚಿಸುವುದಲ್ಲದೆ, ಅವರು ಎಲ್‌ಒಸಿ ಅಥವಾ ನಿಯಂತ್ರಣ ರೇಖೆಯ ಸಮೀಪದಲ್ಲಿ ವಾಸಿಸುವುದರಿಂದ ಅವರ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಅವರನ್ನು ಒಗ್ಗೂಡಿಸಲು ಸಹಾಯ ಮಾಡುತ್ತದೆ ಎಂದೂ ಸಿರಾಜುದ್ದೀನ್‌ ಖಾನ್‌ ಹೇಳಿದ್ದಾರೆ.

ಇದನ್ನೂ ಓದಿ: Yadgir: ಯುವ ಪಡೆಯಿಂದ ನಿರ್ಮಾಣವಾಯ್ತು ಹೈಟೆಕ್ ಲೈಬ್ರರಿ: ಸರ್ಕಾರಿ ಗ್ರಂಥಾಲಯಕ್ಕಿಂತ ಡಿಫರೆಂಟ್!

Latest Videos
Follow Us:
Download App:
  • android
  • ios