ಬಿಜೆಪಿಗೆ ಸೆಟ್ ಬ್ಯಾಕ್: ರಾಜೀನಾಮೆ ನೀಡಿ ಅಜಿತ್ ಪವಾರ್ ಕಮ್ ಬ್ಯಾಕ್!
ಸೋಲೊಪ್ಪಿಕೊಂಡ ಅಜಿತ್ ಪವಾರ್ ಅವರಿಂದ ರಾಜೀನಾಮೆ| ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಜಿತ್ ಪವಾರ್| ಬಿಜೆಪಿಗೆ ಬೆಂಬಲ ವಾಪಸ್ ಪಡೆದ ಅಜಿತ್ ಪವಾರ್| ಸುಪ್ರಿಯಾ ಸುಳೆ ನಡೆಸಿದ ಸಂಧಾನ ಮಾತುಕತೆ ಸಫಲ| ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ| ತೀವ್ರ ರೋಚಕ ತಿರುವು ಪಡೆದ ಮಹಾರಾಷ್ಟ್ರ ರಾಜಕೀಯ|
ಮುಂಬೈ(ನ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಿ ಉಪಮುಖ್ಯಮಂತ್ರಿಯಾಗಿದ್ದ ಎನ್’ಸಿಪಿಯ ಅಜಿತ್ ಪವಾರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಗೆ ಬೆಂಬಲ ನೀಡಿ ಎನ್’ಸಿಪಿ ಮತ್ತು ಶರದ್ ಪವಾರ್ ಕೆಂಗೆಣ್ಣಿಗೆ ಗುರಿಯಾಗಿದ್ದ ಜಿತ್ ಪವಾರ್, ಇದೀಗ ಬಿಜೆಪಿಗೆ ಬೆಂಬಲ ವಾಪಸ್ ಪಡೆದು ಮಹಾರಾಷ್ಟ್ರ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.
ವಿ ಆರ್ 162: ಹೋಟೆಲ್ ಹಯಾತ್’ನಲ್ಲಿ ಮೈತ್ರಿಕೂಟ ಸಭೆ!
ಪಕ್ಷದ ನಿರ್ಧಾರದ ವಿರುದ್ಧ ಹೋಗುವ ವ್ಯಕ್ತಿ ನಾನಲ್ಲ ಎಂದು ಹೇಳಿರುವ ಅಜಿತ್ ಪವಾರ್, ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ನಡೆಸಿದ ಸಂಧಾನ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಅಜಿತ್ ಪವಾರ್ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಫಡ್ನವೀಸ್‌ಗೆ 'ಮಹಾ' ಪರೀಕ್ಷೆ: ನಾಳೆಯೇ ಬಹುಮತ ಸಾಬೀತುಪಡಿಸಿ, ರಹಸ್ಯ ಮತದಾನ ಬೇಡ: ಸುಪ್ರೀಂ
ನಾಳೆ(ನ.27) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಬಿಜೆಪಿಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಅಜಿತ್ ಪವಾರ್ ರಾಜೀನಾಮೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.