ಕರಾಚಿ(ಮಾ.02): ಪ್ರಯಾಣಿಕನ ಜೀವ ಉಳಿಸಲು ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನ ದಿಢೀರ್ ಮಾರ್ಗ ಬದಲಾಯಿಸಿ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಪೈಲೆಟ್ ಹಾಗೂ ವಿಮಾನದ ಸಿಬ್ಬಂದಿಗಳ ಪ್ರಯತ್ನ ಕೈಗೂಡಲಿಲ್ಲ. ಪ್ರಯಾಣಿಕ ಸಾವನ್ನಪ್ಪಿದ್ದಾನೆ.

ಜರ್ಮನಿಗೆ ಹೊರಟಿದ್ದ ವಿಮಾನ ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ

ಶಾರ್ಜಾದಿಂದ ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ  6E 1412 ಲಕ್ನೋದತ್ತ ಪ್ರಯಾಣ ಬೆಳೆಸಿತ್ತು. ಆದರೆ ಮಾರ್ಗ ಮಧ್ಯೆ ಪ್ರಯಾಣಿಕನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ತುರ್ತು ವೈದ್ಯಕೀಯ ಕಾರಣದಿಂದ ಲಕ್ನೋ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನ, ಮಾರ್ಗ ಬದಲಾಯಿಸಿ ದಿಢೀರ್ ಪಾಕಿಸ್ತಾನದ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.

ಗೋವಾಕ್ಕೆ ಹೊರಟಿದ್ದ ವಿಮಾನ ಬೆಂಗ್ಳೂರಲ್ಲಿ ತುರ್ತು ಭೂಸ್ಪರ್ಶ

ಕರಾಚಿಯಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ವೈದ್ಯಕೀಯ ತಂಡ ಪ್ರಯಾಣಿಕನ ಆರೋಗ್ಯ ತಪಾಸಣೆಗೆ ಮುಂದಾಗಿದೆ. ಅಷ್ಟರಲ್ಲೇ ಪ್ರಯಾಣಿಕನ ಸಾವನ್ನಪ್ಪಿದ್ದ. ಪ್ರಯಾಣಿಕ ಸಾವಿಗೆ ಇಂಡಿಗೋ ವಿಮಾನ ಸಂಸ್ಥೆ ಸಂತಾಪ ಸೂಚಿಸಿದೆ.

ಇತ್ತೀಚೆಗೆ ಭಾರತ ಏರ್ ಆ್ಯಂಬುಲೆನ್ಸ್ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಆಗಿತ್ತು. ಇಂಧನ ತುಂಬಿಸಿಕೊಳ್ಳುವ ಸಲುವಾಗಿ ಆ್ಯಂಬುಲೆನ್ಸ್ ಪಾಕಿಸ್ತಾನ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು.