ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ರಾಬರ್ಟ್ ವಾದ್ರಾ, ಹಿಂದುತ್ವದ ಒತ್ತು ಮುಸ್ಲಿಮರನ್ನು ದುರ್ಬಲಗೊಳಿಸುತ್ತಿದೆ, ಹಿಂದೂ-ಮುಸ್ಲಿಂ ಧ್ರುವೀಕರಣ ಭಯೋತ್ಪಾದನೆಗೆ ಕಾರಣ ಎಂದಿದ್ದಾರೆ. ಇದು ಪ್ರಧಾನಿ ಮೋದಿಗೆ ಸಂದೇಶವಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆಗೆ ಜಾತ್ಯತೀತ ವಾತಾವರಣ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

ನವದೆಹಲಿ (ಏ.23): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ಘಟನೆಯ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಭಾರೀವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ನಡೆಯುತ್ತಿದೆ, ಇದರಿಂದಾಗಿ ಮುಸ್ಲಿಮರಿಗೆ ತಾವು ದುಬರ್ಲ ಅನ್ನೋ ಭಾವನೆ ಬರುತ್ತಿದೆ. ಭಯೋತ್ಪಾದಕರು ತಮ್ಮ ರುತನ್ನು ಕೇಳಿ ಜನರನ್ನು ಕೊಲ್ಲಲು ಇದೇ ಕಾರಣ ಎಂದು ಅವರು ಹೇಳಿದ್ದಾರೆ. 

ದೇಶದ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು ದುರ್ಬಲರಾಗಿದ್ದಾರೆ. ಈ ದಾಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಟ್ಟ ಸಂದೇಶವೂ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಸರ್ಕಾರ ಯಾವಾಗಲೂ ಹಿಂದುತ್ವದ ಬಗ್ಗೆ ಮಾತನಾಡುತ್ತದೆ, ಇದರಿಂದಾಗಿ ಅಲ್ಪಸಂಖ್ಯಾತ ಸಮುದಾಯವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಾದ್ರಾ ಹೇಳಿದ್ದಾರೆ.

ಮುಸ್ಲಿಮರಿಗೆ ಅನಾನುಕೂಲ ಆಗುತ್ತಿದೆ: ರಾಬರ್ಟ್ ವಾದ್ರಾ ಮಂಗಳವಾರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ವಾದ್ರಾ, ಈ ಭಯೋತ್ಪಾದಕ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ನನಗೆ ತುಂಬಾ ದುಃಖವಾಗಿದೆ ಮತ್ತು ನನ್ನ ಆಳವಾದ ಸಂತಾಪಗಳು ಅವರೊಂದಿಗೆ ಇದೆ ಎಂದು ಹೇಳಿದರು. ಇದೇ ವೇಳೆ ವಾದ್ರಾ ದೇಶದ ವಾತಾವರಣದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಸರ್ಕಾರವು ಆಗಾಗ್ಗೆ ಹಿಂದುತ್ವದ ಬಗ್ಗೆ ಮಾತನಾಡುತ್ತದೆ ಎಂದು ಅವರು ಹೇಳಿದರು. ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ದುರ್ಬಲ ಎನ್ನುವ ಭಾವ ಬರುವಂತೆ ನಾವು ಸಮಸ್ಯೆಯಲ್ಲಿದ್ದೇವೆ ಎನ್ನುವಂತೆ ಮಾಡುತ್ತದೆ. ವಾದ್ರಾ ಅವರ ಪ್ರಕಾರ, 'ನಮ್ಮ ದೇಶದಲ್ಲಿ, ಸರ್ಕಾರ ಹಿಂದುತ್ವದ ಬಗ್ಗೆ ಮಾತನಾಡಿದರೆ, ಅಲ್ಪಸಂಖ್ಯಾತರು ಅನಾನುಕೂಲ ಮತ್ತು ತೊಂದರೆಗೀಡಾಗುತ್ತಾರೆ..' ಎಂದಿದ್ದಾರೆ.

'ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಅಂತರವಿದೆ': ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಕಾರಣದ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಭಯೋತ್ಪಾದಕರು ಸಂತ್ರಸ್ಥರ ಗುರುತನ್ನು (ಧರ್ಮ) ನೋಡಿ ಕೊಲ್ಲುತ್ತಿದ್ದರೆ, ಅದಕ್ಕೆ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸೃಷ್ಟಿಯಾಗಿರುವ ಅಂತರವೇ ಕಾರಣ ಎಂದು ವಾದ್ರಾ ಹೇಳಿದರು. ಅವರ ಪ್ರಕಾರ, 'ಈ ಭಯೋತ್ಪಾದಕ ಘಟನೆಯನ್ನು ನೋಡಿದರೆ, ಅವರು (ಭಯೋತ್ಪಾದಕರು) ಜನರ ಗುರುತನ್ನು ನೋಡಿ ಕೊಂದಿದ್ದಾರೆ. ಅವರು ಇದನ್ನು ಏಕೆ ಮಾಡುತ್ತಿದ್ದಾರೆ? ಏಕೆಂದರೆ ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಭಜನೆ ಇದೆ..' ಎಂದು ಹೇಳಿದ್ದಾರೆ.

ಇದು ಪ್ರಧಾನಿಗೆ ಸಂದೇಶ: ಭಯೋತ್ಪಾದಕ ಸಂಘಟನೆಗಳು ಹಿಂದೂಗಳು ಮುಸ್ಲಿಮರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಭಾವಿಸುವಂತೆ ಮಾಡಬಹುದು ಎಂದು ವಾದ್ರಾ ಹೇಳಿದರು. ಜನರ ಧರ್ಮದ ಆಧಾರದ ಮೇಲೆ ಕೊಲ್ಲುವುದು ಪ್ರಧಾನಿಗೆ ಸಂದೇಶವಾಗಿದೆ ಎಂದು ಅವರು ಹೇಳಿದರು. ವಾದ್ರಾ ಪ್ರಕಾರ, 'ಇದು ಹಿಂದೂಗಳು ಎಲ್ಲಾ ಮುಸ್ಲಿಮರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಈ ಸಂಘಟನೆಗಳು ಭಾವಿಸಿವೆ. ಯಾರೊಬ್ಬರ ಗುರುತನ್ನು ನೋಡಿ ನಂತರ ಅವರನ್ನು ಕೊಲ್ಲುವುದು ಪ್ರಧಾನಿಗೆ ಕೊಟ್ಟ ಸಂದೇಶವಾಗಿದೆ, ಏಕೆಂದರೆ ಮುಸ್ಲಿಮರು ದುರ್ಬಲರಾಗಿದ್ದಾರೆ. ಅಲ್ಪಸಂಖ್ಯಾತರು ದುರ್ಬಲರಾಗಿದ್ದಾರೆ...' ಎಂದಿದ್ದಾರೆ.

'ಶೀಘ್ರದಲ್ಲೇ ಉತ್ತರ ಸಿಗಲಿದೆ..' ಉಗ್ರರಿಗೆ ನೇರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಅಲ್ಪಸಂಖ್ಯಾತರು ಸುರಕ್ಷಿತವಾಗಿರುವಂತಹ ವಾತಾವರಣವನ್ನು ಸೃಷ್ಟಿಸುವಂತೆ ವಾದ್ರಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದೇಶದಲ್ಲಿ ಜಾತ್ಯತೀತತೆ ಉಳಿಯಬೇಕು ಮತ್ತು ಅಂತಹ ಘಟನೆಗಳು ನಡೆಯಬಾರದು ಎಂದು ಅವರು ಹೇಳಿದರು. 'ನಮ್ಮ ದೇಶದಲ್ಲಿ ನಾವು ಸುರಕ್ಷಿತ ಮತ್ತು ಜಾತ್ಯತೀತ ಭಾವನೆ ಹೊಂದಿದ್ದೇವೆ ಎನ್ನುವುದು ಹೊರಗೆ ಗೊತ್ತಾಗುವಂತಿರಬೇಕು. ಹಾಗಾದಾಗ ಮಾತ್ರವೇ ಇಂಥ ಘಟನೆಗಳು ನಡೆಯುವುದನ್ನು ನಾವು ನೋಡುವುದಿಲ್ಲ' ಎಂದು ವಾದ್ರಾ ಹೇಳಿದರು.

ಪತಿಯ ಶವ ಪೆಟ್ಟಿಗೆ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಲೆಫ್ಟಿನೆಂಟ್‌ ವಿನಯ್ ನರ್ವಾಲ್ ಪತ್ನಿ

Scroll to load tweet…