Asianet Suvarna News Asianet Suvarna News

'ಚೀನಾ ವಸ್ತು ಬಾಯ್ಕಾಟ್ ಮಾಡಿ': ಗಡಿಯತ್ತ ಹೊರಟು ನಿಂತ ಯೋಧ ಹೇಳಿದ್ದಿಷ್ಟು

ಈಗಾಗಲೇ ಪ್ರಧಾನಿ ಸೇರಿ ಪ್ರಮುಖರು ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಕರೆ ನೀಡಿದ್ದಾರೆ. ಸೆಲೆನ್ರಿಟಿಗಳಿಗೂ ಚೀನಾ ಉತ್ಪನ್ನಗಳಿಗೆ ಜಾಹೀರಾತು ನೀಡದಂತೆ ಸೂಚಿಸಲಾಗಿದೆ. ಈ ನಡುವೆಯೇ ಗಡಿ ಕಾಯಲು ಹೊರಟು ನಿಂತ ಯೋಧನೊಬ್ಬನ ವಿಡಿಯೋ ವೈರಲ್ ಆಗಿದೆ.

Selfie video of a soldier asking indians to boycott china app and products goes viral
Author
Bangalore, First Published Jun 26, 2020, 3:15 PM IST

ನವದೆಹಲಿ(ಜೂ.26): ಭಾರತ ಹಾಗೂ ಚೀನಾ ನಡುವೆ ನಡೆದ ದಾಳಿ ಪ್ರತಿದಾಳಿಯಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಸಾಮಾನ್ಯ ಜನರು ಚೀನಾ ಆ್ಯಪ್, ವಸ್ತುಗಳನ್ನು ಬಹಿಷ್ಕರಿಸುವುದು ಚೀನಾಗೆ ಭಾರತೀಯರು ನೀಡಬಹುದಾದ ದೊಡ್ಡ ಆರ್ಥಿಕ ಹೊಡೆತ.

ಈಗಾಗಲೇ ಪ್ರಧಾನಿ ಸೇರಿ ಪ್ರಮುಖರು ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಕರೆ ನೀಡಿದ್ದಾರೆ. ಸೆಲೆನ್ರಿಟಿಗಳಿಗೂ ಚೀನಾ ಉತ್ಪನ್ನಗಳಿಗೆ ಜಾಹೀರಾತು ನೀಡದಂತೆ ಸೂಚಿಸಲಾಗಿದೆ. ಈ ನಡುವೆಯೇ ಗಡಿ ಕಾಯಲು ಹೊರಟು ನಿಂತ ಯೋಧನೊಬ್ಬನ ವಿಡಿಯೋ ವೈರಲ್ ಆಗಿದೆ.

‘ಬಾಯ್ಕಾಟ್‌’ ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!

ಚೀನಾದಿಂದ ಎಲೆಕ್ಟ್ರಾನಿಕ್ಸ್, ಟಾಯ್ಸ್, ಮೊಬೈಲ್  ಸೇರಿ ಬಹಳಷ್ಟು ವಿದಧ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತೀಯರು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಚೀನಾ ವಸ್ತುಗಳನ್ನು ಬಳಸುತ್ತಿದ್ದಾರೆ. ಇದೀಗ ಹೆಚ್ಚಿನ ಜನ ಬಾಯ್ಕಾಟ್ ಚೀನಾ ಅಭಿಯಾನದ ಭಾಗವಾಗಿದ್ದಾರೆ.

Selfie video of a soldier asking indians to boycott china app and products goes viral

ಈ ನಡುವೆ ಯೋಧನೊಬ್ಬ ಮಾಡಿರುವ ವಿಡಿಯೋ ಎಲ್ಲೆಡೆ ಓಡಾಡುತ್ತಿದೆ. ಭಾರತೀಯ ಯೋಧನೊಬ್ಬ ಟ್ರಕ್‌ನಿಂದ ಇಳಿದು, ಸಶಸ್ತ್ರನಾಗಿ ಟ್ರಕ್ ಹೋಗಲಾದ ರಸ್ತೆಯಲ್ಲಿ ನಡೆದು ಗಡಿ ಸೇರುವ ಸಂದರ್ಭ ಈ ವಿಡಿಯೋ ಮಾಡಲಾಗಿದೆ.

ಬಾಯ್ಕಾಟ್ ಚೀನಾ, ಚೀನಾ ವಸ್ತು ಎಂದು ಕಂಡುಹಿಡಿಯುವುದು ಹೇಗೆ?

ನೀವು ಅಲ್ಲಿ ಆರಾಮವಾಗಿರಿ. ನಾವು ನಮಗೆ ಆದಷ್ಟು ದೇಶ ಸೇವೆ ಮಾಡುತ್ತಿದ್ದೇವೆ. ನೀವು ಸ್ವಲ್ಪ ಚೀನಾ ಆ್ಯಪ್ ಡಿಲೀಟ್ ಮಾಡಿ. ನಾವು ಇಲ್ಲಿದ್ದೇವೆ. ಇಂತಹ ಪ್ರದೇಶದಲ್ಲಿ ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ. ನೀವು ಕುಳಿತಲ್ಲಿಯೇ ಚೀನಾ ಆ್ಯಪ್ ಡಿಲೀಟ್ ಮಾಡುವ ಮೂಲಕ ದೇಶ ಸೇವೆ ಮಾಡಬಹುದು ಎಂದು ಹೇಳಿದ್ದಾರೆ.

"

Follow Us:
Download App:
  • android
  • ios