ಪೇದೆಯ ಮಗಳಾಗಿ ಹುಟ್ಟಿ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿ ಬದಲಾದ ಶಯಿಸ್ಟಾ ಪರ್ವೀನ್
ಪೊಲೀಸ್ ಪೇದೆಯೊಬ್ಬರ ಮಗಳಾಗಿ ಹುಟ್ಟಿದ ಆಕೆಯನ್ನ ಪೊಲೀಸ್ ಇಲಾಖೆಯೇ ಬಹುಮಾನ ಘೋಷಿಸಿ ಹುಡುಕುವಂತಾಗಿದ್ದು ಆಕೆಯ ಬದುಕಿನ ದುರಂತವೇ ಸರಿ.
ಲಕ್ನೋ: ಪಾಸ್ತೋ ಭಾಷೆಯಲ್ಲಿ ಶಯಿಸ್ಟಾ ಅಂದ್ರೆ ಸೌಂದರ್ಯ ಅಂತೆ. ಆದರೆ ಸೌಂದರ್ಯವಿದ್ರೂ ಹಣೆಬರಹ ಮಾತ್ರ ಸರಿ ಇರಲಿಲ್ಲ, ಹೀಗಾಗಿ ಎಲ್ಲೋ ಇರ್ಬೇಕಾದವಳು ಗ್ಯಾಂಗ್‌ಸ್ಟಾರ್ ಪತ್ನಿಯಾದ್ಲು. ಇದು ಪೊಲೀಸರೆದುರೇ ಗುಂಡಿಗೆ ಬಲಿಯಾದ ಅತೀಕ್ ಅಹ್ಮದ್ ಪತ್ನಿ ಶಯಿಸ್ಟಾ ಪರ್ವಿನ್ ಹಣೆಬರಹ. ಪೊಲೀಸ್ ಪೇದೆಯೊಬ್ಬರ ಮಗಳಾಗಿ ಹುಟ್ಟಿದ ಆಕೆಯನ್ನ ಪೊಲೀಸ್ ಇಲಾಖೆಯೇ ಬಹುಮಾನ ಘೋಷಿಸಿ ಹುಡುಕುವಂತಾಗಿದ್ದು ಆಕೆಯ ಬದುಕಿನ ದುರಂತವೇ ಸರಿ. ಇಂದು ಉತ್ತರಪ್ರದೇಶ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಮೊದಲನೆಯೇ ಹೆಸರು ಶಯಿಸ್ಟಾ. ಈಕೆಯ ತಲೆಗೆ ಯುಪಿ ಪೊಲೀಸರು 50 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.
ಶಯಿಸ್ಟಾ ಪರ್ವೀನ್ ಬಾಲ್ಯಕ್ಕೂ ಈಗಿನ ಬದುಕಿಗೂ ಅಜಗಜಾಂತರ ವ್ಯತ್ಯಾಸ. ಹಾಗಂತ ಈ ಶಯಿಸ್ಟಾ ಪರ್ವೀನ್ ಬದುಕು ರಾತ್ರೋರಾತ್ರಿ ಬದಲಾಗಿದ್ದಲ್ಲ. ಪ್ರತಿಸಲವೂ ತನ್ನ ಗಂಡ ಅತೀಕ್ ಅಹ್ಮದ್ ಹಾಗೂ ಮೈದುನ ಅಶ್ರಫ್ ಜೈಲಿಗೆ ಹೋದಾಗ ಅವರ ಸಾಮ್ರಾಜ್ಯವನ್ನು ನಿಭಾಯಿಸುತ್ತಿದ್ದಿದ್ದು, ಈ ಶಯಿಸ್ಟಾ ಪರ್ವೀನ್, ಪ್ರಸ್ತುತ 50ರ ಹರೆಯದಲ್ಲಿರುವ ಶಯಿಸ್ಟಾ ಪ್ರಯಾಗ್‌ರಾಜ್‌ನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ ತನ್ನನ್ನು ಮನೆಕೆಲಸಕ್ಕೆ ಸೀಮಿತಗೊಳಿಸಿಕೊಂಡಿದ್ದಳು. ಆದರೆ ಮದುವೆ ಆಕೆಯ ಬದುಕನ್ನೇ ಬದಲಿಸಿತ್ತು. 1996ರಲ್ಲಿ ಅತೀಕ್ ಅಹ್ಮದ್ (Atiq ahmed) ಜೊತೆ ಈ ಶಯಿಸ್ಟಾ ಮದ್ವೆ ನಡೆದಿತ್ತು. ನಂತರ ಆತ ಗ್ಯಾಂಗ್‌ಸ್ಟಾರ್ ಆಗಿ ಬದಲಾಗಿದ್ದ. ಐವರು ಗಂಡು ಮಕ್ಕಳನ್ನು ಹೊಂದಿದ್ದ ಅತೀಕ್ ಹಾಗೂ ಶಯಿಸ್ಟಾ ಓರ್ವ ಪುತ್ರ ಇತ್ತೀಚೆಗೆ ಪೊಲೀಸ್ ಎನ್‌ಕೌಂಟರ್‌ಗೆ (encounter) ಬಲಿಯಾಗಿದ್ದ. ನಂತರದವರು ಅಲಿ ಹಾಗೂ ಉಮರ್ ಜೊತೆಗೆ ಇನ್ನಿಬ್ಬರು ಗಂಡು ಮಕ್ಕಳು ಅಪ್ರಾಪ್ತರಾಗಿದ್ದಾರೆ.
ಅತೀಕ್ ಅಹ್ಮದ್ ಹತ್ಯೆ ಕೇಸ್: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ
ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್ (Police constable) ಮೊಹಮ್ಮದ್ ಹಾರೂನ್ ಮಗಳಾದ ಶಯಿಸ್ಟಾ ಕುಟುಂಬ ಪ್ರಯಾಗ್‌ರಾಜ್‌ನ ದಮ್‌ಪುರ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು. ನಾಲ್ವರು ಸಹೋದರಿಯರು ಇಬ್ಬರು ಸಹೋದರರ ದೊಡ್ಡ ಕುಟುಂಬದಲ್ಲಿ ಜನಿಸಿದ ಶಾಯಿಸ್ಟಾ ಒಡಹುಟ್ಟಿದ್ದವರಲ್ಲಿ ಎಲ್ಲರಿಗಿಂತ ದೊಡ್ಡವಳಾಗಿದ್ದು ಪೋಷಕರೊಂದಿಗೆ ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ವಾಸವಿದ್ದಳು. ಈಕೆಯ ಒಬ್ಬ ಸಹೋದರ ಮದ್ರಾಸವೊಂದರ ಪ್ರಿನ್ಸಿಪಾಲ್ ಆಗಿದ್ದ. ಆಕೆ ಬಾಲ್ಯದಲ್ಲಿ ಸೌಮ್ಯವಾಗಿದ್ದಳು ಸೌಜನ್ಯದ ನಡವಳಿಕೆಯಾವಳಾಗಿದ್ದಳು ಎಂದು ಪ್ರಯಾಗ್‌ರಾಜ್‌ನ (Prayagraj) ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಮಾಧ್ಯಮಗಳಿಗೆ ಹೇಳಿದ್ದರು.
ಸೌಮ್ಯಳಾಗಿದ್ದ ಶಯಿಸ್ಟಾ ಪಾತಕ ಲೋಕದ ಮುನ್ನೆಲೆಗೆ ಬಂದಿದ್ಹೇಗೆ?
ಫೆ.24 ರಂದು ನಡೆದ ವಕೀಲ ಉಮೇಶ್ ಪಾಲ್ (Umesh Pal) ಕೊಲೆ ಪ್ರಕರಣದಲ್ಲಿ ಶಯಿಸ್ಟಾ ಮುನ್ನೆಲೆಗೆ ಬಂದಳು. ಪೊಲೀಸ್ ಮೂಲಗಳ ಪ್ರಕಾರ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದ ಪತಿ ಅತೀಕ್‌ನನ್ನು ಆಕೆ ಭೇಟಿ ಮಾಡಲು ಹೋಗುತ್ತಿದ್ದಳು. ಅಲ್ಲಿಯೇ ಈ ಜೋಡಿ ಉಮೇಶ್ ಪಾಲ್ ಕೊಲೆಗೆ ಸಂಚು ರೂಪಿಸಿದ್ದರು. ಜೈಲೊಳಗೆ ಫೋನ್ ಹಾಗೂ ಸಿಮ್ ಕಾರ್ಡ್ ಕಳುಹಿಸುವಂತೆ ಆಕೆಗೆ ಅತೀಕ್ ಹೇಳಿದ್ದ. ಅಲ್ಲದೇ ತನಗೆ ಫೋನ್ ನೀಡಬಹುದಾದ ಪೊಲೀಸ್ ಪೇದೆಯೋರ್ವನ ಹೆಸರನ್ನು ಕೂಡ ಆತ ಪತ್ನಿಗೆ ಹೇಳಿದ್ದ. ಇದಾದ ಒಂದು ದಿನದ ನಂತರ ಅತೀಕ್‌ಗೆ ಫೋನ್ ಸಿಕ್ಕಿತ್ತು. ಹಾಗೂ ಆತ ಶೂಟರ್‌ಗಳ ಜೊತೆ ಮಾತನಾಡಿ ಅಲ್ಲಿಂದಲೇ ವಕೀಲ ಉಮೇಶ್ ಪಾಲ್ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನುತ್ತವೆ ಪೊಲೀಸ್ ಮೂಲಗಳು.
ಎನ್‌ಕೌಂಟರ್: ಪುತ್ರನ ನನೆದು ಕೋರ್ಟ್‌ನಲ್ಲೇ ಗಳಗಳನೇ ಅತ್ತ ಗ್ಯಾಂಗ್‌ಸ್ಟಾರ್ ಅತೀಕ್
ಆಸ್ತಿ ಮಾರಾಟ ವ್ಯವಹಾರದ ದಲ್ಲಾಳಿಯಾಗಿರುವ ಝೀಶನ್ ಎಂಬಾತನಿಗೆ ಈ ಶಯಿಸ್ಟಾ ಹಫ್ತಾ ನೀಡುವಂತೆ ಹಲವು ಬಾರಿ ಫೋನ್‌ನಲ್ಲಿಯೇ ಬೆದರಿಕೆ ಹಾಕಿದ್ದಳು ಎಂದು ಝೀಶನ್ ಆರೋಪಿಸಿದ್ದ. ಉಮೇಶ್ ಪಾಲ್ ಹತ್ಯೆಯ ನಂತರ ಈಕೆ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದು, ಈಕೆಯ ವಿರುದ್ಧ ಕೊಲೆ ಹಾಗೂ ಮೂರು ವಂಚನೆ ಪ್ರಕರಣಗಳಿವೆ. ಇದಕ್ಕೂ ಮೊದಲು ಸೆಪ್ಟೆಂಬರ್ 2021ರಲ್ಲಿ ಶಯಿಸ್ಟಾ ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷವನ್ನು ಸೇರಿದ್ದಳು. ನಂತರ 2023ರ ಜನವರಿಯಲ್ಲಿ ಬಿಎಸ್‌ಪಿ ಸೇರಿ ಮೇಯರ್ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿದ್ದಳು. ಆದರೆ ಉಮೇಶ್ ಪಾಲ್ ಹತ್ಯೆಯ ಬಳಿಕ ಬಿಎಸ್‌ಪಿ (BSP) ಪಕ್ಷವೂ ಆಕೆಯಿಂದ ಅಂತರ ಕಾಯ್ದುಕೊಂಡಿತ್ತು.