Asianet Suvarna News Asianet Suvarna News

ರಸ್ತೆ ಎಷ್ಟು ಕೆಟ್ಟದಾಗಿದೆ ಅಂದ್ರೆ ನಾನು ರೈಲಿನಲ್ಲಿ ಪ್ರಯಾಣಿಸ್ತಿದ್ದೇನೆ: ಗಡ್ಕರಿಗೆ ತಮಿಳುನಾಡು ಸಿಎಂ ಪತ್ರ

ಚೆನ್ನೈನಿಂದ ರಾಣಿಪೇಟ್ ರಾಷ್ಟ್ರೀಯ ಹೆದ್ದಾರಿ ನಡುವಿನ ರಸ್ತೆ ಸಂಪರ್ಕದ ದುಃಸ್ಥಿತಿ ಕುರಿತು ಪತ್ರ ಬರೆದಿದ್ದು, ರಸ್ತೆಯ ಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇತ್ತೀಚೆಗೆ ಕೆಲವು ಜಿಲ್ಲೆಗಳಿಗೆ ರೈಲಿನಲ್ಲಿ ಭೇಟಿ ನೀಡಬೇಕಾಯ್ತು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

roads so bad that tamil nadu chief ministers letter to nitin gadkari ash
Author
First Published Feb 12, 2023, 4:46 PM IST

ಚೆನ್ನೈ (ಫೆಬ್ರವರಿ 12, 2023): ಮೋದಿ ಸರ್ಕಾರ ಅನೇಕ ಹೊಸ ರಸ್ತೆಗಳನ್ನು ಉದ್ಘಾಟಿಸುತ್ತಲೇ ಇದ್ದು, ಅನೇಕ ಹೊಸ ಯೋಜನೆಗಳನ್ನು ಸಹ ಕೈಗೆತ್ತಿಕೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಮುಂತಾದ ರಸ್ತೆಗಳು ಉದ್ಘಾಟನೆಯಾಗುತ್ತಿವೆ. ಈ ಕಾರಣಕ್ಕೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಸ್ತೆ ಸಂಪರ್ಕದ ದುಸ್ಥಿತಿ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

ಚೆನ್ನೈನಿಂದ ರಾಣಿಪೇಟ್ ರಾಷ್ಟ್ರೀಯ ಹೆದ್ದಾರಿ ನಡುವಿನ ರಸ್ತೆ ಸಂಪರ್ಕದ ದುಃಸ್ಥಿತಿ ಕುರಿತು ಪತ್ರ ಬರೆದಿದ್ದು, ರಸ್ತೆಯ ಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಕಾರಣದಿಂದ ಇತ್ತೀಚೆಗೆ ಕೆಲವು ಜಿಲ್ಲೆಗಳಿಗೆ ರೈಲಿನಲ್ಲಿ ಭೇಟಿ ನೀಡಬೇಕಾಯ್ತು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: 1386 ಕಿ.ಮೀ ದೂರದ ದೇಶದ ಅತೀ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ನೋಟ!

ರಸ್ತೆ ವಿಭಾಗವು ಚೆನ್ನೈ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಪ್ರಮುಖ ಸಂಪರ್ಕ ಒದಗಿಸುತ್ತದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್‌ ಹೇಳಿದ್ದಾರೆ. ಅಲ್ಲದೆ, ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು ಸಂಸತ್‌ನಲ್ಲಿ ಈ ಬಗ್ಗೆ ಈಗಾಗಲೇ ಸಂಸತ್ತಿನಲ್ಲಿ ನಿರ್ದಿಷ್ಟ ಮನವಿ ಮಾಡಿದ್ರೂ ಕೇಂದ್ರ ಸಚಿವರು ಸಾಮಾನ್ಯ ಉತ್ತರ ನೀಡಿದ್ದು, ಬದ್ಧತೆ ತೋರಲಿಲ್ಲ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.

 "ಚೆನ್ನೈನಿಂದ ರಾಣಿಪೇಟೆಗೆ (NH-4) ಅಸ್ತಿತ್ವದಲ್ಲಿರುವ ರಸ್ತೆಯ ಸ್ಥಿತಿಯನ್ನು ಸುಧಾರಿಸಲು ಸಂಸತ್ತಿನಲ್ಲಿ ಸಂಸದರಾದ ತಿರು. ದಯಾನಿಧಿ ಮಾರನ್ ಅವರು ಮಾಡಿದ ಮನವಿಯನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಈ ವಿಭಾಗವು ಚೆನ್ನೈ ನಗರ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಪ್ರಮುಖ ಸಂಪರ್ಕ ಒದಗಿಸುತ್ತದೆ. ಆದರೆ, ರಸ್ತೆಯ ಸ್ಥಿತಿ ತುಂಬಾ ಕೆಟ್ಟದಾಗಿದೆ, ಈ ಹಿನ್ನೆಲೆ ನಾನು ಇತ್ತೀಚಿನ ಕೆಲವು ಜಿಲ್ಲೆಗಳಿಗೆ ರೈಲಿನಲ್ಲಿ ನನ್ನ ಭೇಟಿಯನ್ನು ಯೋಜಿಸಬೇಕಾಗಿತ್ತು. ನಮ್ಮ ಸಂಸದರು ಈ ಪ್ರಮುಖ ರಸ್ತೆಯ ಬಗ್ಗೆ ಬಹಳ ನಿರ್ದಿಷ್ಟವಾಗಿದ್ದರು. ಆದರೆ, ನಿಮ್ಮ ಉತ್ತರದಿಂದ ನಾವು ನಿರಾಶೆಗೊಂಡಿದ್ದೇವೆ, ಅದು ತುಂಬಾ ಸಾಮಾನ್ಯ ಮತ್ತು ಬದ್ಧವಾಗಿಲ್ಲ’’ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಪತ್ರದಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ: Kodagu: ಹದಗೆಟ್ಟ ಶಾಸಕ ಕೆ.ಜಿ. ಬೋಪಯ್ಯ ಊರಿನ ರಸ್ತೆ: 20 ವರ್ಷದಿಂದ ಡಾಂಬರೀಕರಣವೇ ಕಂಡಿಲ್ಲ

ರಾಜ್ಯದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜನೆಗಳನ್ನು ಬೆಂಬಲಿಸಲು ನಮ್ಮ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ರಾಯಧನದಿಂದ ವಿನಾಯಿತಿ ನೀಡುವುದು ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸುವ ಮೂಲಕ ಚೆನ್ನೈ ಪೋರ್ಟ್‌ನಿಂದ ಮಧುರ್‌ವಾಯಲ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗಿದೆ. 
 
ಈ ಹಿಂದೆ ಎಂದಿಗೂ ನೀಡದ ಇಂತಹ ರಿಯಾಯಿತಿಗಳನ್ನು ಇತರ ಪ್ರಮುಖ NHAI ಯೋಜನೆಗಳಿಗೆ ವಿಸ್ತರಿಸಲಾಗಿದೆ. ನಿಮ್ಮ ಕಡೆಯಿಂದ ಬಂದ ವಿನಂತಿಗಳ ಆಧಾರದ ಮೇಲೆ, ಮಣ್ಣು / ಜಲ್ಲಿ ಪರವಾನಗಿಗಳ ಸಿಂಧುತ್ವವನ್ನು 3 ತಿಂಗಳಿಂದ 1 ವರ್ಷಕ್ಕೆ 9-5-2022 ರಂದು ವಿಸ್ತರಿಸಲಾಗಿದೆ. ಹೆದ್ದಾರಿ ಯೋಜನೆಗಳಿಗೆ ಭೂಸ್ವಾಧೀನವನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಪ್ರಧಾನ ಕಚೇರಿಯಲ್ಲಿ ವಿಶೇಷ ಸೆಲ್‌ ರಚಿಸಲಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಮತ್ತು ನನಗೆ ತಿಳಿದಿರುವಂತೆ, ಅಂತಹ ಅನುಮತಿಗಳ ಕೊರತೆಯಿಂದಾಗಿ ಯಾವುದೇ ಪ್ರಮುಖ NHAI ಯೋಜನೆಯನ್ನು ತಡೆಹಿಡಿಯಲಾಗಿಲ್ಲ ಎಂದೂ ತಮಿಳುನಾಡು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ: ಶಾಲಾ ಖಾತೆಗೆ ಬಂದ ಹಣವೂ ವಾಪಸ್

ಹೆಚ್ಚುವರಿಯಾಗಿ, ಜಿಲ್ಲಾಧಿಕಾರಿಗಳ ಭೂ ಸ್ವಾಧೀನ ಮತ್ತು ಎರವಲು ಭೂಮಿ ಅನುಮತಿಗಳ ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಸ್ತು ವೆಚ್ಚ, ರಾಯಧನ ಮತ್ತು ಸೀಗ್ನಿಯರೇಜ್ ಶುಲ್ಕಗಳನ್ನು ಮನ್ನಾ ಮಾಡುವ ಮೂಲಕ ಎರವಲು ಭೂಮಿಯನ್ನು ಉಚಿತವಾಗಿ ಒದಗಿಸುವ ಇತರ ವಿನಂತಿಗಳು ಸಹ ಪರಿಗಣನೆಯಲ್ಲಿವೆ. ಆದರೂ, ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಎನ್‌ಎಚ್‌ಎಐಗೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಅನಿಸಿಕೆ ಸೃಷ್ಟಿಯಾಗಿರುವುದು ದುರದೃಷ್ಟಕರ ಎಂದೂ ಸ್ಟಾಲಿನ್ ಹೇಳಿದ್ದಾರೆ. 

Follow Us:
Download App:
  • android
  • ios