ಸೀಮಾ ಹೈದರ್ ಬಳಿ ಪಾಕ್‌ನ 5 ಅಧಿಕೃತ ಪಾಸ್‌ಪೋರ್ಟ್, ಗುರುತಿನ ಚೀಟಿ ವಶಕ್ಕೆ
ಸೀಮಾ ಹೈದರ್ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎರಡು ವಿಡಿಯೋ ಕ್ಯಾಸೆಟ್‌ಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಈ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಲಖನೌ (ಜುಲೈ 21, 2023): ಭಾರತದ ಯುವಕನ ಜತೆ ಪಬ್‌ಜಿ ಆಡಿ ಲವವ್ ಆಯಿತೆಂದು ತನ್ನ 4 ಮಕ್ಕಳ ಸಮೇತ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ದೊರೆತಿದೆ. ಪಾಕಿಸ್ತಾನದ ನಿವಾಸಿ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಎರಡು ದಿನಗಳ ಕಾಲ ವಿಚಾರಣೆ ನಡೆಸಿದೆ. ಈ ವೇಳೆ, ಆಕೆ ಬಳಿ ಇದ್ದ ಐದು ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್‌ಗಳು, ಬಳಕೆಯಾಗದ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀಮಾ ಹೈದರ್ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎರಡು ವಿಡಿಯೋ ಕ್ಯಾಸೆಟ್‌ಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಈ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. "ಭಾರತಕ್ಕೆ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸರು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಸ್ತುತ, ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ, ”ಎಂದು ಯುಪಿ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿ ಮಾಹಿತಿ ನೀಡಿದೆ.
ಇದನ್ನು ಓದಿ: PUBG ಲವರ್ ಸೀಮಾ ಹೈದರ್ ಸೋದರ, ಅಂಕಲ್ ಪಾಕ್ ಸೇನೆಯಲ್ಲಿ ಕೆಲಸ: ಪಾಕ್ ಮಹಿಳೆ ಬಗ್ಗೆ ಮತ್ತಷ್ಟು ಅನುಮಾನ
ಇದಕ್ಕೂ ಮುನ್ನ, ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಬೇಹುಗಾರಿಕೆಯ ಕೋನವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದರು ಮತ್ತು 27 ವರ್ಷದ ಸೀಮಾ ಹೈದರ್ ಭಾರತವನ್ನು ಪ್ರವೇಶಿಸಲು ನೇಪಾಳ ಗಡಿಯನ್ನು ದಾಟಿದ್ದಾರೆ. ಈ ಹಿನ್ನೆಲೆ ಆಕೆಯ ಭಾರತೀಯ ಪತಿ ಸಚಿನ್ ಮೀನಾ, 22, ಮತ್ತು ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ಸೀಮಾ ಹೈದರ್ ಗೂಢಚಾರಿಕೆಯೋ ಅಥವಾ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ಗೌತಮ್ ಬುದ್ಧ ನಗರ ಪೊಲೀಸರು ಸಹ ಗುಪ್ತಚರ ಬ್ಯೂರೋ (ಐಬಿ) ಮತ್ತು ಯುಪಿ ಎಟಿಎಸ್‌ಗೆ ಪತ್ರ ಬರೆದು ಅವರು ಇಲ್ಲಿಯವರೆಗೆ ಸಂಗ್ರಹಿಸಿರುವ ಪುರಾವೆಗಳನ್ನು ತನಿಖೆ ನಡೆಸಲು ಪತ್ರ ಬರೆದಿದ್ದರು.
ಸೀಮಾ ಹೈದರ್ ಮತ್ತು ಸಚಿನ್ 2020 ರಲ್ಲಿ PUBG ಮೂಲಕ ಸಂಪರ್ಕಕ್ಕೆ ಬಂದರು ಮತ್ತು ಸುಮಾರು 15 ದಿನಗಳ ನಂತರ ಪ್ಲಾಟ್‌ಫಾರ್ಮ್‌ನಲ್ಲಿ ಗೇಮ್ ಆಡಿದ ನಂತರ ಅವರು ಪರಸ್ಪರ ಫೋನ್ ಸಂಖ್ಯೆಗಳನ್ನು ಹಂಚಿಕೊಂಡರು ಮತ್ತು ವಾಟ್ಸಾಪ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: PubG ಲವ್: ಪಾಕ್ ಮಹಿಳೆ ವಾಪಸ್ ಕಳಿಸದಿದ್ದರೆ ಭಾರತದಲ್ಲಿ ಮತ್ತೊಂದು 26/ ಉಗ್ರ ದಾಳಿ; ಪೊಲೀಸರಿಗೆ ಬಂತು ಬೆದರಿಕೆ ಕರೆ!
ಈ ಮಧ್ಯೆ, ಜುಲೈ 4 ರಂದು, ಸೀಮಾ, ಸಚಿನ್ ಮೀನಾ ಮತ್ತು ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ವಿದೇಶಿಯರ ಕಾಯ್ದೆಯ ಸೆಕ್ಷನ್ 14, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 120B (ಅಪರಾಧದ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಅಪರಾಧ) ಮತ್ತು 3,4,5 ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿತ್ತು. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು ಮತ್ತು ನಂತರ ಜುಲೈ 7 ರಂದು ಜಾಮೀನು ಪಡೆದಿದ್ದರು.
ಇದನ್ನೂ ಓದಿ: PubG ಲವ್: ನಾನೀಗ ಹಿಂದೂ, ಭಾರತವೀಗ ನಂದೇ ಎಂದ ಪಾಕ್‌ನಿಂದ ಓಡಿ ಬಂದ ಮಹಿಳೆ!