95ನೇ ಸೋಲಿನೊಂದಿಗೆ ಸ್ಥಿರತೆ ಕಾಪಾಡಿಕೊಂಡ ರಾಹುಲ್ ಗಾಂಧಿ, ಬಿಜೆಪಿ ಟೀಕೆಗೆ ಕಾಂಗ್ರೆಸ್ ಕೆಂಡಾಮಂಡಲ , ಬಿಹಾರ ಚುನಾವಣೆ ಸೋಲಿನೊಂದಿಗೆ ಕಾಂಗ್ರೆಸ್ ಕಂಗಾಲಾಗಿದೆ. ವೋಟ್ ಚೋರಿ ಆರೋಪವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದಿದೆ.

ನವದೆಹಲಿ (ನ.14) ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಅಂತಿಮ ಫಲಿತಾಂಶ ಹೊರಬಿದ್ದಿಲ್ಲ. ಸದ್ಯ ಬಿಜೆಪಿ ನೇತೃತ್ವದ ಎನ್‌ಡಿಎ 200 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ತೇಜಸ್ವಿ ಯಾದವ್ ರಾಹುಲ್ ಗಾಂಧಿ ಒಳಗೊಂಡ ಮಹಾಘಟಬಂದನ್ 36 ಸ್ಥಾನದಲ್ಲಿ ಮುನ್ನಡೆ ಪಡೆದಿದೆ. ಬಹುತೇಕ ಕಡೆ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಗೆಲುವಿನ ಗೆರೆ ದಾಟಿದ್ದಾರೆ. ಈ ಫಲಿತಾಂಶ, ಮುನ್ನಡೆ ಹೊರಬೀಳುತ್ತಿದ್ದಂತೆ ಇದೀಗ ಬಿಜೆಪಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವ್ಯಂಗ್ಯವಾಡಿದೆ. ರಾಹುಲ್ ಗಾಂಧಿ ವೋಟ್ ಚೋರಿಯನ್ನು ಕೇಳಿಸಿಕೊಂಡವರೇ ಇಲ್ಲ. ಆದರೆ ಚುನಾವಣೆ ವಿಚಾರದಲ್ಲಿ ಕಳೆದೆರಡು ದಶಕದಲ್ಲಿ ರಾಹುಲ್ ಗಾಂಧಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಬಿಹಾರ ಚುನಾವಣೆಯೊಂದಿಗೆ ರಾಹುಲ್ ಗಾಂಧಿ 95ನೇ ಚುನಾವಣೆ ಸೋತಿದ್ದಾರೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.

ಚುನಾವಣೆ ಸೋಲಿನಲ್ಲಿ ರಾಹುಲ್ ಕನ್ಸಿಸ್ಟೆನ್ಸಿ

ರಾಹುಲ್ ಗಾಂಧಿ ದೇಶಾದ್ಯಂದ ಹಲವು ಬಾಂಬ್ ಸಿಡಿಸಿದ್ದರು. ವೋಟ್ ಚೋರಿ ಎಂದು ದೇಶದಲ್ಲಿ ಭಾರಿ ಅಲೆ ಎಬ್ಬಿಸಲು ಪ್ರಯತ್ನಿಸಿದ್ದರು. ಇತ್ತ ಬಿಹಾರದಲ್ಲಿ 16 ದಿನಗಳ ಕಾಲ ವೋಟ್ ಅಧಿಕಾರ್ ಯಾತ್ರೆ ನಡೆಸಿದ್ದರು. ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದರು, ದೇಶದ ಜನರು ಸಾಂವಿಧಾನಿಕ ಸಂಸ್ಥೆಯನ್ನು ಅನುಮಾನದಿಂದ ನೋಡುವ ಹಾಗೆ ಆರೋಪ ಮಾಡಿದ್ದರು. ಜೊತೆಗೆ ದೇಶದ ಜೆನ್‌ಜಿ ನಿಮ್ಮ ಮತ ಕಳ್ಳತನವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದರು. ಆದರೆ ಮತದಾರರು ರಾಹುಲ್ ಗಾಂಧಿ ಆರೋಪ, ಹೋರಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಬಿಹಾರದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದ್ದರೆ, ಮಹಾಘಟಬಂದನ್ ಐಸಿಯುಗೆ ತಲುಪಿದೆ. ಈ ಅಂಕಿ ಅಂಶಗಳನ್ನಿಟ್ಟುಕೊಂಡು ಅಮಿತ್ ಮಾಳವಿಯಾ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಸಕ್ರಿಯ ರಾಜಕಾರಣ, ಕಾಂಗ್ರೆಸ್ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಹೀಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡ ಬಳಿಕ ಇದು 95ನೇ ಚುನಾವಣಾ ಸೋಲು ಎಂದು ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.

ಶತಕಕ್ಕೆ ಇನ್ನು 5 ಬೇಕು ಎಂದ ಅಮಿತ್ ಮಾಳವಿಯಾ

ರಾಹುಲ್ ಗಾಂಧಿ ಚುನಾವಣಾ ಸೋಲಿನ ಕುರಿತು ಅಮಿತ್ ಮಾಳವಿಯಾ ಚಾರ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.ರಾಹುಲ್ ಗಾಂಧಿಯನ್ನು ಹಲವರು ಬೆಳಗ್ಗೆ 9 ರಿಂದ ಸಂಜೆ 5ರ ವರೆಗಿನ ಆರೋಪ ಪ್ರತ್ಯಾರೋಪ ರಾಜಕಾರಣಿ ಎಂದು ಕರೆಯುತ್ತಾರೆ. ಚುನಾವಣೆ ಸೋಲಿನಲ್ಲಿ ರಾಹುಲ್ ಗಾಂಧಿ ಶತಕ ಬಾರಿಸಲು ಇನ್ನು 5 ಸೋಲು ಬೇಕು ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಒಂದೊಂದು ರಾಜ್ಯದಲ್ಲಿ ಚುನಾವಣೆ ಸೋಲಿನ ಅಂಕಿ ಅಂಶವನ್ನು ನೀಡಿದ್ದಾರೆ.

Scroll to load tweet…

2020ರಲ್ಲಿ 19 ಸ್ಥಾನ ಗೆದ್ದಿತ್ತು ಕಾಂಗ್ರೆಸ್

2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 19 ಸ್ಥಾನ ಗೆದ್ದಿತ್ತು. ಕನಿಷ್ಠ ಎರಂಡಕಿ ದಾಟಿತ್ತು. ಆರ್‌ಜೆಡಿ ಜೊತೆ ಸೇರಿ ಎರಡನೇ ದೊಡ್ಡ ಮೈತ್ರಿ ಪಾರ್ಟಿಯಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಸದ್ಯ 4 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಚುನಾವಣಾ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಲು ಬಂದ ರಾಹುಲ್ ಗಾಂಧಿ ಇದೀಗ ಸೋಲಿನಲ್ಲಿ ಮುಳುಗಿದ್ದಾರೆ.