1386 ಕಿ.ಮೀ ದೂರದ ದೇಶದ ಅತೀ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ನೋಟ!
2023ರ ಮಾರ್ಚ್ ವೇಳೆಗೆ ಅನಾವರಣವಾಗಲಿರುವ 1386 ಕಿಲೋಮೀಟರ್ ಉದ್ದದ ದೆಹಲಿ ಮುಂಬೈ ಎಕ್ಸ್‌ಪ್ರೆಸ್ ವೇಯ ಚಿತ್ರಗಳನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಅತೀ ಉದ್ದದ ಎಕ್ಸ್‌ಪ್ರೆಸ್ ವೇ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೇಶದ ರಸ್ತೆ ಸಾರಿಗೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಶ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘಿಸಲಾಗಿದೆ. ಈ ನಡುವೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಚಿತ್ರಗಳನ್ನು ನಿತಿನ್ ಗಡ್ಕರಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
1386 ಕಿಲೋಮೀಟರ್ ಎಕ್ಸ್‌ಪ್ರೆಸ್ ವೇ ದೇಶದ ಅತೀದೊಡ್ಡ ಎಕ್ಸ್‌ಪ್ರೆಸ್ ವೇ ಎನಿಸಲಿದೆ. ದೇಶ ರಾಜಧಾನಿ ಹಾಗೂ ದೇಶದ ವಾಣಿಜ್ಯ ರಾಜಧಾನಿಯನ್ನು ಇದು ಸಂಪರ್ಕಿಸಲಿದೆ ಎಂದು ನಿತಿನ್ ಗಡ್ಕರಿ ಬರೆದುಕೊಂಡಿದ್ದಾರೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ "ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ ಎಕ್ಸ್‌ಪ್ರೆಸ್‌ವೇ" ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.ಮ93 ರಾಷ್ಟ್ರೀಯ ಮಾಸ್ಟರ್ ಪ್ಲಾನ್, ಎಂಟು ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳು (ಎಂಎಂಎಲ್‌ಪಿಗಳು), ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳು (ಜೆವಾರ್ ಮತ್ತು ನವಿ ಮುಂಬೈ) ಮತ್ತು ಬಂದರುಗಳಿಗೆ (ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್) ಸಂಪರ್ಕವನ್ನು ಒದಗಿಸುತ್ತದೆ.
8 ಪಥಧ ಎಕ್ಸೆಸ್‌ಕಂಟ್ರೋಲ್ಡ್ ಗ್ರೀನ್ ಫೀಲ್ಟ್ ಎಕ್ಸ್‌ಪ್ರೆಸ್ ವೇ ದೇಶಕ್ಕೆ ಲೋಕಾರ್ಪಣೆಗೊಂಡ ಬಳಿಕ, ದೆಹಲಿ ಹಾಗೂ ಮುಂಬೈ ನಡುವಿನ ರಸ್ತೆ ಪ್ರಯಾಣ 24 ಗಂಟೆಯಿಂದ 12 ಗಂಟೆಗೆ ಇಳಿಯಲಿದೆ ಎಂದು ತಿಳಿಸಿದ್ದಾರೆ.
180 ಕಿಮೀ ದೂರವನ್ನು ಈ ನಗರಗಳ ನಡುವೆ ಕಡಿತ ಮಾಡಲಾಗಿದೆ(1424 ಕಿಮೀ ನಿಂದ 1242 ಕಿಮೀ. ಅದರೊಂದಿಗೆವ12-ಲೇನ್ ಎಕ್ಸ್‌ಪ್ರೆಸ್‌ವೇಗೆ ಭವಿಷ್ಯದ ವಿಸ್ತರಣೆಗೆ ಅವಕಾಶವನ್ನು ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
ಎಂಟು ಪಥದ ಎಕ್ಸ್‌ಪ್ರೆಸ್‌ವೇಯನ್ನು 12 ಪಥದವರೆಗೆ ವಿಸ್ತರಣೆ ಮಾಡುವ ಅವಕಾಶವನ್ನು ಹೊಂದಿದೆ. ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯವನ್ನು ಈ ಎಕ್ಸ್‌ಪ್ರೆಸ್ ವೇ ಹಾದು ಹೋಗಲಿದೆ.
ಎಂಟು ಪಥದ ಎಕ್ಸ್‌ಪ್ರೆಸ್‌ವೇಯನ್ನು 12 ಪಥದವರೆಗೆ ವಿಸ್ತರಣೆ ಮಾಡುವ ಅವಕಾಶವನ್ನು ಹೊಂದಿದೆ. ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯವನ್ನು ಈ ಎಕ್ಸ್‌ಪ್ರೆಸ್ ವೇ ಹಾದು ಹೋಗಲಿದೆ.
ಸೊಹ್ನಾ (ಹರಿಯಾಣ)-ದೌಸಾ (ರಾಜಸ್ಥಾನ) ವಿಸ್ತರಣೆಯು ಹೊಸ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವಾಗಿದೆ. ಒಟ್ಟಾರೆ ಈ ಎಕ್ಸ್‌ಪ್ರೆಸ್‌ವೇಗೆ 1 ಲಕ್ಷ ಕೋಟಿಯ ಪ್ರಾಜೆಕ್ಟ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ