ಜಮ್ಮು ಕಾಶ್ಮೀರ: 1989ರಲ್ಲಿ ನಡೆದ ಕಾಶ್ಮೀರದ ಮುಖ್ಯಮಂತ್ರಿ ಹಾಗೂ ದೇಶದ ಗೃಹಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸೈಯದ್‌ ಅವರ ಪುತ್ರಿ ರುಬಿಯಾ ಸೈಯದ್ ಅಪಹರಣ ಪ್ರಕರಣದ ವಿಚಾರಣೆ 33 ವರ್ಷಗಳ ಬಳಿಕ ಇಂದು ಕೋರ್ಟ್‌ನಲ್ಲಿ ನಡೆದಿದೆ.  

ಜಮ್ಮು ಕಾಶ್ಮೀರ: 1989ರಲ್ಲಿ ನಡೆದ ಕಾಶ್ಮೀರದ ಮುಖ್ಯಮಂತ್ರಿ ಹಾಗೂ ದೇಶದ ಗೃಹಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸೈಯದ್‌ ಅವರ ಪುತ್ರಿ ರುಬಿಯಾ ಸೈಯದ್ ಅಪಹರಣ ಪ್ರಕರಣದ ವಿಚಾರಣೆ 33 ವರ್ಷಗಳ ಬಳಿಕ ಇಂದು ಕೋರ್ಟ್‌ನಲ್ಲಿ ನಡೆದಿದೆ. ಈ ವೇಳೆ ರುಬಿಯಾ ಸೈಯದ್ ಅವರ ಹೇಳಿಕೆಯನ್ನು ಕೋರ್ಟ್‌ ದಾಖಲಿಸಿಕೊಂಡಿದೆ. ಅಲ್ಲದೇ ಪ್ರಕರಣದ ಆರೋಪಿಯಾಗಿರುವ ಕಾಶ್ಮೀರದ ಪ್ರತ್ಯೇಕತವಾದಿ ನಾಯಕ ಯಾಸೀನ್ ಮಲಿಕ್‌ ಅವರ ಗುರುತನ್ನು ರುಬಿಯಾ ಸೈಯದ್ ಕೋರ್ಟ್‌ನಲ್ಲಿ ಹೇಳಿದ್ದಾರೆ ಎಂದು ಸಿಬಿಐ ಪರ ವಕೀಲರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 

ಜಮ್ಮು ಕಾಶ್ಮೀರದ ಟಾಡಾ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ವಕೀಲೆ ಮೋನಿಕಾ ಕೊಹ್ಲಿ ಅವರು, ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರಕರಣ ನಡೆದು ಮೂರು ದಶಕಗಳ ನಂತರ ರುಬಿಯಾಳನ್ನು ಸಾಕ್ಷಿಯಾಗಿ ಪರಿಗಣಿಸಿ ಕೋರ್ಟ್ ಅವರಿಗೆ ಹೇಳಿಕೆ ದಾಖಲಿಸಲು ಸಮನ್ಸ್‌ ನೀಡಿತ್ತು. ಅದರನ್ವಯ ಕೋರ್ಟ್‌ಗೆ ಇಂದು ಹಾಜರಾಗಿ ಅವರು ಸಾಕ್ಷ್ಯ ಹೇಳಿದ್ದಾರೆ. 

Scroll to load tweet…

ಕಾಶ್ಮೀರದ ಪ್ರತ್ಯೇಕತವಾದಿ ನಾಯಕ ಯಾಸೀನ್ ಮಲಿಕ್‌ ರುಬಿಯಾ ಸೈಯದ್ ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ದೈಹಿಕವಾಗಿ ಹಾಜರಾಗಲು ಅನುಮತಿ ನೀಡಬೇಕು ಎಂದು ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದ. ಐಎಎಫ್ ಸಿಬ್ಬಂದಿಯ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ಕಳಪೆ ಆಡಿಯೊ ಗುಣಮಟ್ಟವಿತ್ತು ಎಂದು ಯಾಸೀನ್ ದೂರಿದ್ದ.

1990 ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ ಓಡಿಸಿದ ಘಟನೆಗೆ ಕಾರಣವೇನು?

ಯಾಸೀನ್ ಮಲಿಕ್ ಯಾರು

ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್‌ ವಿರುದ್ಧ ಹಲವು ಅಪರಾಧ ಪ್ರಕರಣಗಳು ಇವೆ. ಭಯೋತ್ಪಾದನೆಗೆ ಹಣದ ನೆರವು ಒದಗಿಸಿದ ಪ್ರಕರಣದಲ್ಲಿ (ಮೇ 25) ರಂದು ಈತನಿಗೆ ಹತ್ತು ವರ್ಷ ಕಠಿಣ ಸಜೆ ಶಿಕ್ಷೆ, ಜೊತೆಗೆ 10 ಲಕ್ಷ ರೂ ದಂಡ ವಿಧಿಸಲಾಗಿದೆ. ಹತ್ತು ಅಪರಾಧ ಕೃತ್ಯಗಳ ಸಂಬಂಧ ಎರಡರಲ್ಲಿ ಈತನಿಗೆ ಜೀವಾವಧಿ ಶಿಕ್ಷೆವಿಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಭಯೋತ್ಪಾದನೆ ಚಟುವಟಿಕೆ, ಕಲ್ಲು ತೂರಾಟ ಇತ್ಯಾದಿ ಘಟನೆಗಳು ಸಂಭವಿಸಿದ್ದವು. ಪಾಕಿಸ್ತಾನದಿಂದ ಹರಿದುಬಂದ ಹಣದ ನೆರವಿನಿಂದ ಈ ಕೃತ್ಯಗಳನ್ನ ಎಸಗಲಾಗಿದೆ ಎಂಬುದು ಭಾರತದ ರಾಷ್ಟ್ರೀಯ ತನಿಖಾ ದಳ ಎನ್‌ಐಎ ಆರೋಪ. 2010ರಿಂದ 2016ರ ಅವಧಿಯಲ್ಲಿ ಪಾಕ್ ಪ್ರಾಯೋಜಿತ ಉಗ್ರ ಚಟುವಟಿಕೆಗಳು ಬಹಳ ನಡೆದಿದ್ದು, ಭಯೋತ್ಪಾದನೆಗೆ ನಿಧಿ ಸಂಗ್ರಹಿಸಿದ ಆರೋಪದ ಮೇಲೆ 2017ರಲ್ಲಿ ಎನ್‌ಐಎ ಹಲವು ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿತು. 2019ರಲ್ಲಿ ಯಾಸಿನ್ ಮಲಿಕ್ ಸೇರಿದಂತೆ ಐವರ ಮೇಲೆ ಚಾರ್ಜ್‌ಶೀಟ್ ಹಾಕಲಾಯಿತು.

Ahmedabad Bomb Attack: 21 ಬಾಂಬ್.. 38 ಜನರಿಗೆ ಗಲ್ಲು.. ಯಾಸೀನ್ ಭಟ್ಕಳ ಜನ್ಮ ಜಾತಕ!

ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸುವುದರ ಜೊತೆಗೆ ಪಾಕಿಸ್ತಾನದ ಆಡಳಿತದಲ್ಲಿರುವ ಕಾಶ್ಮೀರದ ಭಾಗವನ್ನೂ ಸ್ವತಂತ್ರಗೊಳಿಸಿ ಎರಡನ್ನು ಸೇರಿಸಿ ಅಖಂಡ ಕಾಶ್ಮೀರ ನಿರ್ಮಾಣ ಮಾಡಬೇಕೆಂಬುದು ಈತನ ಕನಸಾಗಿತಂತೆ.