ಔರಂಗಾಬಾದ್‌[ಜ.18]: ಮಹಾರಾಷ್ಟ್ರದಲ್ಲಿ ಈಗ ಶಿರಡಿ ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ವಿವಾದ ಎದ್ದಿದ್ದು, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಸರ್ಕಾರ ಹಾಗೂ ವಿಪಕ್ಷ ಬಿಜೆಪಿ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪರಭಣಿ ಜಿಲ್ಲೆಯ ಪತ್ರಿ ಗ್ರಾಮವನ್ನು ಸಾಯಿಬಾಬಾ ಜನ್ಮಸ್ಥಳ ಎಂಬ ಕಾರಣಕ್ಕೆ ಪ್ರಚುರಪಡಿಸುವ ಸರ್ಕಾರದ ನಿರ್ಧಾರ ಖಂಡಿಸಿ ಶಿರಡಿ ಜನತೆ ಜನವರಿ 19ರಂದು ಶಿರಡಿ ಬಂದ್‌ಗೆ ಕರೆ ನೀಡಿದ್ದಾರೆ.

ಶಿರಡಿ ಸಾಯಿ ಬಾಬಾ ಮಂದಿರಕ್ಕೆ ದಾಖಲೆಯ 287 ಕೋಟಿ ದೇಣಿಗೆ!

‘ಪತ್ರಿ ಗ್ರಾಮವು ಸಾಯಿಬಾಬಾ ಜನ್ಮಸ್ಥಳ. ಪತ್ರಿ ಸಾಯಿಬಾಬಾ ಅವರ ಜನ್ಮ ಭೂಮಿ, ಶಿರಡಿ ಕರ್ಮ ಭೂಮಿ. ಎರಡೂ ಸ್ಥಳಗಳಿಗೆ ಸಮಾನ ಆದ್ಯತೆ ಕೊಟ್ಟು ಅಭಿವೃದ್ಧಿ ಪಡಿಸಲಾಗುವುದು’ ಎಂದು ಎನ್‌ಸಿಪಿ ಶಾಸಕ ದುರಾನಿ ಅಬ್ದುಲ್ಲಾ ಖಾನ್‌ ಹೇಳಿದ್ದಾರೆ.

"

ಅಲ್ಲದೆ, ‘ಪತ್ರಿಯಲ್ಲಿ ಪ್ರವಾಸಿಗರ ಮೂಲಸೌಕರ್ಯ ಅಭಿವೃದ್ಧಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಇತ್ತೀಚೆಗೆ 100 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿರಡಿ ಮಹತ್ವ ಕಳೆದುಕೊಳ್ಳಲಿದೆ ಎನ್ನುವ ಆತಂಕ ಅಲ್ಲಿನ ಜನರಲ್ಲಿ ಮನೆ ಮಾಡಿದೆ. ಪತ್ರಿಯು ಬಾಬಾರ ಜನ್ಮಸ್ಥಳ ಎಂದು ಎನ್ನಿಸಿಕೊಳ್ಳಬಾರದು ಎಂಬುದು ಶಿರಡಿ ಜನರ ಅನಿಸಿಕೆ. ಆದರೆ ಈ ಬಗ್ಗೆ ಜನ ಆತಂಕ ಪಡಬೇಕಾಗಿಲ್ಲ. ಎರಡೂ ಊರುಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಖಾನ್‌ ಹೇಳಿಕೆಗೆ ಬಿಜೆಪಿ ಸಂಸದ ಸುಜಯ್‌ ವಿಖೆ ಪಾಟೀಲ್‌ ಆಕ್ಷೇಪಿಸಿದ್ದಾರೆ. ‘ಶಿವಸೇನೆ ನೇತೃತ್ವದ ಸರ್ಕಾರ ಬಂದ ನಂತರ ಸಾಯಿಬಾಬಾ ಜನ್ಮಸ್ಥಳದ ವಿವಾದ ಧುತ್ತೆಂದು ಎದ್ದಿದೆ. ಬಾಬಾ ಜನ್ಮಸ್ಥಳದ ಬಗ್ಗೆ ಯಾವತ್ತೂ ವಿವಾದ ಇರಲಿಲ್ಲ. ಬಾಬಾ ಕೂಡ ತಮ್ಮ ಹುಟ್ಟೂರಿನ ಬಗ್ಗೆ ಯಾವತ್ತೂ ಮಾತಾಡಿರಲಿಲ್ಲ. ಪತ್ರಿಯ ಜನರೂ ಈ ಬಗ್ಗೆ ಮಾತನಾಡಿರಲಿಲ್ಲ. ಜನ್ಮಭೂಮಿಗಿಂತ ಕರ್ಮಭೂಮಿ ಮುಖ್ಯ. ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದರೆ ಶಿರಡಿ ಜನರು ಕೋರ್ಟ್‌ ಮೊರೆ ಹೋಗಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.

ಶಿರಡಿ ಬಂದ್

ಇನ್ನು ಏಕಾಏಕಿ ಉಂಟಾದ ಈ ವಿವಾದ ಹಾಗೂ ಸಂಘರ್ಷದಿಂದ ಭಾನುವಾರದಿಂದ ಶಿರಡಿ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಶಿರಡಿ ದೇವಾಲಯಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ ದೇವಾಲಯ, ಸಾಯಿ ಪ್ರಸಾದಾಲಯ, ಸಾಯಿ ಆಸ್ಪತ್ರೆ, ಸಾಯಿ ಭಕ್ತ ನಿವಾಸ್ ಮತ್ತು ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.ಮಹಾರಾಽ್ಟ್ರ ಸಾರಿಗೆ ಬಸ್‌ಗಳು ಮತ್ತು ಹೋಟೆಲ್‌ಗಳು ಕೂಡಾ ತೆರೆದುಕೊಂಡಿರುತ್ತವೆ. ಆದರೆ ಖಾಸಗಿ ವಾಹನಗಳು ರಸ್ತೆಗಿಳಿಯುವುದಿಲ್ಲ. ಇದರಿಂದ ಇಲ್ಲಿಗಾಘಮಿಸುವ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ.

ಮೋದಿ ಕ್ಷೇತ್ರ ಎಂಬ ಕಾರಣದಿಂದಲ್ಲ, ಇಷ್ಟೆಲ್ಲಾ ನೋಡುವುದಿದೆ ವಾರಣಾಸಿಯಲ್ಲಿ!

ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ