ಲಿವ್-ಇನ್ ಸಂಬಂಧವೆಂಬುದು ಭಾರತೀಯ ಸಂಪ್ರದಾಯದ ಗಾಂಧರ್ವ ವಿವಾಹಕ್ಕೆ ಸಮ. ಹಾಗಾಗಿ ಲಿವ್‌-ಇನ್‌ನಲ್ಲಿರುವ ಮಹಿಳೆಯರನ್ನು ಕಾನೂನು ರಕ್ಷಣೆಯಿಂದ ಹೊರಗಿಡಬಾರದು. ಸೂಕ್ತ ಸಂದರ್ಭಗಳಲ್ಲಿ ಅವರಿಗೆ ಹೆಂಡತಿಯ ಸ್ಥಾನಮಾನ ನೀಡಬೇಕು ಎಂದ ಮದ್ರಾಸ್ ಹೈಕೋರ್ಟ್‌

 ಮದುರೈ: ಲಿವ್-ಇನ್ ಸಂಬಂಧವೆಂಬುದು ಭಾರತೀಯ ಸಂಪ್ರದಾಯದ ಗಾಂಧರ್ವ ವಿವಾಹಕ್ಕೆ ಸಮ. ಹಾಗಾಗಿ ಲಿವ್‌-ಇನ್‌ನಲ್ಲಿರುವ ಮಹಿಳೆಯರನ್ನು ಕಾನೂನು ರಕ್ಷಣೆಯಿಂದ ಹೊರಗಿಡಬಾರದು. ಸೂಕ್ತ ಸಂದರ್ಭಗಳಲ್ಲಿ ಅವರಿಗೆ ಹೆಂಡತಿಯ ಸ್ಥಾನಮಾನ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಬುಧವಾರ ಅಭಿಪ್ರಾಯಪಟ್ಟಿದೆ.

 ಲಿವ್‌-ಇನ್ ಸಂಬಂಧದಲ್ಲಿದ್ದ-ಆಕೆಗೆ ಕೈಕೊಟ್ಟು ಜೈಲು ಪಾಲಾಗಿದ್ದ

ತಿರುಚಿರಾಪಳ್ಳಿಯ ವ್ಯಕ್ತಿಯೊಬ್ಬ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಲಿವ್‌-ಇನ್ ಸಂಬಂಧದಲ್ಲಿದ್ದು, ದೈಹಿಕ ಸಂಬಂಧ ಬೆಳೆಸಿದ್ದ. ಆ ಬಳಿಕ ಆಕೆಗೆ ಕೈಕೊಟ್ಟು ಜೈಲು ಪಾಲಾಗಿದ್ದ. ಆತನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶ್ರೀಮತಿ, ‘ಲಿವ್-ಇನ್ ಸಂಬಂಧಗಳು ಭಾರತೀಯ ಸಮಾಜಕ್ಕೆ ಸಾಂಸ್ಕೃತಿಕ ಆಘಾತ. ಆದಾಗ್ಯೂ ಅವು ಪ್ರಚಲಿತದಲ್ಲಿವೆ. ಪ್ರಾಚೀನ ಭಾರತದಲ್ಲಿ 8 ಬಗೆಯ ವಿವಾಹಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಪರಸ್ಪರ ಪ್ರೀತಿ ಮತ್ತು ಒಪ್ಪಿಗೆಯಿಂದ ಒಂದಾಗುವ ಗಾಂಧರ್ವ ವಿವಾಹವೂ ಒಂದು. ಇಂದಿನ ಲಿವ್-ಇನ್ ಸಂಬಂಧಗಳನ್ನು ಅದೇ ದೃಷ್ಟಿಯಲ್ಲಿ ನೋಡಬೇಕು’ ಎಂದರು.

ಮಹಿಳೆಯ ಶೀಲವನ್ನು ಪ್ರಶ್ನಿಸುತ್ತಾರೆ

ಜೊತೆಗೆ, ‘ಮೊದಲು ಗಂಡಸರು ತಮ್ಮನ್ನು ತಾವು ನವಕಾಲದ ವ್ಯಕ್ತಿಗಳು ಎಂದು ಬಿಂಬಿಸಿಕೊಳ್ಳುತ್ತಾರೆ. ಸಂಬಂಧ ಹದಗೆಟ್ಟಾಗ, ಮಹಿಳೆಯ ಶೀಲವನ್ನು ಪ್ರಶ್ನಿಸುತ್ತಾರೆ. ಅಂಥ ಗಂಡಸರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.