ಮುಂಬೈ(ನ.26): ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಕೊನೆಗೂ ಅಂತ್ಯ ಕಂಡಿದ್ದು, ಬಹುಮತ ಸಾಬೀತು ಮಾಡಲಾಗದ ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾತೋಶ್ರೀ ಸಂಬಂಧಕ್ಕೆ ಇತಿಶ್ರೀ: ರಾಜೀನಾಮೆ ನೀಡಿದ ಫಡ್ನವೀಸ್ ಹೇಳಿದ್ದಿಷ್ಟು!

ಈ ಮಧ್ಯೆ ತಮ್ಮದೇ ಸರ್ಕಾರ ಪಕ್ಕಾ ಎಂದರಿತ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ, ಸರ್ಕಾರ ರಚನೆಯ ರೂಪುರೇಷೆ ಸಿದ್ಧಪಡಿಸುವಲ್ಲಿ ಬ್ಯುಸಿಯಾಗಿದೆ.

ಈಗಾಗಲೇ ಉದ್ಧವ್ ಠಾಕ್ರೆ ಐದು ವರ್ಷಗಳ ಕಾಲ ಸಿಎಂ ಆಗುವುದು ಪಕ್ಕಾ ಆಗಿದ್ದು, ಕಾಂಗ್ರೆಸ್’ನ ಬಾಳಾಸಾಹೇಬ್ ಥೋರಟ್ ಹಾಗೂ ಎನ್’ಸಿಪಿಯ ಜಯಂತ್ ಪಾಟೀಲ್ ಅವರಿಗೆ ಡಿಸಿಎಂ ಹುದ್ದೆ ಬಹುತೇಕ ಖಚಿತವಾಗಿದೆ.

ಬಿಜೆಪಿಗೆ ಸೆಟ್ ಬ್ಯಾಕ್: ರಾಜೀನಾಮೆ ನೀಡಿ ಅಜಿತ್ ಪವಾರ್ ಕಮ್ ಬ್ಯಾಕ್!

ನಾಳೆ(ನ.27)ಯೇ ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಹುಮತ ಸಾಬೀತಿಗೆ ಎರಡು ದಿನಗಳ ಕಾಲಾವಕಾಶ ಸಿಗುವುದು ನಿಚ್ಚಳವಾಗಿದೆ.

ಫಡ್ನವೀಸ್‌ಗೆ 'ಮಹಾ' ಪರೀಕ್ಷೆ: ನಾಳೆಯೇ ಬಹುಮತ ಸಾಬೀತುಪಡಿಸಿ, ರಹಸ್ಯ ಮತದಾನ ಬೇಡ: ಸುಪ್ರೀಂ

ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಂತ್ರಿ ಮಂಡಲ ರಚನೆಯ ಕಸರತ್ತು ಆರಂಭವಾಗಲಿದ್ದು, ಭಿನ್ನಮತಕ್ಕೆ ಆಸ್ಪದವಿಲ್ಲದಂತೆ ಮಂತ್ರಿ ಮಂಡಲ ರಚಿಸುವ ಜವಾಬ್ದಾರಿ ಮೂರೂ ಪಕ್ಷಗಳ ಹೆಗಲೇರಿದೆ.