ಗಗನಸಖಿ ಜೊತೆ ಅಸಭ್ಯ ವರ್ತನೆ: ಪ್ರಯಾಣಿಕನನ್ನು ಕೆಳಗಿಸಿ ಹೊರಟ ಸ್ಪೈಸ್ ಜೆಟ್
ಮಾನದಲ್ಲಿ ಪ್ರಯಾಣಿಸುವವರ ದುರ್ವರ್ತನೆಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯ ಮೇಲೆ ಉದ್ಯಮಿಯೊಬ್ಬ ವಿಮಾನದಲ್ಲಿ ಮೂತ್ರ ಮಾಡಿದ ಪ್ರಕರಣ ಮಾಸುವ ಮೊದಲೇ ಈಗ ಮತ್ತೊಂದು ಪ್ರಯಾಣಿಕನ ದುರ್ವರ್ತನೆ ಪ್ರಕರಣ ಬೆಳಕಿಗೆ ಬಂದಿದೆ.
ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರ ದುರ್ವರ್ತನೆಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯ ಮೇಲೆ ಉದ್ಯಮಿಯೊಬ್ಬ ವಿಮಾನದಲ್ಲಿ ಮೂತ್ರ ಮಾಡಿದ ಪ್ರಕರಣ ಮಾಸುವ ಮೊದಲೇ ಈಗ ಮತ್ತೊಂದು ಪ್ರಯಾಣಿಕನ ದುರ್ವರ್ತನೆ ಪ್ರಕರಣ ಬೆಳಕಿಗೆ ಬಂದಿದೆ. ಹೀಗೆ ವಿಮಾನದ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ವಿಮಾನ ತನ್ನ ಪ್ರಯಾಣ ಮುಂದುವರೆಸಿದೆ. ಸ್ಪೈಸ್ ಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದೆ. ಆ ವಿಡಿಯೋದಲ್ಲಿ ಗಗನಸಖಿ ಮತ್ತು ವಯಸ್ಕ ಪ್ರಯಾಣಿಕರೊಬ್ಬರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಿರುವುದು ಸೆರೆ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಪೈಸ್ ಜೆಟ್ (SpiceJet) ಏರ್‌ಲೈನ್ ತನ್ನ ಪ್ರಕಟಣೆ ಹೊರಡಿಸಿದ್ದು, ವಿಮಾನದ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಓರ್ವ ಪ್ರಯಾಣಿಕನ್ನು ವಿಮಾನದಿಂದ ಇಳಿಸಲಾಗಿದೆ (Deboarded) ಎಂದು ತಿಳಿಸಿದೆ. SG-8133 ಸಂಖ್ಯೆಯ ಸ್ಪೈಸ್‌ಜೆಟ್ ವೆಟ್-ಲೀಸ್ಡ್ ಕೊರೆಂಡನ್ ವಿಮಾನವು ದೆಹಲಿಯಿಂದ ಹೈದರಾಬಾದ್‌ಗೆ ಹೊರಡಲು ನಿಗದಿಯಾಗಿತ್ತು. ದೆಹಲಿಯಲ್ಲಿ ಬೋರ್ಡಿಂಗ್ ಸಮಯದಲ್ಲಿ ಪ್ರಯಾಣಿಕರೊಬ್ಬರು ಅಶಿಸ್ತಿನ ಜೊತೆ ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಕ್ಯಾಬಿನ್ ಸಿಬ್ಬಂದಿಗೆ (crew member) ಕಿರುಕುಳ ನೀಡಿ ತೊಂದರೆ ಉಂಟು ಮಾಡಿದ್ದಾರೆ. ಸಿಬ್ಬಂದಿ ಈ ವಿಷಯವನ್ನು ಪಿಐಸಿ ಮತ್ತು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ವಿಮಾನದ ಸಿಬ್ಬಂದಿ ದುರ್ವರ್ತನೆ ತೋರಿದ ಪ್ರಯಾಣಿಕ ಹಾಗೂ ಆತನ ಜೊತೆ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಏರ್‌ಲೈನ್ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ವಿಮಾನ ಸಿಬ್ಬಂದಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಸಹ ಪ್ರಯಾಣಿಕರು ವಿಮಾನದಲ್ಲಿ ಸೀಮಿತ ಜಾಗದಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ. ಪ್ರಯಾಣಿಕರು (passengers) ನಂತರ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ವಿಮಾನ ಹಾರಿದ ನಂತರ ಏನಾದರೂ ಕಿರಿಕಿರಿ ಶುರು ಮಾಡಿದರೆ ಎಂದು ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ
ವಿಮಾನದಲ್ಲಿ ಸಹ ಪ್ರಯಾಣಿಕಳ ಮೇಲೆ ಉದ್ಯಮಿಯೋರ್ವ ಮೂತ್ರ ಮಾಡಿದ ನಾಚಿಕೆಗೇಡಿನ ಘಟನೆ ನಡೆದ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಏರ್ ಇಂಡಿಯಾಗೆ (Air India) ಶೋಕಾಸ್ ನೋಟಿಸ್ ನೀಡಿದ್ದರು. ಜೊತೆಗೆ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದರು. ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿತ್ತು.
ನಾನು ಮಾಡಿಲ್ಲ, ಮಹಿಳೆಯೇ ಆಕೆ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ, ಶಂಕರ್ ಮಿಶ್ರಾ ಟೂ ಟರ್ನ್!