ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ 85 ಲಕ್ಷ ಮತದಾರರ ಮಾಹಿತಿಗಳು ತಪ್ಪಾಗಿ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ನವದೆಹಲಿ: ಪುತ್ರನಿಗಿಂತ ತಂದೆ 15 ವರ್ಷವಷ್ಟೇ ಹಿರಿಯ, 40 ವರ್ಷಕ್ಕಿಂತಲೂ ಕಿರಿಯ ಅಜ್ಜಂದಿರು. ಇವು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಬೆಳಕಿಗೆ ಬಂದ ಅಚ್ಚರಿಗಳು, ಪರಿಷ್ಕರಣೆ ವೇಳೆ ಈ ರೀತಿ 85 ಲಕ್ಷ ಮತದಾರರ ಮಾಹಿತಿಗಳು ತಪ್ಪಾಗಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಚುನಾವಣಾ ಆಯೋಗವು ಸುಮಾರು 1.38 ಕೋಟಿ ಮತದಾರರ ದಾಖಲೆ ಮರುಪರಿಶೀಲನೆಗೆ ಸಿದ್ಧತೆ ನಡೆಸಿದೆ.
ಮತದಾರರ ಹೆಸರು ರದ್ದು: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕನಿಷ್ಠ 57.52 ಲಕ್ಷ ಮತದಾರರು ಪತ್ತೆಯಾಗಿಲ್ಲ, 24.14 ಲಕ್ಷ ಮಂದಿ ಮೃತಪಟ್ಟವರ ಹೆಸರು ಪಟ್ಟಿಯಲ್ಲಿ ಇನ್ನೂ ಉಳಿದುಕೊಂಡಿದೆ. 11.57 ಲಕ್ಷಕ್ಕೂ ಹೆಚ್ಚು ಮಂದಿಯ ಸ್ಥಳ ಪತ್ತೆಯಾಗಿಲ್ಲ, 19.89 ಲಕ್ಷ ಮಂದಿ ಬೇರೆ ವಿಳಾಸಕ್ಕೆ ವರ್ಗಾವಣೆಯಾಗಿದ್ದಾರೆ. 13.05 ಲಕ್ಷ ಮಂದಿಯ ಹೆಸರು ಒಂದಕ್ಕಿಂತ ಹೆಚ್ಚಿನ ಕಡೆ ದಾಖಲಾಗಿದೆ. ಅದೇ ರೀತಿ 11.57 ಲಕ್ಷ ಮಂದಿಯ ಅರ್ಜಿಯನ್ನು ನಾನಾ ಕಾರಣಗಳಿಂದ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು


