'ಝೀಂಗೂರ್ ಸಾ ಲಡ್ಕಾ..' ಸಚಿನ್-ಸೀಮಾ ಲವ್‌ಸ್ಟೋರಿ ರೋಸ್ಟ್ ಮಾಡಿದ ನೆರೆಮನೆಯ ಆಂಟಿ!
ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರ ನೆರೆಮನೆಯ ಹೆಂಗಸಿನ ಸಂದರ್ಶನದ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಸಚಿನ್‌ರ ಜನ್ಮ ಜಾಲಾಡಿದಿದ್ದಾಳೆ.
ನವದೆಹಲಿ (ಜು.22): ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಮತ್ತು ಭಾರತೀಯ ಸಚಿನ್ ಮೀನಾ ಅವರ ‘ಲವ್ ಸ್ಟೋರಿ’ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಪಾಕಿಸ್ತಾನದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿರುವ ಸೀಮಾ ಹೈದರ್‌ರನ್ನು ಭಾರತದ ಭದ್ರತಾ ಏಜೆನ್ಸಿಗಳು ದೊಡ್ಡ ಮಟ್ಟದಲ್ಲಿ ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶ ಎಟಿಎಸ್, ಸಚಿನ್ ಮೀನಾ ಹಾಗೂ ಸೀಮಾ ಹೈದರ್ ಇಬ್ಬರನ್ನೂ ಬಂಧಿಸಿ ವಿಚಾರಣೆ ಮಾಡಿತ್ತು. ಆ ಬಳಿಕ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹಾಗಿದ್ದರೂ ಸೀಮಾ ಹೈದರ್ ಪೂರ್ವಾಪರ ತಿಳಿದುಕೊಳ್ಳುವ ವಿಚಾರಣರ ಇನ್ನೂ ನಡೆಯುತ್ತಿದೆ. ಈ ನಡುವೆ ಇವರಿಬ್ಬರ ಲವ್‌ಸ್ಟೋರಿ ಅವರ ಅಕ್ಕಪಕ್ಕದ ಮನೆಯಲ್ಲಿಯೇ ಗುಸುಗುಸು ಆರಂಭವಾಗಿದೆ. ದಂಪತಿಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಸಚಿನ್ ಹಾಗೂ ಸೀಮಾ ಹೈದರ್ ಅವರ ನೆರೆಮನೆಯ 'ಆಂಟಿ' ನೀಡಿರುವ ಸಂದರ್ಶನ ವೈರಲ್ ಆಗಿದೆ. ಇಬ್ಬರ ಬಗ್ಗೆಯೂ ಆಕೆ ಹೇಳಿರುವ ಮಾತುಗಳು ಅದರಲ್ಲೂ ಸಚಿನ್ ಮೀನಾ ಬಗ್ಗೆ ಆಕೆ ಹೇಳಿರುವ ಅಭಿಪ್ರಾಯ ನಗು ತರಿಸುವಂತಿದೆ.
ಏನಿದೆ ವಿಡಿಯೋದಲ್ಲಿ: ಕೇವಲ 28 ಸೆಕೆಂಡ್‌ನ ವಿಡಿಯೋ ಇದಾಗಿದ್ದು, ಈಕೆ ಬಳಸಿರುವ ಪದಗಳು ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಟ್ರೋಲರ್‌ಗಳಿಗೆ ಆಹಾರವಾಗೋದು ಖಂಡಿತಾ. ಅದರಲ್ಲೂ ಸಚಿನ್ ಎನ್ನುವ ಹೆಸರಿಟ್ಟಿಕೊಂಡಿರುವ ವ್ಯಕ್ತಿಗಳನ್ನು ಟ್ರೋಲ್ ಮಾಡಲು ಇದು ಬಳಕೆಯಾಗೋದು ನಿಶ್ಚಿತ. ಇಡೀ ವಿಡಿಯೋದಲ್ಲಿ ಸೀರೆ ಧರಿಸಿರುವ ಮಹಿಳೆ, ಇಡೀ ಘಟನೆಯ ಬಗ್ಗೆ ತನ್ನಿ ಅಭಿಪ್ರಾಯ ವ್ಯಕಗ್ತಪಡಿಸೋದು ಮಾತ್ರವಲ್ಲದೆ, ಇಬ್ಬರ ಲವ್ ಸ್ಟೋರಿಯನ್ನೇ ಪ್ರಶ್ನೆ ಮಾಡಿದ್ದಾರೆ.
'ಆಕೆ ಪಾಕಿಸ್ತಾನಕ್ಕೆ ಹೋಗ್ಲೇಬೇಕು. ಇದು ಹೀಗೆ ಮುಂದುವರಿದರೆ, ನಮ್ಮ ಮುಂದಿನ ಪೀಳಿಗೆಗಳು ಖಂಡಿತಾ ಹಾಳಾಗುತ್ತದೆ. ಮುಂದೊಂದು ದಿನ ಅವರು ನಮ್ಮ ಮನೆಗೆ ಪಾಕಿಸ್ತಾನದಿಂದಲೇ ಸೊಸೆಯನ್ನು ತರ್ತೇನೆ ಅಂದರೆ ನಾವೇನು ಮಾಡೋಣ. ಇನ್ನು ಸಚಿನ್.. ಏನಿದೆ ಅವನಲ್ಲಿ. ಅವನೊಬ್ಬ ಪೆದ್ದ (ಲಪ್ಪೂ ಸಾ ಸಚಿನ್). ತನ್ನ ಬಾಯಿಂದ ಏನು ಮಾತಾನಾಡಬೇಕು ಅನ್ನೋದೇ ಅವನಿಗೆ ಗೊತ್ತಿಲ್ಲ. ಅವನೇನಾದ್ರೂ ಮಾತನಾಡಿದ್ನಾ. ಅವನು ಮಿಡತೆಯಂತಿರೋ ಹುಡ್ಗ (ಝೀಂಗೂರ್ ಸಾ ಲಡ್ಕಾ). ಅವರನ ಜೊತೆ ಲವ್ ಅಂದ್ರೆ ಏನ್ ಹೇಳೋಣ. ಇನ್ನು ಸೀಮಾ ತಾನು ಐದನೇ ಕ್ಲಾಸ್ ಪಾಸ್ ಅಂತಾ ಹೇಳ್ತಿದ್ದಾಳೆ. ಆದರೆ, ಖಡಕ್ ಆಗಿ ಇಂಗ್ಲೀಷ್ ಮಾತನಾಡ್ತಾಳೆ. ಕಂಪ್ಯೂಟರ್ ಗೊತ್ತಿದೆ. ಚಾಟ್ ಮಾಡ್ತಾಳೆ. ನಾಲ್ಕು-ನಾಲ್ಕು ದೇಶದ ಪಾಸ್‌ಪೋರ್ಟ್ ಹಿಡ್ಕೊಂಡು ಬಂದಿದ್ದಾಳೆ. ಜಗತ್ತಿನ ಎಲ್ಲಾ ದೇಶದ ಬಾರ್ಡರ್ ಕ್ರಾಸ್ ಮಾಡಿಕೊಂಡು ಬಂದಿದ್ದಾಳೆ.
ಇನ್ನು ಈಕೆಯ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, 'ರೋಸ್ಟ್ ಮಾಡೋದು ಕಲೆ ಆಗಿದ್ದರೆ, ಈ ಅಕ್ಕಂಗೆ ಖಂಡಿತಾ 10ಕ್ಕೆ 10 ಮಾರ್ಕ್ಸ್ ಸಿಗ್ತಿತ್ತು' ಎಂದು ಬರೆದಿದ್ದಾರೆ. ಮುಂದಿನ ಬಾರಿ ನೀವು ಯಾರಾದರೂ ಹುಡಗನನ್ನು ರಿಜೆಕ್ಟ್ ಮಾಡಬೇಕಾದಲ್ಲಿ ಜಸ್ಟ್, 'ಝಿಂಗೂರ್ ಸಾ ಲಡ್ಕಾ' ಅಂದ್ರೆ ಸಾಕಾಗುತ್ತದೆ' ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಹೆಚ್ಚಿನವರು ನಗುವಿನ ಇಮೋಜಿ ಹಾಕಿ ಈ ವಿಡಿಯೋವನ್ನು ಸಂಭ್ರಮಿಸಿದ್ದಾರೆ.
ಸೀಮಾ ಹೈದರ್ ಬಳಿ ಪಾಕ್‌ನ 5 ಅಧಿಕೃತ ಪಾಸ್‌ಪೋರ್ಟ್, ಗುರುತಿನ ಚೀಟಿ ವಶಕ್ಕೆ
ನಾಲ್ಕು ಮಕ್ಕಳ ತಾಯಿಯಾಗಿರುವ ಪಾಕಿಸ್ತಾನ ಮೂಲದ 30 ವರ್ಷದ ಮಹಿಳೆ ಸೀಮಾ ಹೈದರ್, ಉತ್ತರ ಪ್ರದೇಶದ ಮೂಲದ ಸಚಿನ್ ಮೀನಾರನ್ನು 2019ರಲ್ಲಿ ಪಬ್‌ಜೀ ಗೇಮ್ ಮೂಲಕ ಭೇಟಿಯಾಗಿದ್ದರು. ಸಚಿನ್‌ರನ್ನು ಪ್ರೀತಿಸಿದ ಈಕೆ, ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಸಚಿನ್ ಜೊತೆ ವಾಸವಿದ್ದರು. ವೀಸಾ ಕೂಡ ಇಲ್ಲದೆ ನೇಪಾಳ ಮಾರ್ಗವಾಗಿ ಸೀಮಾ ಹೈದರ್ ಭಾರತಕ್ಕೆ ಬಂದಿದ್ದರು. ಪಾಕಿಸ್ತಾನದ ಮಹಿಳೆಯೊಬ್ಬರು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದಾಗ ಆಕೆಯ ವಿಚಾರ ಬೆಳಕಿಗೆ ಬಂದಿತ್ತು.
PUBG ಲವರ್ ಸೀಮಾ ಹೈದರ್ ಸೋದರ, ಅಂಕಲ್ ಪಾಕ್ ಸೇನೆಯಲ್ಲಿ ಕೆಲಸ: ಪಾಕ್ ಮಹಿಳೆ ಬಗ್ಗೆ ಮತ್ತಷ್ಟು ಅನುಮಾನ