ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ: ಶಾಲಾ ಖಾತೆಗೆ ಬಂದ ಹಣವೂ ವಾಪಸ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣ ವೇಳೆ ಚಾಮರಾಜನಗರ ಜಿಲ್ಲೆಯ 4 ಶಾಲೆಗಳ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಪರಿಹಾರದ ಹಣವನ್ನು ಸಹ ನೀಡಿತ್ತು. ಇದನ್ನು ಶಾಲೆಗಳ ಅಭಿವೃದ್ಧಿ ಮಾಡಲು ಬಳಸಿಕೊಳ್ಳಬೇಕಾಗಿತ್ತು.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ : ಹೆದ್ದಾರಿ ಪ್ರಾಧಿಕಾರ ಶಾಲೆಯ ಜಾಗ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಶಾಲಾ ಅಭಿವೃದ್ಧಿಗೆ ಎಂದು ಪರಿಹಾರದ ಹಣ ನೀಡಿತ್ತು. ಆದ್ರೆ ಈ ಹಣದ ಮೇಲೆ ಕಣ್ಣು ಹಾಕಿದ ಶಿಕ್ಷಣ ಇಲಾಖೆ ಆ ಹಣವನ್ನು ವಾಪಸ್ ತನ್ನ ಖಾತೆಗೆ ತೆಗೆದುಕೊಂಡಿದೆ. ಮೊದಲೇ ಕಟ್ಟಡ ಕಟ್ಟಲೂ ಕೂಡ ಅನುದಾನ ಕೊಡ್ತಿಲ್ಲ. ಇದೀಗಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಂದ ಹಣಕ್ಕೂ ಕೈ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣ ವೇಳೆ ಚಾಮರಾಜನಗರ ಜಿಲ್ಲೆಯ 4 ಶಾಲೆಗಳ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಪರಿಹಾರದ ಹಣವನ್ನು ಸಹ ನೀಡಿತ್ತು. ಇದನ್ನು ಶಾಲೆಗಳ ಅಭಿವೃದ್ಧಿ ಮಾಡಲು ಬಳಸಿಕೊಳ್ಳಬೇಕಾಗಿತ್ತು. ಆದ್ರೆ ಈ ಹಣದ ಮೇಲೆ ಕಣ್ಣಾಕಿದ ಶಿಕ್ಷಣ ಇಲಾಖೆ ಸುಮಾರು 64 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡಿದೆ. ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರದ ಹಣ ಶಾಲೆಗೆ ಬಂದಿರುವುದು ಕೂಡ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಸೇರಿದಂತೆ ಯಾರ ಗಮನಕ್ಕೂ ಬಂದಿಲ್ಲ. ಸುಮಾರು ಎರಡು ವರ್ಷದಿಂದ ಶಾಲೆಯ ಖಾತೆಯಲ್ಲೆ ಇದ್ದ ಹಣ ಈಗ ವಾಪಾಸ್ ಹೋಗುವ ವೇಳೆ ಬೆಳಕಿಗೆ ಬಂದಿದೆ.
Education: ಖಾಸಗಿ ಶಾಲೆಗಳಿಂದ ಪಾಲಕರಿಗೆ ಶುಲ್ಕದ ಬರೆ!
ಇದರಿಂದ ಶಾಲೆಯ ಕಾಂಪೌಂಡ್, ಶೌಚಗೃಹ, ಕೊಠಡಿ ರಿಪೇರಿ ಮಾಡಿಸಬೇಕೆಂದು ತೀರ್ಮಾನ ಮಾಡಿದ್ದ ಶಾಲೆಯ ಅಭಿವೃದ್ಧಿ ಸಮಿತಿ ಈಗ ಹಣ ವಾಪಸ್ ತೆಗೆದುಕೊಂಡಿದ್ದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನಮ್ಮ ಮಕ್ಕಳು ಕೂರುವ ಕೊಠಡಿಗೆ ಛಾವಣಿಯೇ ಇಲ್ಲ ಇಂತ ಸಂದರ್ಭದಲ್ಲಿ ಹಣ ವಾಪಾಸ್ ಹೋಗುವುದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರೆ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ. ಬೇರೆ ಶಾಲೆಯಲ್ಲಿ ಹಣವನ್ನು ಅಭಿವೃದ್ದಿ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. ನಮ್ಮ ಶಾಲೆಯು ಹೆದ್ದಾರಿ ಪಕ್ಕದಲ್ಲೆ ಇದ್ದು ಅಧಿಕ ವಾಹನಗಳು ಸಂಚರಿಸುವುದರಿಂದ ಮಕ್ಕಳ ರಕ್ಷಣೆಗೆ ಶಾಲಾ ಸುತ್ತ ಗೋಡೆಯನ್ನು ಸಹ ಬಂದ ಹಣದಲ್ಲಿ ನಿರ್ಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದ್ದ ಪರಿಹಾರದ ಹಣವನ್ನು ಅಟ್ಟಗೂಳಿಪುರ,ಕಂದಹಳ್ಳಿ, ಯರಿಯೂರು, ಮಂಗಳ ಗ್ರಾಮದ ಶಾಲೆಗಳು ಬಳಸಿಕೊಂಡಿರಲಿಲ್ಲ. ಹೀಗಾಗಿ ಈ ಶಾಲೆಯ ಖಾತೆಯಲ್ಲಿದ್ದ 64 ಲಕ್ಷ ಹಣವನ್ನು ಶಿಕ್ಷಣ ಇಲಾಖೆ ಪಡೆದುಕೊಂಡಿದೆ. ಸದ್ಯ ಡಿಡಿಪಿಐ ಹೇಳುವ ಪ್ರಕಾರ ಶಾಲೆಯ ಅಭಿವೃದ್ದಿ ಸಮಿತಿ ಶಾಲಾ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಲ್ಲಿಕೆ ಮಾಡಿದ್ರೆ ನಾವು ಹಣವನ್ನು ಬಿಡುಗಡೆ ಮಾಡುತ್ತೇವೆ. ಈಗ ವಾಪಸ್ ಪಡೆದುಕೊಂಡಿರುವ ಹಣಕ್ಕಿಂದ ಹೆಚ್ಚು ಹಣ ಬೇಕೆಂದರೂ ಸಹ ನೀಡುತ್ತೇವೆ ಎಂದು ತಿಳಿಸಿದರು..
ಕೊಪ್ಪಳ: ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!
ಸದ್ಯ ಪರಿಹಾರದ ಹಣ ವಾಪಸ್ ಹೋಗಿದ್ದರಿಂದ ಶಾಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿಲ್ಲ. ಇನ್ನು ಕೆಲವೆಡೆ ಶಾಲೆಗಳಿಗೆ ಕಾಂಪೌಂಡ್ ಸಹ ನಿರ್ಮಿಸಿಲ್ಲ.ಹೀಗಾಗಿ ಶಿಕ್ಷಣ ಇಲಾಖೆ ಇತ್ತ ಗಮನಹರಿಸಿ ಹಣ ಬಿಡುಗಡೆ ಮಾಡಲಿ ಎಂಬುದೇ ಗ್ರಾಮಸ್ಥರ ಒತ್ತಾಯ.