ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!

ನಿರ್ಭಯಾ ತಾಯಿ ತನ್ನ ಮಗಳಿಗೆ ನ್ಯಾಯ ನೀಡಿ, ಅಪರಾಧಿಗಳನ್ನು ಗಲ್ಲಿಗೇರಿಸಿ ಎಂದು ಕಳೆದ 8 ವರ್ಷಗಳಿಂದ ಹೋರಾಡುತ್ತಲೇ ಬಂದಿದ್ದರೆ. ಹೀಗಿರುವಾಗ ಹಿರಿಯ ವಕೀಲೆ ಇಂಧಿರಾ ಜೈಸಿಂಗ್‌ರವರ ಟ್ವೀಟ್, ನಿರ್ಭಯಾ ತಾಯಿ ಆಶಾ ದೇವಿ ಆಕ್ರೋಶಕ್ಕೆ ಕಾರಣವಾಗಿದೆ. ಮಗಳನ್ನು ಅತ್ಯಾಚಾರಗೈದ ಅಪರಾಧಿಗಳನ್ನು ಕ್ಷಮಿಸಿ ಎನ್ನಲು ಅವರಿಗೆಷ್ಟು ಧೈರ್ಯ ಎಂದು ಸಿಡಿದಿದ್ದಾರೆ.


ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾಗೆ ಸರಣಿ ಪ್ರಶ್ನೆಗಳ ಬಾಣ ಬಿಟ್ಟ ಸಿದ್ದು

ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಗಿಬಿದ್ದಿದ್ದಾರೆ. ಇಂದು (ಶನಿವಾರ) ಸಂಜೆ ಹುಬ್ಬಳ್ಳಿಯಲ್ಲಿರ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗಾಗಿ ಶಾ ಬೆಂಗಳೂರಿಗೆ ಬಂದಿದ್ದು, ಇಲ್ಲಿಂದ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಕೇರಳದಲ್ಲಿ ಮೋದಿ ಹೊಗಳಿದ ರಾಮಚಂದ್ರ ಗುಹಾ!

ಪ್ರಧಾನಿ ಮೋದಿಯನ್ನು ಟೀಕಿಸುತ್ತಿದ್ದ ಇತಿಹಾಸ ತಜ್ಞ ರಾಮಚಂದ್ರ ಗುಹಾ ಇದೇ ಮೊದಲ ಬಾರಿ ಪ್ರಧಾನಿ ಮೋದಿ ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದಾರೆ ಎನ್ನುವ ಮೂಲಕ ಹಾಡಿ ಹೊಗಳಿದ್ದಾರೆ. ಈ ವಿಚಾರ ಹಲವರನ್ನು ಅಚ್ಚರಿಗೀಡು ಮಾಡಿದೆ.

ಸಾಯಿಬಾಬಾ ಜನ್ಮಸ್ಥಳ ವಿವಾದ, ಶಿರಡಿ ಅನಿರ್ದಿಷ್ಟಾವಧಿ ಬಂದ್! 

ಮಹಾರಾಷ್ಟ್ರದಲ್ಲಿ ಈಗ ಶಿರಡಿ ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ವಿವಾದ ಎದ್ದಿದ್ದು, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಸರ್ಕಾರ ಹಾಗೂ ವಿಪಕ್ಷ ಬಿಜೆಪಿ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪರಭಣಿ ಜಿಲ್ಲೆಯ ಪತ್ರಿ ಗ್ರಾಮವನ್ನು ಸಾಯಿಬಾಬಾ ಜನ್ಮಸ್ಥಳ ಎಂಬ ಕಾರಣಕ್ಕೆ ಪ್ರಚುರಪಡಿಸುವ ಸರ್ಕಾರದ ನಿರ್ಧಾರ ಖಂಡಿಸಿ ಶಿರಡಿ ಜನತೆ ಜನವರಿ 19ರಂದು ಶಿರಡಿ ಬಂದ್‌ಗೆ ಕರೆ ನೀಡಿದ್ದಾರೆ.

ಬ್ಯಾನರ್ to ಹೆಡ್‌ಫೋನ್: INDvAUS ಬೆಂಗಳೂರು ಪಂದ್ಯಕ್ಕೆ ಈ ವಸ್ತುಗಳು ಬ್ಯಾನ್!

ಜನವರಿ 19ರ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ಇಲ್ಲಿ ಗಮನಿಸಿ. ಕಾರಣ ಹಲವು ವಸ್ತುಗಳನ್ನು ಕ್ರೀಡಾಂಗಣದೊಳಕ್ಕೆ ಕೊಂಡೊಯ್ಯವುದು ನಿಷೇಧಿಸಲಾಗಿದೆ.

ಗಗನಸಖಿಯಾಗಬೇಕಿದ್ದ ಟಿಕ್‌ಟಾಕ್‌ ಹುಡ್ಗಿ ಕಿರುತೆರೆ ನಟಿಯಾದ ಕಥೆ ಇದು!...

'ಕಲರ್ಸ್ ಕನ್ನಡ' ದಲ್ಲಿ ಪ್ರಸಾರವಾಗುವ 'ಗೀತಾ' ಧಾರಾವಾಹಿ ಈಗ ಮನೆ-ಮನೆಗಳ ಮಾತಾಗಿದೆ . ಅದರಲ್ಲೂ ಮುದ್ದು ಮುಖದ ನಾಯಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಅವರೇ ಗೀತಾ ಅಲಿಯಾಸ್ ಭವ್ಯಾ ಗೌಡ. ಅಷ್ಟಕ್ಕೂ ಭವ್ಯಾ ಕಿರುತೆರೆ ಜರ್ನಿ ಶುರು ಮಾಡಿದ್ದು ಹೇಗೆ? ಅನ್ನೋ ಮಾಹಿತಿ ಬಹಿರಂಗವಾಗಿದೆ.

ಕಿಚ್ಚ ಅಭಿಮಾನಿಗಳಿಗೆ ರಾಜಮೌಳಿ ಗುಡ್ ನ್ಯೂಸ್, ಫ್ಯಾನ್ಸ್‌ ಫುಲ್ ಖುಷ್!

ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕಿಚ್ಚಿ ಸುದೀಪ್‌ಗೆ ಅವಕಾಶ ಕೊಟ್ಟಿದ್ದರು. ಅದ್ಭುತ ನಟನೆಯಿಂದ ಬೇಷ್ ಎನಿಸಿಕೊಂಡ ಕಿಚ್ಚಗೆ ಬಿಗ್ ಬಜೆಟ್ ಚಿತ್ರ 'ಬಾಹುಬಲಿ-1'ರಲ್ಲಿ ಗೆಸ್ಟ್ ರೋಲ್ ಕೊಡಲಾಗಿತ್ತು. ಆದರೆ, ಬಾಹುಬಲಿ-2ರಲ್ಲಿ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಭ್ರಮನಿರಸನಗೊಂಡ ಸುದೀಪ್ ಅಭಿಮಾನಿಗಳಿಗೆ ರಾಜಮೌಳಿ ಶುಭ ಸುದ್ದಿ ಹೇಳುತ್ತಿದ್ದಾರೆ.

ಜೀವನದ ಭಾಗವಾದ ರಿಲಯನ್ಸ್: ಲಾಭದಲ್ಲಿ ಇದನ್ನು ಮೀರಿಸುವುದು ನೋ ಚಾನ್ಸ್!

2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಲಾಭದ ಒಟ್ಟು ಮೌಲ್ಯ 11,640 ಕೋಟಿ ರೂ. ಆಗಿದೆ.

ಫಾಸ್ಟ್ಯಾಗ್‌ ವ್ಯವಸ್ಥೆ ಬಂದ ಬಳಿಕ ಟೋಲ್‌ಗಳಲ್ಲಿ ಕಾಯುವಿಕೆ ಹೆಚ್ಚಳ!

ಸ್ತೆ ಬಳಕೆ ಶುಲ್ಕ ಪಾವತಿಸಲು ಟೋಲ್‌ ಪ್ಲಾಜಾಗಳಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುವುದು, ತನ್ಮೂಲಕ ಸಹಸ್ರಾರು ಕೋಟಿ ರು. ಮೌಲ್ಯದ ಇಂಧನ ವ್ಯರ್ಥವಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಫಾಸ್ಟ್ಯಾಗ್‌ ವ್ಯವಸ್ಥೆ ಜಾರಿಗೆ ತಂದಿದೆ. ಇದು ಜಾರಿಗೆ ಬಂದ ಬಳಿಕ ಡಿಜಿಟಲ್‌ ವಿಧಾನದಲ್ಲಿ ಸುಂಕ ಪಾವತಿ ಪ್ರಮಾಣ ಶೇ.60ರಷ್ಟುಹೆಚ್ಚಳವಾಗಿದೆ. ಆದರೆ ಫಾಸ್ಟ್ಯಾಗ್‌ ಬಂದ ಬಳಿಕ ಹೆದ್ದಾರಿಗಳಲ್ಲಿ ವಾಹನಗಳ ಕಾಯುವಿಕೆ ಪ್ರಮಾಣ ಶೇ.29ರಷ್ಟುಏರಿಕೆಯಾಗಿದೆ!

ಭಾರತೀಯ ಪೌರತ್ವ ಪಡೆದ ಪಾಕ್ ಮಹಿಳೆಗೆ ಚುನಾವಣೆಯಲ್ಲಿ ಭರ್ಜರಿ ಗೆಲುವು!

ದೇಶದೆಲ್ಲೆಡೆ ಪೌರತ್ವ ಕಾಯ್ದೆ ಹಾಗೂ NRC ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಪ್ರತಿಭಟನೆ ನಡುವೆಯೇ 2019ರ ಸೆಪ್ಟೆಂಬರ್ ನಲ್ಲಿ ಭಾರತೀಯ ಪೌರತ್ವ ಪಡೆದ ಪಾಕಿಸ್ತಾನ ವಲಸಿಗ ಮಹಿಳೆಯೊಬ್ಬರು ಚುನಾವಣೆಯೊಂದರಲ್ಲಿ ಗೆಲುವು ಸಾಧಿಸಿ 'ಜನನಾಯಕಿ'ಯಾಗಿದ್ದಾರೆ.