ಹೊಸ ಸಂವಿಧಾನ ರಚನೆ| ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಬಗ್ಗೆ ಆರೆಸ್ಸೆಸ್‌ ಸ್ಪಷ್ಟನೆ

ನಾಗ್ಪುರ[ಜ.18]: ಹೊಸ ಸಂವಿಧಾನ ಶೀರ್ಷಿಕೆ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಭಾವಚಿತ್ರ ಇರುವ ಕಡತವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಪೋಸ್ಟ್‌ಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಆರ್‌ಎಸ್‌ಎಸ್‌ ಶುಕ್ರವಾರ ಸ್ಪಷ್ಟನೆ ನೀಡಿದೆ.

'ಹಿಂದೆಯೂ RSS ಇತ್ತು, ಆದರೆ ಈ ಥರ ಇರ್ಲಿಲ್ಲ, ಈಗ ಫುಲ್ ರೌಡಿಸಂ'..!

ಭಾರತದ ಸಂವಿಧಾನದಲ್ಲಿ ಆರ್‌ಎಸ್‌ಎಸ್‌ ಸಂಪೂರ್ಣ ನಂಬಿಕೆ ಇಟ್ಟಿದೆ. ಹೊಸ ಸಂವಿಧಾನದ ಪ್ರಸ್ತಾವನೆಯನ್ನು ಆರ್‌ಎಸ್‌ಎಸ್‌ ಮುಂದಿಟ್ಟಿಲ್ಲ. ಇದೊಂದು ಸಂಘಟನೆಯ ಹೆಸರು ಕೆಡಿಸುವ ಯತ್ನ ಎಂದು ಆರ್‌ಎಸ್‌ಎಸ್‌ ಮುಖಂಡ ಶ್ರೀಧರ್‌ ಗಡ್ಗೆ ಹೇಳಿದ್ದಾರೆ.

Scroll to load tweet…

ನಯಾ ಭಾರತ್‌ ಸಂವಿಧಾನ್‌ ಎಂಬ ಶೀರ್ಷಿಕೆ ಇರುವ 15 ಪುಟಗಳ ಕಡತ ಮತ್ತು ಮುಖ ಪುಟದ ಮೇಲೆ ಮೋಹನ್‌ ಭಾಗವತ್‌ ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

'20 ವರ್ಷ ಬೇಕಾದ್ರೆ ಆಳ್ವಿಕೆ ಮಾಡಿ, ಜನರಿಗೆ ವಿಷ ಹಾಕ್ಬೇಡಿ'