Asianet Suvarna News Asianet Suvarna News

Yadgir: ಯುವ ಪಡೆಯಿಂದ ನಿರ್ಮಾಣವಾಯ್ತು ಹೈಟೆಕ್ ಲೈಬ್ರರಿ: ಸರ್ಕಾರಿ ಗ್ರಂಥಾಲಯಕ್ಕಿಂತ ಡಿಫರೆಂಟ್!

ಸರಕಾರ ಗ್ರಾಮೀಣ ಪ್ರದೇಶದಲ್ಲಿ ಯುವ ಸಮುದಾಯ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಂಥಾಲಯಗಳನ್ನು ತೆರೆದಿರುವುದನ್ನು ಕಾಣಬಹುದು. ಆದರೆ ಯಾದಗಿರಿ ತಾಲೂಕಿನ ಕೂಡಲೂರು ಗ್ರಾಮದಲ್ಲಿ ಗ್ರಾಮದ ಯುವಕರು ಸೇರಿ ಸುಸಜ್ಜಿತವಾದ ಲೈಬ್ರರಿ ಓಪನ್ ಮಾಡಿದ್ದಾರೆ.

high tech library at kudaluru village in yadgir gvd
Author
Bangalore, First Published Jul 8, 2022, 5:01 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಯಾದಗಿರಿ

ಯಾದಗಿರಿ (ಜು.08): ಸರಕಾರ ಗ್ರಾಮೀಣ ಪ್ರದೇಶದಲ್ಲಿ ಯುವ ಸಮುದಾಯ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಂಥಾಲಯಗಳನ್ನು ತೆರೆದಿರುವುದನ್ನು ಕಾಣಬಹುದು. ಆದರೆ ಯಾದಗಿರಿ ತಾಲೂಕಿನ ಕೂಡಲೂರು ಗ್ರಾಮದಲ್ಲಿ ಗ್ರಾಮದ ಯುವಕರು ಸೇರಿ ಸುಸಜ್ಜಿತವಾದ ಲೈಬ್ರರಿ ಓಪನ್ ಮಾಡಿದ್ದಾರೆ. ಸರಕಾರದಿಂದ ಯಾವುದೇ ಸಹಾಯವನ್ನು ಪಡೆಯದೇ ಹೈಟೆಕ್ ಗ್ರಂಥಾಲಯವನ್ನು ನಿರ್ಮಾಣ ಮಾಡಿದ್ದಾರೆ ಕೂಡಲೂರು ಹಳ್ಳಿಯ ಯುವಪಡೆ.

ಕೂಡಲೂರು ಗ್ರಾಮದ ಯುವಪಡೆಯಿಂದ ಲೈಬ್ರರಿ ಓಪನ್: ಯಾದಗಿರಿ ತಾಲೂಕಿನ ಕೂಡಲೂರು ಗ್ರಾಮ ಮಾತ್ರ ಸರಕಾರದಿಂದ ನಿರ್ಲಕ್ಷಕೆ ಒಳಪಟ್ಟ ಗ್ರಾಮವಾಗಿದ್ದು, ಇಲ್ಲಿನ ಪದವಿ ಪಡೆದಿರುವಂಥ ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯ್ಯಾರಿಗಾಗಿ ಸೂಕ್ತವಾದ ಗ್ರಂಥಾಲಯ ಇಲ್ಲದೆ ಕೊರಗುತಿದ್ದರು. ಹಾಗಾಗಿ ಕೂಡಲೂರು ಗ್ರಾಮದ ಯುವಕರು, ಹಿರಿಯರು ಹಣ ಸಂಗ್ರಹಿಸಿ ಸುಸಜಿತಾ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

ಬೀದರ್‌ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಹೈಟೆಕ್ ಲೈಬ್ರರಿ, ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗುವ ವಿದ್ಯಾರ್ಥಿಗಳಿಗಾಗಿ

ಸರ್ಕಾರಿ ಲೈಬ್ರರಿಗಿಂತ ಕಡಿಮೆ ಇಲ್ಲ ಈ ಗ್ರಂಥಾಲಯ: ಯಾದಗಿರಿ ತಾಲೂಕಿನ ಕೂಡಲೂರು ಗ್ರಾಮದಲ್ಲಿ ಇರುವ ಹೈಟೆಕ್ ಗ್ರಂಥಾಲಯ ಸಾಕಷ್ಟು ಸ್ಥಳಾವಕಾಶವಿದೆ. ವಿದ್ಯಾರ್ಥಿಗಳು ಕುಳಿತುಕೊಂಡು ಓದಲು ವಿಶಾಲವಾದ ಟೇಬಲ್ ಇದ್ದು, ಕುರ್ಚಿಗಳು, ಹಾಗೂ ಗಾಳಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಅನುಕೂಲವಾಗಿದ್ದು, ಹಾಗಾಗಿ ಓದಲು ಹೈಟೆಕ್ ಲೈಬ್ರರಿಯಿಂದ ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಅನುಕೂಲವಾಗಿದೆ.

ವರ್ಷದಲ್ಲಿ ಇಬ್ಬರು ಸರಕಾರಿ ಕೆಲಸಕ್ಕೆ ಹೋಗಬೇಕು ಎನ್ನುವ ಛಲ: ಕೂಡಲೂರು ಗ್ರಾಮದ ಯುವಕರು ನಿರಂತರ ಅಭ್ಯಾಸದಿಂದ ವರ್ಷಕ್ಕೆ 2 ರಿಂದ 3 ಜನ ಸರಕಾರಿ ನೌಕರಿಗೆ ಸೇರುವಂಥಗಬೇಕು ಎಂದು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾಕ್ಟರ್ ಮೋಹನ್‌ರಾಜ್ ತಿಳಿಸಿದರು. ವೀರಕ್ತ ಮಟದ ಫಿಟಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ಬಡತನ ಕಾರಣಕ್ಕೆ ಬಹುತೇಕ ವಿದ್ಯಾರ್ಥಿಗಳು ಪಟ್ಟಣಕ್ಕೆ ಹೋಗಿ ಅಭ್ಯಾಸ ಮಾಡುವುದು ಕಷ್ಟ ಆಗಿತ್ತು. ಇದನ್ನು ಮನಗೊಂಡು ಪ್ರಜ್ಞಾವಂತ ಯುವ ಸಮುದಾಯ ಗ್ರಂಥಾಲಯ ಸ್ಥಾಪನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಓದುವುದಕ್ಕೆ ಪುಸ್ತಕಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

Gadag: ಓದುಗ ವರ್ಗ ಸೃಷ್ಟಿಸಲು ಹೈಟೆಕ್ ಲೈಬ್ರರಿ: ಗ್ರಾಮದ ಗ್ರಂಥಾಲಯದಲ್ಲಿ ಕಂಪ್ಯೂಟರ್, ಟಿವಿ!

ಗ್ರಂಥಾಲಯದಲ್ಲಿ ಪುಸ್ತಕಗಳ ಭಂಡಾರ: ಈ ಗ್ರಂಥಾಲಯದಲ್ಲಿ 300 ಸ್ಪರ್ಧಾತ್ಮಕ ಪುಸ್ತಕಗಳು, 130 ಆಧ್ಯಾತ್ಮಿಕ ಪುಸ್ತಕಗಳು, 6 ರಿಂದ 12 ನೇ ತರಗತಿಯ ಪುಸ್ತಕಗಳು, 24 ಇಂಜಿನಿಯರಿಂಗ್ ಹಾಗೂ ಪ್ರತಿ ತಿಂಗಳ ಮ್ಯಾಕ್ಸಿನ್, 150ಕ್ಕೂ ಹೆಚ್ಚು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆ ಪುಸ್ತಕಗಳು ಹಾಗೂ ಇನ್ನು ಹಲವಾರು ಪುಸ್ತಕಗಳ ಭಂಡಾರ ಇದೆ. ಯುವ ಸಮುದಾಯ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪುಸ್ತಕಗಳನ್ನು ತರಿಸಿ ಓದುವುದಕ್ಕೆ ಸಿದ್ಧತೆ ಮಾಡುತಿರುವ ಕೆಲಸ ಬರದಿಂದ ಸಾಗುತಿದೆ. ಇದು ಅವರ ಜ್ಞಾನದ ದಾಹವನ್ನು ಎತ್ತಿ ತೋರಿಸುತ್ತಿದೆ.

Follow Us:
Download App:
  • android
  • ios