ಮಹಾರಾಷ್ಟ್ರದ ನಾಗ್ಪುರದಲ್ಲಿ, ಬಣ್ಣದಾಟವಾಡಿದ ನಾಲ್ಕು ವರ್ಷದ ಬಾಲಕನ ಮೇಲೆ ಸಿಂಧು ಠಾಕ್ರೆ ಎಂಬ ಮಹಿಳೆ ಬಿಸಿನೀರು ಎರಚಿದ್ದಾಳೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಲಕನಿಗೆ ಶೇ.45ರಷ್ಟು ಸುಟ್ಟಗಾಯಗಳಾಗಿವೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಾಗ್ಪುರ: ನಾಲ್ಕು ವರ್ಷದ ಬಾಲಕನೋರ್ವ ಬಣ್ಣ ಹಾಕಿದ್ದಕ್ಕೆ ಕೋಪಗೊಂಡ ಮಹಿಳೆ ಆತನ ಮೇಲೆ ಬಿಸಿನೀರು ಎರಚಿದ ಭಯಾನಕ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದ ಕೊರಾಡಿ ಎಂಬಲ್ಲಿ ನಡೆದಿದೆ. ನಾಲ್ಕು ವರ್ಷದ ಬಾಲಕನಿಗೆ ಶೇ.45ರಷ್ಟು ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಮಾರ್ಚ್ 3ರಂದು ನಾಗ್ಪುರದ ಅರಾಮ್ಶಿನ್ ಪ್ರದೇಶದ ವಾರ್ಡ್ ಸಂಖ್ಯೆ 2 ರಲ್ಲಿ ಈ ಘಟನೆ ನಡೆದಿದೆ. ಮಹಿಳೆ ಬಾಲಕನ ಮೇಲೆ ಬಿಸಿನೀರು ಎರಚುವ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮಹಿಳೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಂಧು ಠಾಕ್ರೆ ಎಂಬಾಕೆ ಬಾಲಕನ ಮೇಲೆ ಬಿಸಿನೀರು ಎರಚಿದ ಪಾಪಿ ಮಹಿಳೆ. ನಾಲ್ಕು ವರ್ಷದ ಬಾಲಕನೋರ್ವ ಸ್ಪ್ರೇ ಬಾಟಲಿಯೊಂದಿಗೆ ಬಣ್ಣದಾಟ ಆಡುತ್ತಿರುತ್ತಾನೆ. ಇತ್ತ ಮಹಿಳೆ ಬಕೆಟ್‌ನಲ್ಲಿ ಬಿಸಿನೀರು ತುಂಬಿಕೊಂಡು ಬರುತ್ತಿರುತ್ತಾಳೆ. ಮಗು ಬಂದು ಬಣ್ಣ ಸ್ಪ್ರೇ ಮಾಡಿದಕ್ಕೆ ಬಕೆಟ್‌ನಲ್ಲಿ ತುಂಬಿಕೊಂಡಿದ್ದ ಬಿಸಿ ನೀರು ಎರಚುತ್ತಾಳೆ.

ಬಾಲಕ ಓಂಗೆ ಶೇ.45ರಷ್ಟು ಸುಟ್ಟು ಗಾಯ

ಬಾಲಕ ಓಂ ಎಂಬವನು ಬಣ್ಣ ಎರಚಿದ ಎಂಬ ಸಣ್ಣ ಕಾರಣಕ್ಕೆ ಸಿಂಧು ಠಾಕ್ರೆ ಆತನ ಮೇಲೆ ಕೊತ ಕೊತ ಕುದಿಯುವ ಬಿಸಿನೀರು ಎರಚಿದ್ದಾಳೆ. ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶೇ.45ರಷ್ಟು ಸುಟ್ಟು ಗಾಯವಾಗಿರೋದರ ಬಗ್ಗೆ ವೈದ್ಯರು ಅಂದಾಜಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru: ಬಾಡಿಗೆ ಮನೆ ಹಣಕ್ಕಾಗಿ ಕಾಲಲ್ಲಿ ತುಳಿದು ಸೋದರಮಾವನ ಕೊಲೆಗೈದ ಯುವಕನ ಬಂಧನ

ವೈರಲ್ ವಿಡಿಯೋದಲ್ಲಿ ಏನಿದೆ?

ಕಪ್ಪು ಸೀರೆಯುಟ್ಟ ಸಿಂಧು ಬಕೆಟ್‌ನಲ್ಲಿ ಕುದಿಯುತ್ತಿರುವ ನೀರು ತೆಗೆದುಕೊಂಡು ಬರುತ್ತಿರುತ್ತಾಳೆ. ಅಷ್ಟರಲ್ಲಿ ಮನೆಯಿಂದ ಓಡಿ ಬರುವ ಓಂ, ಎದುರಿನಲ್ಲಿದ್ದ ಸಿಂಧು ಮೇಲೆ ಸ್ಪ್ರೇ ಬಾಟಲಿಯಿಂದ ಬಣ್ಣ ಹಾಕುತ್ತಾನೆ. ಇದರಿಂದ ಕೋಪಗೊಂಡ ಸಿಂಧು, ಒಂದು ಕ್ಷಣವೂ ಯೋಚನೆ ಮಾಡದೇ ಓಂ ಮೇಲೆ ಬಿಸಿನೀರು ಎರಚುತ್ತಾಳೆ. ಬಿಸಿನೀರು ಬೀಳುತ್ತಿದ್ದಂತೆ ಬಾಲಕ ಜೋರಾಗಿ ಕೂಗಿ ನೋವಿನಿಂದ ಅತ್ತಿಂದಿತ್ತ ಓಡಾಡುತ್ತಾನೆ. ಇದೇ ವೇಳೆ ಪಕ್ಕದಲ್ಲಿದ್ದ ಯುವತಿ ತನ್ನ ಕೈಯಲ್ಲಿದ್ದ ತಣ್ಣೀರನ್ನು ಬಾಲಕನ ಮೇಲೆ ಹಾಕಲು ಪ್ರಯತ್ನಿಸುತ್ತಾಳೆ. ಬಾಲಕನ ನೋವಿನಿಂದ ಕೂಗಾಡುತ್ತಿದ್ದಂತೆ ಸಿಂಧು, ಯುವತಿ ಕೈಯಲ್ಲಿದ್ದ ಬಕೆಟ್ ತೆಗೆದುಕೊಂಡು ಓಂ ಮೇಲೆ ತಣ್ಣೀರು ಸುರಿಯುತ್ತಾಳೆ.

ಇದನ್ನೂ ಓದಿ: ಬಸವಕಲ್ಯಾಣ ಉದ್ವಿಗ್ನ: ಮೌಲ್ವಿಗಳಿಗೆ ಹಲ್ಲೆ ಆರೋಪ, ಠಾಣೆಗೆ ಮುತ್ತಿಗೆಹಾಕಿ ಪೊಲೀಸರನ್ನೇ ಹೊಡೆದ ಅನ್ಯಕೋಮಿನ ಗುಂಪು!

Scroll to load tweet…