ಬಾಯ್ಕಾಟ್ ಚೀನಾ, ಚೀನಾ ವಸ್ತು ಎಂದು ಕಂಡುಹಿಡಿಯುವುದು ಹೇಗೆ?
ಸೋಶಿಯಲ್ ಮೀಡಿಆದಲ್ಲಿ ಚೀನಾ ಪ್ರಾಡೆಕ್ಟ್ ಬ್ಯಾನ್ ಕ್ಯಾಂಪೇನ್/ ಬಾಯ್ಕಾಟ್ ಚೀನಾ ಹ್ಯಾಷ್ ಟ್ಯಾಗ್/ ಯಾವ ವಸ್ತು ಚೀನಾದ್ದು, ಕಂಡು ಹಿಡಿಯುವುದು ಹೇಗೆ?
ನವದೆಹಲಿ(ಜೂನ್ 17): ಗಡಿಭಾಗದಲ್ಲಿ ತಂಟೆ ಮಾಡುತ್ತ ಕಾರಣವಿಲ್ಲದೇ ನಮ್ಮ ಯೋಧರ ಬಲಿದಾನಕ್ಕೆ ಕಾರಣವಾದ ಚೀನಾಕ್ಕೆ ತಕ್ಕ ಪಾಠ ಕಲಿಸಲು ಪ್ರತಿಯೊಬ್ಬ ಭಾರತೀಯನೂ ಒಬ್ಬ ಯೋಧ ಆಗುತ್ತಿದ್ದಾನೆ.
ಭಾರತದ ಯೋಧರು ಪ್ರತಿ ದಾಳಿ ಮಾಡಿ ಚೀನಾ ಕುತಂತ್ರಿಗಳಿಗೆ ಪಾಠ ಕಲಿಸಿದ್ದಾರೆ. 1967 ರ ನಂತರ ಇಂಥ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಇತಿಹಾಸ ಹೇಳುತ್ತಿದೆ. ಈ ಎಲ್ಲ ಘಟನೆಗಳು ನಡೆಯುತ್ತಲೇ ಇದ್ದರೆ ಇತ್ತ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.
ಭಾರತದ ಯೋಧರನ್ನು ಕೊಂದು ಚೀನಾ ಹೇಳಿದ 9 ಸುಳ್ಳುಗಳು
ಚೀನಾ ವಸ್ತುಗಳನ್ನು ಬಾಯ್ಕಾಟ್ ಮಾಡಿ ಎಂಬ ಅಭಿಯಾನ ಆರಂಭವಾಗುತ್ತದೆ. ಕೆಲವರು ಯಾವ ಯಾವ ಮೊಬೈಲ್ ಗಳು, ಪ್ರತಿದಿನ ಬಳಕೆ ಮಾಡುವ ಯಾವ ವಸ್ತುಗಳು ಚೀನಾಕ್ಕೆ ಸೇರಿವೆ ಎಂಬ ಸಂದೇಶ ಸಹ ಹರಿದಾಡಿತು.
ಚೀನಾದ ವಸ್ತುಗಳನ್ನೇ ಬಳಕೆ ಮಾಡಿಕೊಂಡು ಬಾಯ್ಕಾಟ್ ಚೀನಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆಯಬೇಕಾಗಿದೆ ಎಂದು ಕೆಲವರು ಪರಿಸ್ಥಿತಿ ತೆರೆದಿಟ್ಟರು. ಕೆಲ ದಿನಗಳ ಹಿಂದೆ ಮಾರುತಿ ಕಂಪನಿ ಬಾಯ್ಕಾಟ್ ಚೀನಾಕ್ಕೆ ವಿರೋಧ ವ್ಯಕ್ತಪಡಿಸಿತ್ತು.