ಕೊಚ್ಚಿ[ನ.25]: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ್ದರೂ, ಸಾಂಪ್ರದಾಯಿಕವಾಗಿ ನಿಷೇಧ ಇರುವ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಪೊಲೀಸ್‌ ರಕ್ಷಣೆ ನೀಡದೇ ಇರಲು ಕೇರಳ ಸರ್ಕಾರ ನಿರ್ಧರಿಸಿದೆ. ಹೀಗಾಗಿ ವಿವಾದಿತ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ಈ ಬಾರಿ ಶಬರಿಮಲೆ ದೇಗುಲ ಪ್ರವೇಶಕ್ಕೆ ಪೊಲೀಸ್‌ ಭದ್ರತೆ ನಿರಾಕರಿಸಲಾಗಿದೆ.

ಶಬರಿಮಲೆ ಪ್ರವೇಶಕ್ಕೆ ತೆರಳಿದ್ದ ಹಾಟ್ ಹಾಟ್ ಬೆಡಗಿ ಫೋಟೋ

30 ವರ್ಷದ ಫಾತಿಮಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೊಲೀಸ್‌ ಭದ್ರತೆಯಲ್ಲಿ ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನ ನಡೆಸಿದ್ದರು. ಆದರೆ, ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಾಪಸ್‌ ಆಗಿದ್ದರು. ಈ ವರ್ಷವೂ ಶಬರಿಮಲೆ ಪ್ರವೇಶಕ್ಕೆ ಫಾತಿಮಾ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಭೇಟಿಯ ವೇಳೆ ಪೊಲೀಸ್‌ ಭದ್ರತೆ ಒದಗಿಸುವಂತೆ ಪೊಲೀಸ್‌ ಆಯುಕ್ತರಲ್ಲಿಯೂ ಮನವಿ ಮಾಡಿಕೊಂಡಿದ್ದರು. ಆದರೆ, ಶಬರಿಮಲೆಯಲ್ಲಿ ಕಾರ್ಯಕರ್ತರ ಚಟುವಟಿಕೆಗಳಿಗೆ ಆಸ್ಪದ ನೀಡದಿರಲು ಸರ್ಕಾರ ನಿರ್ಧರಿಸಿದೆ.

BSNL ನಿಂದ ರೆಹನಾ ಫಾತಿಮಾ ಸಸ್ಪೆಂಡ್

ಶಬರಿಮಲೆಗೆ 10 ರಿಂದ 50 ವರ್ಷ ಪ್ರಾಯದೊಳಗಿನ ಮಹಿಳೆಯರು ಪ್ರವೇಶಿಸಬಾರದೆಂದು ವಿಧಿಸಲಾಗಿದ್ದ ಧಾರ್ಮಿಕ ನಿರ್ಬಂಧವನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ತೆಗದು ಹಾಕಿತ್ತು. ಇದು ಅಯ್ಯಪ್ಪ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದ್ದು ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ ಸುಪ್ರೀಂಕೋರ್ಟಿನ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳನ್ನು ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ವಿಚಾರಣೆ ನಡೆಸಿ ಯಾವುದೇ ನಿರ್ದಿಷ್ಟ ತೀರ್ಪು ನೀಡಲಾಗದೆ, 7 ಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಹೀಗಿದ್ದರೂ ಈ ಹಿಂದೆ ನೀಡಿದ್ದ ತನ್ನ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

ಆದರೆ ಸುಪ್ರೀಂಕೋರ್ಟ್‌ನ ಈ ನಿರ್ಧಾರದ ಬಳಿಕ ಕೇರಳ ಸರಕಾರ ಬಹಳಷ್ಟು ಎಚ್ಚರಿಕೆಯ ನಡೆ ಇರಿಸಿದೆ. ಶಬರಿಮಲೆ ಎಂಬುದು ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವೇ ಹೊರತು ಚಳುವಳಿಗಾಗಿ ಇರುವ ಸ್ಥಳವಲ್ಲ ಎಂದು ಹೇಳುವ ಮೂಲಕ ಶಬರಿಮಲೆಗೆ ನಿರ್ಧಿಷ್ಟ ವಯೋಮಾನ ನಿಷೇಧಿತ ಮಹಿಳೆಯರ ಪ್ರಚಾರ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿರಿಸಿದೆ.