ಎನ್‌ಕೌಂಟರ್: ಪುತ್ರನ ನನೆದು ಕೋರ್ಟ್‌ನಲ್ಲೇ ಗಳಗಳನೇ ಅತ್ತ ಗ್ಯಾಂಗ್‌ಸ್ಟಾರ್ ಅತೀಕ್

ಮಗ ಅಸದ್‌ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಧಿತ ಪಾತಕಿ ಅತೀಕ್‌ ಅಹ್ಮದ್‌, ಪ್ರಯಾಗ್‌ರಾಜ್‌ನ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಕೋರ್ಟಿನಲ್ಲಿ ಗಳಗಳನೇ ಅತ್ತ ಪ್ರಸಂಗ ನಡೆದಿದೆ.

Uttar Pradesh Gangstar Atiq ahmed cried in court after his son died in police encounter akb

ಲಕ್ನೋ: ಮಗ ಅಸದ್‌ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಧಿತ ಪಾತಕಿ ಅತೀಕ್‌ ಅಹ್ಮದ್‌, ಪ್ರಯಾಗ್‌ರಾಜ್‌ನ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಕೋರ್ಟಿನಲ್ಲಿ ಗಳಗಳನೇ ಅತ್ತ ಪ್ರಸಂಗ ನಡೆದಿದೆ.  ಉತ್ತರ ಪ್ರದೇಶದ ಮಾಜಿ ಶಾಸಕ, ಮಾಜಿ ಸಂಸದ ಹಾಗೂ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ಪುತ್ರ ಮತ್ತು ಆತನ ಸಹಚರನನ್ನು ಪೊಲೀಸರು ನಿನ್ನೆ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ಯಾಂಗ್‌ಸ್ಟಾರ್ ಕೋರ್ಟ್‌ನಲ್ಲೇ ಕಣ್ಣೀರಿಟ್ಟಿದ್ದಾನೆ. 

5 ಬಾರಿ ಸಮಾಜವಾದಿ (Samajawadi Party) ಪಕ್ಷದಿಂದ ಶಾಸಕ ಹಾಗೂ 1 ಬಾರಿ ಸಂಸದನಾಗಿದ್ದ ಅತೀಕ್‌, 2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕ (BSP MLA) ರಾಜು ಪಾಲ್‌ (Raju Pal) ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸದ್ಯ ಆತ ಜೈಲಿನಲ್ಲಿದ್ದು, ತಲೆಮರೆಸಿಕೊಂಡಿದ್ದ ಅವನ ಮಗ ಅಸದ್‌ ಅಹ್ಮದ್‌, ತನ್ನ ತಂದೆಯನ್ನು ಬಿಡಿಸಿಕೊಳ್ಳಲು ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾಗ ಝಾನ್ಸಿಯಲ್ಲಿ ಗುರುವಾರ ಎನ್‌ಕೌಂಟರ್‌ ನಡೆದಿದೆ.

ಗ್ಯಾಂಗ್‌ಸ್ಟರ್ ಪುತ್ರನ ಎನ್‌ಕೌಂಟರ್ ಬಳಿಕ ಮತ್ತೆ ವೈರಲ್ ಆಗ್ತಿದೆ ಯೋಗಿ ಅಂದು ಸದನದಲ್ಲಿ ನೀಡಿದ ಹೇಳಿಕೆ

ದಾಳಿಗೆ ಯತ್ನಿಸಿದವರೇ ಗುಂಡಿಗೆ ಬಲಿ:

ಗುರುವಾರ ಅತೀಕ್‌ನನ್ನು (Atiq ahmed) ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಪಡೆದಿದ್ದಾರೆ. ಬಳಿಕ ಜೈಲಿಗೆ ಕರೆದೊಯ್ಯುವಾಗ ಝಾನ್ಸಿಯಲ್ಲಿ ಅಸದ್‌ ಹಾಗೂ ಗುಲಾಮ್‌ ಬೈಕ್‌ನಲ್ಲಿ ಬಂದು ಅತೀಕ್‌ನನ್ನು ಬಿಡಿಸಲು ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರಂತೆ ಅವರನ್ನು ಮಟ್ಟಹಾಕಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಝಾನ್ಸಿಯಲ್ಲಿ (Jhansi) ಆರೋಪಿಗಳು ಬೈಕ್‌ನಲ್ಲಿ ಹೋಗುತ್ತಿದ್ದಾಗ ಪೊಲೀಸರು ಅಡ್ಡಹಾಕಿದ್ದಾರೆ. ಆಗ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ಹತ್ಯೆಗೈದಿದ್ದಾರೆ. ಮೃತರ ಬಳಿ ವಿದೇಶಿ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ದೊರೆತಿವೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಗುಂಡಿನಚಕಮಕಿ ವೇಳೆ 42 ಸುತ್ತಿನ ಗುಂಡು ಹಾರಾಟ ನಡೆದಿದೆ.

ಸಾಕ್ಷ್ಯ, 2 ಪೊಲೀಸರ ಹತ್ಯೆಗೈದಿದ್ದರು

2005ರಲ್ಲಿ ರಾಜು ಪಾಲ್‌ ಎಂಬ ಬಿಎಸ್ಪಿ ಶಾಸಕನನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಕೈವಾಡ ಇದೆ ಎಂಬ ಆರೋಪವಿತ್ತು. ಈ ಪ್ರಕರಣದಲ್ಲಿ ಉಮೇಶ್‌ ಪಾಲ್‌ (Umesh pal) ಎಂಬಾತ ಪ್ರತ್ಯಕ್ಷ ಸಾಕ್ಷಿ ಆಗಿದ್ದ. ಆತನನ್ನು ಹಾಗೂ ಅವನ ಮನೆಯ ಹೊರಗೆ ಭದ್ರತೆಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಕಳೆದ ಫೆ.24ರಂದು ಪ್ರಯಾಗರಾಜ್‌ನಲ್ಲಿ (prayag raj) ಹತ್ಯೆಗೈಯಲಾಗಿತ್ತು. ಅಸದ್‌ ಹಾಗೂ ಗುಲಾಮ್‌ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಅವರಿಬ್ಬರೂ ತಲೆಮರೆಸಿಕೊಂಡು ವಿವಿಧ ರಾಜ್ಯಗಳಲ್ಲಿ ಮಾರುವೇಷದಲ್ಲಿ ಸಂಚರಿಸುತ್ತಿದ್ದರು. ಅವರನ್ನು ಹುಡುಕಿಕೊಟ್ಟವರಿಗೆ 5 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಆ ಪ್ರಕರಣದಲ್ಲೂ ಅತೀಕ್‌ ಪ್ರಮುಖ ಆರೋಪಿಯಾಗಿದ್ದಾನೆ.

ಉತ್ತರ ಪ್ರದೇಶದಲ್ಲಿ ನಡುಗಿದ ಮಾಫಿಯಾ, ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಪುತ್ರನ ಎನ್‌ಕೌಂಟರ್!

ಯೋಗಿ ಆದಿತ್ಯನಾಥ್‌ ಅಭಿನಂದನೆ

ಆರೋಪಿಗಳನ್ನು ಹತ್ಯೆಗೈದ ಎಸ್‌ಟಿಎಫ್‌ ತಂಡಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಎನ್‌ಕೌಂಟರ್‌ಗೆ ಉಮೇಶ್‌ ಪಾಲ್‌ ಅವರ ಪತ್ನಿ ಹಾಗೂ ತಾಯಿ ಧನ್ಯವಾದ ಸಲ್ಲಿಸಿದ್ದಾರೆ. ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು, ಇದು ಬಿಜೆಪಿ ಸರ್ಕಾರ. ಕ್ರಿಮಿನಲ್‌ಗಳನ್ನು ಬಿಟ್ಟು ಬಿಡುವ ಎಸ್‌ಪಿ ಸರ್ಕಾರ ಅಲ್ಲ. ನೀವು ಅಪರಾಧ ಮಾಡದಿದ್ದರೆ ಉತ್ತರ ಪ್ರದೇಶದಲ್ಲಿ ಯಾರೂ ನಿಮ್ಮನ್ನು ಮುಟ್ಟುವುದಿಲ್ಲ. ಅಪರಾಧ ಎಸಗಿದರೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಅತೀಕ್‌ಗೂ ಎನ್‌ಕೌಂಟರ್‌ ಭೀತಿ ಇತ್ತು

ಅಸದ್‌ ತಂದೆ, ಗ್ತಾಂಗ್‌ಸ್ಟರ್‌ ಅಸದ್‌ ತಂದೆ ಅತೀಕ್‌ಗೂ ಇತ್ತೀಚೆಗೆ ಎನ್‌ಕೌಂಟರ್‌ ಭೀತಿ ಕಾಡಿತ್ತು. ಪ್ರಕರಣವೊಂದರಲ್ಲಿ ಸಾಬರಮತಿ ಜೈಲಲ್ಲಿದ್ದ ಅತೀಕ್‌ನನ್ನು ಇತ್ತೀಚೆಗೆ ಉತ್ತರ ಪ್ರದೇಶ ಪೊಲೀಸರು ಲಖನೌಗೆ ಕರೆತಂದಿದ್ದರು. ಆಗ ಆತ ಕರೆತರುವ ವೇಳೆ ನನ್ನ ಎನ್‌ಕೌಂಟರ್‌ ಆಗಬಹುದು ಎಂದು ಭೀತಿ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ.

Latest Videos
Follow Us:
Download App:
  • android
  • ios