ಕಂಪನಿಗಳು ಡಬಲ್ ಸ್ಯಾಲರಿ ನೀಡಲು ಕಟ್ಟು ನಿಟ್ಟಿನ ಮಾನದಂಡಗಳಿರುತ್ತೆ. ಆದರೆ ಈ ಕಂಪನಿ ಉಲ್ಟಾ, ಇಲ್ಲಿ ಕಂಪನಿ ಸಂಸ್ಥಾಪಕನ ರೋಸ್ಟ್ ಮಾಡಿದರೆ ಸಾಕು. ನೇರಾ ನೇರಾ ರೋಸ್ಟ್ ಮಾಡಿದರೆ ಸಾಕು, ಡಬಲ್ ವೇತನ ಪಡೆಯಬಹುದು.
ಚಂಡೀಘಡ (ಅ.02) ತಿಂಗಳ ಸ್ಯಾಲರಿ ಪಡೆಯವ ಬಹುತೇಕರು ಹೆಚ್ಚುವರಿ ಕೆಲಸ ಮಾಡಿದರೆ ಹೆಚ್ಚುವರಿ ಸ್ಯಾಲರಿ, ಓವರ್ ಟೈಮ್ ಸ್ಯಾಲರಿ ಸಿಗುವುದಿಲ್ಲ. ಇನ್ನು ಹಲವು ಬಾರಿ ತಮ್ಮ ವೈಯುಕ್ತಿಕ ಸಮಯವನ್ನು ಕಚೇರಿ ಕೆಲಸಕ್ಕಾಗಿ ಮೀಸಲಿಡಬೇಕಾಗುತ್ತದೆ. ಇದಕ್ಕೆ ವಿರುದ್ಧವಾದ ಭಾರತದ ಕಂಪನಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಇಲ್ಲಿ ಕಂಪನಿ ಸಂಸ್ಥಾಪಕನ ನೇರಾ ನೇರಾ ಕುಳಿತು ಟೀಕಿಸಿ, ರೋಸ್ಟ್ ಮಾಡಿದರೆ ಡಬಲ್ ಸ್ಯಾಲರಿ. ಇಷ್ಟೇ ಅಲ್ಲ ರಜಾ ದಿನದಲ್ಲಿ ಕೆಲಸ ಮಾಡಿದರೂ ಡಬಲ್ ಸ್ಯಾಲರಿ. ತಿಂಗಳ ಅಂತ್ಯದಲ್ಲಿ ಭರ್ಜರಿ. ಈ ವಿಶೇಷ ಕಂಪನಿಯ ನೀತಿ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
25ರ ಹರೆಯದ ಕಂಪನಿ ಸಂಸ್ಥಾಪಕನ ಹೊಸ ನೀತಿ
ಚಂಡೀಘಡ ಮೂಲಕ ಪ್ರಥಮ್ ಜಿಂದಾಲ್ ಕೆಂಟೆಂಟ್ ಕ್ರಿಯೇಶನ್ ಹಾಗೂ ಪ್ರೊಡಕ್ಷನ್ ಕಂಪನಿ ನಡೆಸುತ್ತಿದ್ದಾರೆ. 25ರ ಹರೆಯದ ಜೆನ್‌ಝಿ ಸಂಸ್ಥಾಪಕನ ನೀತಿಗಳೇ ಭಿನ್ನ. ಈತನ ಕಂಪನಿಯಲ್ಲಿ 50ಕ್ಕೂ ಹೆಚ್ಚು ಉದ್ಯೋಗಗಳಿದ್ದಾರೆ. ಎಲ್ಲಾ ಉದ್ಯೋಗಿಗಳು ಹೆಚ್ಚು ಖುಷಿಯಾಗಿ, ಸಂಭ್ರಮದಿಂದ ಕೆಲಸ ಮಾಡುತ್ತಾರೆ ಎಂದು ಸಂಸ್ಥಾಪಕ ಪ್ರಥಮ್ ಜಿಂದಾಲ್ ಹೇಳಿಕೊಂಡಿದ್ದಾರೆ.
ಉದ್ಯೋಗಿಗಳು ಸರಿಯಾಗಿ ರೋಸ್ಟ್ ಮಾಡಿದರೆ ಡಬಲ್ ಸ್ಯಾಲರಿ
ಕಂಪನಿಯಲ್ಲಿ ಹಲವು ನೀತಿಗಳಲ್ಲಿ ರೋಸ್ಟ್ ನೀತಿ ಕೂಡ ಒಂದು. ನಾವು ಮಾಡಿದ ಕೆಲಸ, ನಮ್ಮ ನಿರ್ಧಾರಗಳನ್ನು, ಔಟ್‌ಪುಚ್‌ಗಳನ್ನು ಪ್ರಮುಖವಾಗಿಟ್ಟುಕೊಂಡು ಕಂಪನಿ ಸಂಸ್ಥಾಪಕನ ರೋಸ್ಟ್ ಮಾಡಲು ಇಲ್ಲಿ ಅವಕಾಶವಿದೆ. ಸರಿಯಾದ ಕಾರಣ, ಪಂಚಿಂಗ್ ಡೈಲಾಗ್ ಮೂಲಕ ಟೀಕೆ ಸೇರಿದಂತೆ ಸರಿಯಾಗಿ ಬೆಂಡೆತ್ತಿದರೆ ಡಬಲ್ ಸ್ಯಾಲರಿ ನೀಡಲಾಗುತ್ತದೆ. ಕಂಪನಿಯಲ್ಲಿ ಸಜೆಷನ್ ಬಾಕ್ಸ್, ಹೆಸರು ಗೌಪ್ಯವಾಗಿಟ್ಟುಕೊಂಡು ಪತ್ರ ಬರೆಯುವು ಪ್ರಕ್ರಿಯೆಗಳಿಲ್ಲ. ಏನಿದ್ದರು ನೇರಾ ನೇರಾ ಬಂದು ಮಾತನಾಡಬೇಕು. ಅದು ಟೀಕೆಯಾದರೂ ಸರಿ, ಏನೇ ಆದರೂ ಸರಿ, ರೋಸ್ಟ್ ಮಾಡಿದರೆ ಕೆಲಸ ಮುಗಿತು, ಡಬಲ್ ಸ್ಯಾಲರಿ ಕ್ರೆಡಿಟ್ ಆಗಲಿದೆ.
ರಜಾ ದಿನ ಕೆಲಸ ಮಾಡಿದರೆ ಡಬಲ್ ಸ್ಯಾಲರಿ
ಉದ್ಯೋಗಿಗಳು ತಮ್ಮ ರಜಾ ದಿನದಲ್ಲಿ ಕೆಲಸ ಮಾಡಿದರೆ ಡಬಲ್ ಸ್ಯಾಲರಿ ಕಂಪನಿ ನೀಡಲಿದೆ. ಹೆಚ್ಚುವರಿ ಕೆಲಸ ಅಥವಾ ಕೆಲ ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮ ರಜಾ ದಿನದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗಳು ಎದುರಾಗಲಿದೆ. ಹೀಗೆ ಕೆಲಸ ಮಾಡಿದ ಉದ್ಯೋಗಿಗಳಿಗೆ ಕಂಪನಿಯಿಂದ ಧನ್ಯವಾದ ಇಮೇಲ್ ಕಳುಹಿಸುವುದಿಲ್ಲ, ಬದಲಾಗಿ ಡಬಲ್ ಸ್ಯಾಲರಿ ನೀಡಲಾಗುತ್ತದೆ ಎಂದು ಪ್ರಥಮ್ ಜಿಂದಾಲ್ ಹೇಳಿದ್ದಾರೆ.
ತಿಂಗಳ ಕೊನೆಯಲ್ಲಿ ಭರ್ಜರಿ ಪಾರ್ಟಿ
ಒಂದು ತಿಂಗಳಲ್ಲಿ ಟಾರ್ಗೆಟ್, ಕೆಲಸ, ಪ್ರೊಡಕ್ಷನ್, ಆದಾಯ ಬಗ್ಗೆ ಎಲ್ಲರೂ ತಲೆಕೆಡಿಸಿಕೊಳ್ಳುತ್ತಾರೆ. ಹೀಗಾಗಿ ತಿಂಗಳ ಕೊನಯಲ್ಲಿ ಉದ್ಯೋಗಿಗಳಿಗೆ ಭರ್ಜರಿ ಪಾರ್ಟಿ ನೀಡಲಾಗುತ್ತದೆ. ಇದರಿಂದ ತಿಂಗಳ ಇಡೀ ಶ್ರಮ, ಟೆನ್ಶನ್‌ಗೆ ಪರಿಹಾರವಾಗಿ ಭರ್ಜರಿ ಪಾರ್ಟಿ ಮಾಡಲಾಗುತ್ತದೆ.
ಕಂಪನಿಯ ದೈನಂದಿನ ಕಾರ್ಯಾಚರಣೆ, ಪ್ರೊಡಕ್ಷನ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಎಲ್ಲಾ ಉದ್ಯೋಗಿಗಳ ಜೊತೆ ಹಂಚಿಕೊಳ್ಳಲಾಗುತ್ತದೆ. ಈ ಕಂಪನಿ ಸೇರಿಕೊಳ್ಳಲು ಬಯಸಿದರೆ ಒಂದೇ ಕಂಡೀಷನ್ ವರ್ಕ್ ಫ್ರಮ್ ಹೋಮ್ ಇಲ್ಲ, ಚಂಡೀಘಡ ಆಫೀಸ್‌ಗೆ ಹೋಗಬೇಕು.


