Asianet Suvarna News Asianet Suvarna News

Sabarimala Prasadam:ಅಯ್ಯಪ್ಪನ ಪ್ರಸಾದದಲ್ಲಿ ಹಲಾಲ್ ಬೆಲ್ಲ, ಕೋರ್ಟ್‌ ಮುಂದೆ TDB ಸ್ಪಷ್ಟನೆ

  • ಶಬರಿಮಲೆ ದೇವಸ್ಥಾನ ಪ್ರಸಾದದಲ್ಲಿ ಮುಸ್ಲಿಮರ ಹಲಾಲ್ ಬೆಲ್ಲ ಬಳಕೆ ಆರೋಪ
  • ಅರವಣ ಪಾಯಸದಲ್ಲಿ ಬಳಸಿರುವುದು ಹಲಾಲ್ ಬೆಲ್ಲ, ಭಾರಿ ವಿರೋಧ
  • PIL ವಿಚಾರಣೆ ನಡೆಸಿದ ಹೈಕೋರ್ಟ್, ಸ್ಪಷ್ಟನೆ ನೀಡಿದ ಮಂಡಳಿ
Shabarimalal Temple controversy halal jaggery not used to prepare Ayyappa prasada TBC Tells to Kerala HC ckm
Author
Bengaluru, First Published Nov 18, 2021, 6:50 PM IST

ಕೇರಳ(ನ.18): ಶ್ರದ್ಧಾ ಭಕ್ತಿ, ನಂಬಿಕೆಯ ಕೇಂದ್ರಬಿಂದುವಾಗಿದ್ದ ಪ್ರಸಿದ್ದ ಶಬರಿಮಲೆ ದೇವಸ್ಥಾನ(Sabarimala Temple) ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಈ ಹಿಂದೆ ಮಹಿಳೆಯರ ಪ್ರವೇಶ(Entry of women ) ವಿವಾದ ಭಾರಿ ಸದ್ದು ಮಾಡಿತ್ತು. ಇದೀಗ ದೇವಸ್ಥಾನದ ಪ್ರಸಾದ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದ ಅರವನ ಪಾಯಸಂ ಸೇರಿ ಕೆಲ ಪ್ರಸಾದಲ್ಲಿ(ayyappa prasadam) ಬಳಕೆ ಮಾಡಿರುವುದು ಹಲಾಲ್ ಬೆಲ್ಲ ಅನ್ನೋ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಈ ವಿವಾದದ ಕುರಿತು ಕೇರಳ ದೇವಸ್ವಂ ಬೋರ್ಡ್ ಸ್ಪಷ್ಟನೆ ನೀಡಿದೆ. 

ಅಯ್ಯಪ್ಪ ದೇವಸ್ಥಾನದಲ್ಲಿ ನೀಡುತ್ತಿರುವ ಪ್ರಸಾದದಲ್ಲಿ ಮುಸ್ಲಿಮರ ಹಲಾಲ್ ಬೆಲ್ಲ(Halal Jaggery) ಬಳಕೆ ಮಾಡಿದೆ ಅನ್ನೋ ವಿವಾದ ಆಧಾರ ರಹಿತವಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶಬರಿಮಲೆ ಅಯ್ಯಪ್ಪ ಪ್ರಸಾದದಲ್ಲಿ ಯಾವುದೇ ಅಪಚಾರವಾಗಿಲ್ಲ ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್(Travancore Devaswom Board) ಹೈಕೋರ್ಟ್‌ನಲ್ಲಿ(Kerala High Court) ಸ್ಪಷ್ಟನೆ ನೀಡಿದೆ.

ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕ ಎಸ್‌ಜೆಆರ್ ಕುಮಾರ್ ಅಯ್ಯಪ್ಪ ಪ್ರಸಾದದಲ್ಲಿ ಹಲಾಲ್ ಬೆಲ್ಲ ಬಳಕೆ ಮಾಡುತ್ತಿರುವುದಾಗಿ ಆರೋಪಿಸಿ  ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಬರಿಮಲೆ ದೇವಸ್ಥಾನದಲ್ಲಿನ ಅರವಣ ಪಾಯಸಂ(Aravana Payasam) ಹಾಗೂ ಅಪ್ಪಂ ಪ್ರಸಾದದಲ್ಲಿ(Appam Payasam) ಅಶುದ್ದ ಹಲಾಲ್ ಬೆಲ್ಲ ಬಳಕೆ ಮಾಡಲಾಗಿದೆ. ಹೀಗಾಗಿ ಅರವಣ ಪಾಯಸಂ ಹಾಗೂ ಅಪ್ಪಂ ಪ್ರಸಾದ ವಿತರಣೆಯನ್ನು ತಕ್ಷಣ ನಿಲ್ಲಸಬೇಕು. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಕೇರಳ ದೇವಸ್ವಂ ಬೋರ್ಡ್ ಹಾಗೂ ಕೇರಳ ಆಹಾರ ಸುರಕ್ಷತಾ ಕಮಿಷನರೇಟ್‌ಗೆ ಶಬರಿಮಲೆ ಕರ್ಮ ಸಮಿತಿ ನಿರ್ದೇಶ ನೀಡಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ: ಆದೇಶ ಹೊರಡಿಸಲು ಸುಪ್ರೀಂ ನಕಾರ

ಸಾಮಾಜಿಕ ಜಾಲತಾಣದಲ್ಲಿ(Social Media) ಈ ಹಲಾಲ್ ಪಾಯಸಂ ಹಾಗೂ ಅಶುದ್ಧತೆ ಕುರಿತು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ದೇವಸ್ವಂ ಬೋರ್ಡ್ ಬಳಿ ಸ್ಪಷ್ಟನೆ ಕೇಳಿದೆ. 2020ರಲ್ಲಿ ಖರೀದಿಸಿ ಬೆಲ್ಲದ ಚೀಲದಲ್ಲಿ ಒಂದು ಚೀಲ ಹಲಾಲ್ ಪ್ರಮಾಣೀಕರಣ ಹೊಂದಿತ್ತು. ಈ ಕುರಿತು ಕೇರಳ ದೇವಸ್ವಂ ಬೋರ್ಡ್ ವಿತರಕರನ್ನು ವಿಚಾರಿಸಿದೆ. ರಫ್ತು ಕಾರಣ ಪ್ರಮಾಣೀಕರಣ ಅಗತ್ಯವಿದೆ. ಆದರೆ ಶಬರಿಮೆಲೆಗೆ ತಯಾರಿಸಿದ ಬೆಲ್ಲ ಹಲಾಲ್ ಬೆಲ್ಲವಲ್ಲ. ರಫ್ತು ಮಾಡಲು ತಯಾರಿಸಿದ ಹಲಾಲ್ ಬೆಲ್ಲದ ಚೀಲ, ಶಬರಿಮಲೆ ಬೆಲ್ಲದ ಚೀಲದೊಂದಿಗೆ ಬೆರೆತಿದೆ ಎಂದು ವಿತರಕರು ಹೇಳಿದ್ದಾರೆ. ದೇವಸ್ಥಾನಕ್ಕೆ ಬಂದಿರುವ ಹಲಾಲ್ ಪ್ರಮಾಣೀಕೃತ ಬೆಲ್ಲದ ಚೀಲವನ್ನು ಪ್ರಸಾದಕ್ಕೆ ಬಳಕೆ ಮಾಡಿಲ್ಲ ಎಂದು ದೇವಸ್ವಂ ಬೋರ್ಡ್ ಕೇರಳ ಹೈಕೋರ್ಟ್‌ಗೆ ಹೇಳಿದೆ.

ಮಹಾರಾಷ್ಟ್ರದ ಕಂಪನಿಯಿಂದ ಬೆಲ್ಲ ಖರೀದಿಸಲಾಗಿದೆ. ಎಲ್ಲಿಂದ ಬೆಲ್ಲ ಖರೀದಿಸಿದರೂ ಪಂಪಾದಲ್ಲಿ ಗುಣಮಟ್ಟ ತಪಾಸಣೆ ನಡೆಸಲಾಗುತ್ತದೆ. ಗುಣಮಟ್ಟದಲ್ಲಿ ಯಾವುದೇ ಲೋಪವಿದ್ದರೂ ಬೆಲ್ಲ ಸೇರಿದಂತೆ ಯಾವುದೇ ಅಹಾರ ವಸ್ತುಗಳ ಖರೀದಿ ಮಾಡುವುದಿಲ್ಲ. 2019 ಹಾಗೂ 2020ರಲ್ಲಿ ಖರೀದಿಸಿದ ಬೆಲ್ಲಗಳು ಕೋವಿಡ್ ಕಾರಣ ಬಳಕೆ ಮಾಡಲು ಯೋಗ್ಯವಲ್ಲ ಎಂದು ಪಂಪಾ ಲ್ಯಾಬನಲ್ಲಿ ದೃಢಪಟ್ಟಿದೆ. ಹೀಗಾಗಿ ಈ ಬೆಲ್ಲವನ್ನು ಜಾನುವಾರುಗಳ ಮೇವು ತಯಾರಿಕೆ ಹರಾಜು ಮಾಡಲಾಗಿದೆ ಎಂದು ತನ್ನ ಗುಣಮಟ್ಟದ ಕುರಿತು ಸ್ಪಷ್ಟನೆ ನೀಡಿದೆ.

ಶಬರಿಮಲೆಗೆ ಫಾತಿಮಾ, ಈ ಬಾರಿ ಪೊಲೀಸ್ ಭದ್ರತೆ ಇಲ್ಲ!

ಈ ಅರ್ಜಿ ವಿಚಾರಣೆಯಲ್ಲಿ ಆಹಾರ ಸುರಕ್ಷತಾ ಕಮಿಷನರ್ ಕೂಡ ಭಾಗಿಯಾಗಿದ್ದರು. ಈ ವೇಳೆ ಧಾರ್ಮಿಕ ನೈವೇದ್ಯಕ್ಕೆ ಬಳಕೆ ಮಾಡುಲ ಬೆಲ್ಲ ಸೇರಿದಂತೆ ಇತರ ವಸ್ತುಗಳನ್ನು ಪಂಪಾ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಪ್ರಯೋಗಾಲಯ ಗ್ರೀನ್ ಸಿಗ್ನಲ್ ನೀಡಿದರೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ಕೋರ್ಟ್‌ಗೆ ಆಹಾರ ಸುರಕ್ಷತಾ ಕಮಿಷನರೇಟ್ ಹೇಳಿದೆ. 

ಕೇರಳ ದೇವಸ್ವಂ ಬೋರ್ಡ್ ನೀಡಿರುವ ಸ್ಪಷ್ಟನೆಗೆ ಪ್ರತಿವಾದ ಮಂಡಿಸಲು ಕೇರಳ ಹೈಕೋರ್ಟ್ ಅರ್ಜಿದಾರ ಎಸ್‌ಜೆಆರ್ ಕುಮಾರ್‌ಗೆ ಸೋಮವಾರದ ವರೆಗೆ ಸಮಯ ನೀಡಿದೆ. ಇದರೊಳಗೆ ದೇವಸ್ವಂ ಬೋರ್ಡ್ ಹೇಳಿಕೆಗೆ ಯಾವುದೇ ತಕರಾರರು ಅಥವಾ ಸ್ಪಷ್ಟನೆ, ದಾಖಲೆ ಇದ್ದರೆ ಸಲ್ಲಿಸಲು ಸೂಚಿಸಿದೆ.

ಶಬರಿಮಲೆ ಯಾತ್ರೆ ಶುರು : 10 ಮಹಿಳೆಯರು ವಾಪಸ್‌
 

Follow Us:
Download App:
  • android
  • ios