ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನದ ಆವಶ್ಯಕತೆಯಿದೆ. ಸರ್ಕಾರ ಅಥವಾ ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನುವುದು ಸರಿಯಲ್ಲ. ಪಕ್ಷವು ಸಂಕುಚಿತ ಮನೋಭಾವ ಬಿಟ್ಟು ಉದಾರ ಮನಃ ಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಮಾಜಿ ಕಾಂಗ್ರೆಸ್ಸಿಗ ಅಶ್ವನಿ ಕುಮಾರ್ ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನದ ಆವಶ್ಯಕತೆಯಿದೆ. ಸರ್ಕಾರ ಅಥವಾ ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನುವುದು ಸರಿಯಲ್ಲ. ಪಕ್ಷವು ಸಂಕುಚಿತ ಮನೋಭಾವ ಬಿಟ್ಟು ಉದಾರ ಮನಃ ಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಮಾಜಿ ಕಾಂಗ್ರೆಸ್ಸಿಗ ಅಶ್ವನಿ ಕುಮಾರ್ ಹೇಳಿದ್ದಾರೆ. ಇಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಶ್ವನಿ, 'ಆಡಳಿತ ಪಕ್ಷ, ಪ್ರಧಾನಿ ಏನೇ ಮಾಡಿದರೂ ತಪ್ಪು ಎನ್ನುವ ಧೋರಣೆ ಸರಿಯಲ್ಲ. ಕಾಂಗ್ರೆಸ್ ಇಲ್ಲದೆ ದೇಶದಲ್ಲಿ ಉತ್ತಮ ವಿಪಕ್ಷವಿರಲು ಸಾಧ್ಯವಿಲ್ಲ.
ಅದು ಇನ್ನೂ ಪ್ರಭಾವಿಯಾಗಿದೆಯಾದರೂ, ಕರ್ನಾಟಕ ಸೇರಿದಂತೆ ಕೆಲವು ಕಡೆಗಳಲ್ಲಿ ನೆಲೆ ಕಳೆದುಕೊಂಡಿದೆ. ಅದರ ಪುನರುಜ್ಜಿವನ ಅಗತ್ಯ. ಅನ್ಯ ಪಕ್ಷಗಳಲ್ಲಿನ ಹುಳುಕನ್ನು ನೋಡುವ ಬದಲು ತನ್ನಲ್ಲಿನ ಸಮಸ್ಯೆಗಳತ್ತ ಗಮನಹರಿಸಿ, ಬಲವರ್ಧನೆ ಮಾಡಿಕೊಳ್ಳುವ ಅಗತ್ಯವಿದೆ' ಎಂದು ಹೇಳಿದ್ದಾರೆ. ಶುಕ್ರವಾರವಷ್ಟೇ, ಪಕ್ಷದ ರಾಷ್ಟ್ರೀಯ ನಾಯಕತ್ವದಲ್ಲೇ ಬದಲಾವಣೆ ಆಗಬೇಕು ಎಂದು ಮಾಜಿ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕಿಮ್ ಆಗ್ರಹಿಸಿದರು.
ರಾಹುಲ್ ನೋಡಿದ್ರೆ ದೊಡ್ಡ ನಾಯಕರಿಗೂ ಜ್ವರ: ಕೈ ವ್ಯಂಗ್ಯ
ನವದೆಹಲಿ: 'ರಾಹುಲ್ ಗಾಂಧಿ ಎದುರು ನಿಂತುಕೊಂಡರೆ ದೊಡ್ಡ ದೊಡ್ಡವರಿಗೂ ಜ್ವರ ಬರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಮತಗಳವಿನ ಬಗ್ಗೆ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶಾ ಅವರ ಕೈಗಳು ನಡುಗುತ್ತಿದ್ದವು, ಮಾತು ತೊದಲುತ್ತಿತ್ತು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
ಆದರೆ ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ನಡುಗಿದಂತೆ ಕಂಡು ಬಂದಿದ್ದಕ್ಕೆ ಅಮಿತ್ ಶಾ ಅವರಿಗಿದ್ದ 102 ಡಿಗ್ರಿ ಜ್ವರ ಕಾರಣ. ಅದಕ್ಕಾಗಿ ಅವರು ಔಷಧಿಯನ್ನು ತೆಗೆದುಕೊಂಡು ಸದನಕ್ಕೆ ಬಂದಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು. ಇದಕ್ಕೆ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್, 'ರಾಹುಲ್ ಎದುರು ಎಷ್ಟೇ ದೊಡ್ಡವರು ನಿಂತರೂ ಜ್ವರ ಬಂದು ಬಿಡುತ್ತದೆ. ಅದರಲ್ಲೂ ಮತಗಳವು ಮಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡು ಆ ಬಗ್ಗೆ ಚರ್ಚಿಸಬೇಕು ಎಂದರೆ ಜ್ವರ ಬರುವುದು ಸಹಜ ಎಂದಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರಿಗೆ ಕೊಕ್ ಸಾಧ್ಯತೆ


