ನವದೆಹಲಿ (ಡಿ. 14): ‘ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಸುರಕ್ಷಿತ ಪ್ರವೇಶಕ್ಕೆ ಕೇರಳ ಸರ್ಕಾರ ಅನುವು ಮಾಡಿಕೊಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಇಬ್ಬರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

ಇದು ವಿತ್ತ ಸಚಿವೆಯ ತಾಕತ್ತು! ನಿರ್ಮಲಾ ವಿಶ್ವದ 34ನೇ ಪ್ರಭಾವಿ ಮಹಿಳೆ

ಬಿಂದು ಮತ್ತು ರೆಹನಾ ಫಾತಿಮಾ ಎಂಬಿಬ್ಬ ಮಹಿಳೆಯರು ತಮಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಾಧೀಶ ನ್ಯಾ. ಎಸ್‌.ಎ. ಬೋಬ್ಡೆ, ನ್ಯಾ.ಬಿ.ಆರ್‌. ಗವಾಯಿ ಹಾಗೂ ನ್ಯಾ. ಸೂರ್ಯಕಾಂತ್‌ ಅವರಿದ್ದ ನ್ಯಾಯಪೀಠ ‘ಇದು ಭಾವನಾತ್ಮಕ ವಿಷಯ. ಪರಿಸ್ಥಿತಿ ‘ಸಿಡಿದೇಳುವಂತೆ’ ಮಾಡಲು ನಾವು ಬಯಸುವುದಿಲ್ಲ’ ಎಂದು ಶುಕ್ರವಾರ ಹೇಳಿತು.

‘ಈಗಾಗಲೇ ಸಪ್ತಸದಸ್ಯ ಪೀಠ ವಿಚಾರಣೆ ಶಬರಿಮಲೆ ವಿವಾದದ ವಿಚಾರಣೆ ಹಸ್ತಾಂತರಗೊಂಡಿದೆ. ಹೀಗಾಗಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ವಿಸ್ತೃತ ಪೀಠವನ್ನು ಶೀಘ್ರ ರಚಿಸಲಿದ್ದೇವೆ. ಆ ಪೀಠ ರಚನೆಯಾಗಿ ಆದೇಶ ಹೊರಡಿಸುವ ತನಕ ನಾವು ಯಾವುದೇ ಆದೇಶ ಹೊರಡಿಸುವುದಿಲ್ಲ. ಆದರೆ ದೇವಾಲಯವೇ ಸಂತೋಷದಿಂದ ಮಹಿಳೆಯರನ್ನು ಬರಮಾಡಿಕೊಂಡರೆ ಸಮಸ್ಯೆಯಿಲ್ಲ’ ಎಂದು ’ ಎಂದು ನ್ಯಾಯಾಧೀಶರು ಹೇಳಿದರು.

ರಾಹುಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ!

‘ಮಹಿಳೆಯರ ಪ್ರವೇಶಕ್ಕೆ ಅನುಮತಿಸಿ 2018ರ ಸೆಪ್ಟೆಂಬರ್‌ 28ರಂದು ತಾನು ನೀಡಿದ್ದ ತೀರ್ಪಿಗೆ ತಡೆ ನೀಡಿಲ್ಲ. ಆದರೆ ಹಾಗಂತ ಆ ಆದೇಶವನ್ನು ‘ಅಂತಿಮ’ ಎಂದು ಹೇಳಲಾಗದು’ ಎಂದು ನ್ಯಾಯಪೀಠ ಪುನರುಚ್ಚರಿಸಿತು.