ಯಾರಾದರೂ ಬೈಯುವಾಗ ‘ದನಾ ಕಾಯೋಕೆ ಹೋಗು’ ಎನ್ನುವುದು ಮಾಮೂಲಿ. ಆದರೆ ದನ ಕಾಯೋರಿಗೆ ರಾಜಸ್ಥಾನದಲ್ಲಿ ಭಾರೀ ಬೆಲೆ. ದನಗಾಹಿಗಳಿಗೆ ಮಾಸಿಕ 10,000 ರು. ಗೌರವಧನ ನೀಡುವ ವಿನೂತನ ಯೋಜನೆಯನ್ನು ರಾಜಸ್ಥಾನ ಸರ್ಕಾರ ಆರಂಭಿಸಿದ್ದು, ರಾಜ್ಯಾದ್ಯಂತ ಗಮನ ಸೆಳೆದಿದೆ.

ಜೈಪುರ: ಯಾರಾದರೂ ಬೈಯುವಾಗ ‘ದನಾ ಕಾಯೋಕೆ ಹೋಗು’ ಎನ್ನುವುದು ಮಾಮೂಲಿ. ಆದರೆ ದನ ಕಾಯೋರಿಗೆ ರಾಜಸ್ಥಾನದಲ್ಲಿ ಭಾರೀ ಬೆಲೆ. ದನಗಾಹಿಗಳಿಗೆ ಮಾಸಿಕ 10,000 ರು. ಗೌರವಧನ ನೀಡುವ ವಿನೂತನ ಯೋಜನೆಯನ್ನು ರಾಜಸ್ಥಾನ ಸರ್ಕಾರ ಆರಂಭಿಸಿದ್ದು, ರಾಜ್ಯಾದ್ಯಂತ ಗಮನ ಸೆಳೆದಿದೆ.

Add Asianetnews Kannada as a Preferred SourcegooglePreferred

ಈವರೆಗೂ ಜನರು ತಾವೇ ಕೆಲವರನ್ನು ದನ ಕಾಯಲು ನೇಮಿಸಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಸರ್ಕಾರವೇ ಇವರ ನೇಮಕಕ್ಕೆ ಮುಂದಾಗಿದೆ. ಈ ಯೋಜನೆಗೆ ‘ಗಾವ್‌ ಗ್ವಾಲಾ ಯೋಜನೆ’ ಎಂದು ಹೆಸರಿಡಲಾಗಿದೆ.

ಯೋಜನೆ ಹೀಗಿದೆ;

ಇದರನ್ವಯ ಹಳ್ಳಿಗಳಲ್ಲಿನ ಪ್ರತಿ 70 ದನಗಳಿಗೆ ಒಬ್ಬ ದನಗಾಹಿಯನ್ನು ನೇಮಿಸಲಾಗುತ್ತದೆ. ದನಗಳ ಸಂಖ್ಯೆ ಇದಕ್ಕಿಂತ ಹೆಚ್ಚಾದರೆ 2 ಅಥವಾ 3 ದನಗಾಹಿಗಳನ್ನು ನಿಯೋಜಿಸಲಾಗುತ್ತದೆ. ಇವರಿಗೆ ತಿಂಗಳಿಗೆ 10,000 ರು. ಗೌರವಧನವನ್ನು ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಈ ಹಣವನ್ನು ಸರ್ಕಾರ ನೇರವಾಗಿ ಭರಿಸುವುದಿಲ್ಲ. ದಾನಿಗಳು ಮತ್ತು ಸಾರ್ವಜನಿಕರಿಂದ ನೆರವು ಪಡೆದು ಭರಿಸಲಾಗುತ್ತದೆ.

ಏಕೆ ಈ ಯೋಜನೆ?:

ಈ ಯೋಜನೆಯ ಪ್ರಾಥಮಿಕ ಉದ್ದೇಶವೆಂದರೆ, ಗ್ರಾಮೀಣ ಮಟ್ಟದಲ್ಲಿ ಸಂಘಟಿತ ಗೋಪಾಲನೆಯ ಪ್ರಾಚೀನ ಪದ್ಧತಿಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಅದರ ಪಾತ್ರವನ್ನು ಬಲಪಡಿಸುವುದು.