Asianet Suvarna News Asianet Suvarna News

ವಾಕಿಂಗ್ ಹೊರಟ ನಿವೃತ್ತ ಅಧಿಕಾರಿ ಗೂಳಿ ತಿವಿತಕ್ಕೆ ಬಲಿ: ಸೆರೆ ಹಿಡಿಯುವ ವೇಳೆ ಹಗ್ಗ ಬಿಗಿದು ಗೂಳಿಯೂ ಸಾವು

ಮುಂಜಾನೆ ವಾಕಿಂಗ್ ಹೋಗ್ತಿದ್ದ  ನಿವೃತ್ತ ಉದ್ಯೋಗಿಯೊಬ್ಬರನ್ನು ಮದವೇರಿದ ಗೂಳಿಯೊಂದು ತಿವಿದು ಕೆಳಗೆ ಬೀಳಿಸಿ ಸಾಯಿಸಿ ಹಾಕಿದೆ. ವಿಷಯ ತಿಳಿದು ಗೂಳಿ ಸೆರೆ ಹಿಡಿಯಲು ಬಂದ ನಗರಸಭೆ ಸಿಬ್ಬಂದಿ ಗೂಳಿಯ ಕತ್ತಿಗೆ ಹಾಕಿದ್ದ ಹಗ್ಗ ಬಿಗಿದು ಗೂಳಿಯೂ ಪ್ರಾಣ ಬಿಟ್ಟ ಘಟನೆ ನಡೆದಿದೆ.

Retired officer who was out for a walk was killed by a bull The bull also died when the rope was tied while capturing In Bareilly akb
Author
First Published Jan 25, 2024, 6:47 PM IST

ಬರೇಲಿ: ಮುಂಜಾನೆ ವಾಕಿಂಗ್ ಹೋಗ್ತಿದ್ದ  ನಿವೃತ್ತ ಉದ್ಯೋಗಿಯೊಬ್ಬರನ್ನು ಮದವೇರಿದ ಗೂಳಿಯೊಂದು ತಿವಿದು ಕೆಳಗೆ ಬೀಳಿಸಿ ಸಾಯಿಸಿ ಹಾಕಿದೆ. ವಿಷಯ ತಿಳಿದು ಗೂಳಿ ಸೆರೆ ಹಿಡಿಯಲು ಬಂದ ನಗರಸಭೆ ಸಿಬ್ಬಂದಿ ಗೂಳಿಯ ಕತ್ತಿಗೆ ಹಾಕಿದ್ದ ಹಗ್ಗ ಬಿಗಿದು ಗೂಳಿಯೂ ಪ್ರಾಣ ಬಿಟ್ಟ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಗೂಳಿ ಹಿರಿಯ ನಾಗರಿಕನನ್ನು ಕೆಳಗೆ ಬೀಳಿಸಿ ಕೊಂಬಿನಿಂದ ತಿವಿಯೂತ್ತಿರುವ ವಿಡಿಯೋ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. 

ಉತ್ತರ ಪ್ರದೇಶದಲ್ಲಿ ಬೀಡಾಡಿ ದನಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ಈಗಾಗಲೇ ಸಾಕಷ್ಟು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವರು ಬೀದಿಯಲ್ಲಿರುವ ಈ ಪ್ರಾಣಿಗಳ ಮಾರಣಾಂತಿಕ ದಾಳಿಗೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಇನ್ನು ಸಾಧ್ಯವಾಗಿಲ್ಲ, ಇಂತಹ ಸಂದರ್ಭದಲ್ಲೇ ಬರೇಲಿಯಲ್ಲಿ ಹಿರಿಯ ನಾಗರಿಕರೊಬ್ಬರು ಗೂಳಿಯ ಕೋಪಕ್ಕೆ ಆಹುತಿಯಾಗಿದ್ದಾರೆ. ಮುಂಜಾನೆ ವಾಯು ವಿಹಾರಕ್ಕೆ ಮನೆ ಬಿಟ್ಟು ಹೊರ ನಡೆದ ಸಂದರ್ಭದಲ್ಲೇ ಈ ಅನಾಹುತ ನಡೆದಿದೆ. ಮುಂಜಾನೆ 8 ಗಂಟೆ ವೇಳೆಗೆ ಮನೆಯಿಂದ ಈ ವ್ಯಕ್ತಿ ಕೇವಲ ಕೆಲವೇ ಹೆಜ್ಜೆ ಇಟ್ಟಿದ್ದಾರೆ ಅಷ್ಟೇ ಅಷ್ಟರಲ್ಲಿ ರಸ್ತೆಯಲ್ಲಿ ಬಂದ ಗೂಳಿ ಇವರನ್ನು ಕೊಂಬಿನಿಂದ ಎತ್ತಿ ಹಾಕಿ ಬಳಿಕ ತಿವಿದಿದೆ. ಹೋರಿಯ  ಈ ಆಕ್ರೋಶಕ್ಕೆ ಸ್ಥಳದಲ್ಲೇ ವೃದ್ಧ ಪ್ರಾಣ ಬಿಟ್ಟಿದ್ದಾರೆ. 

ತಮಿಳುನಾಡಿನಲ್ಲಿ ಇನ್ನು ಐಪಿಎಲ್ ಮಾದರಿ ಜಲ್ಲಿಕಟ್ಟು ಪಂದ್ಯಾವಳಿ!

ಬರೇಲಿಯ ಸಂಜಯನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.  ವೀಡಿಯೊಯೋದಲ್ಲಿ ಕಾಣಿಸುವಂತೆ ವೃದ್ಧರೂ ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದಂತೆ ಅವರ ಎದುರಿಗೆ ಬಂದ ಗೂಳಿ ಅವರನ್ನು ಕೊಂಬಿನಿಂದ ಎತ್ತಿ ಕೆಳಗೆ ಎಸೆದಿದೆ. ಗೂಳಿಯ ಮೊದಲ ಏಟಿಗೆ ವೃದ್ಧ ನಿಶ್ಚಲರಾಗಿ ನೆಲದ ಮೇಲೆ ಬಿದ್ದಿದ್ದಾರೆ. ಆದರೂ ಗೂಳಿ ಮುಸಿ ಮುಸಿ ನೋಡಿ ಮತ್ತೆ ತನ್ನ ಕೊಂಬಿನಿಂದ ಪ್ರಹಾರ ಮಾಡಿದೆ. ಪರಿಣಾಮ ವೃದ್ಧನ ಜೀವ ಅಲ್ಲೇ ಹೊರಟು ಹೋಗಿದೆ.

ಹೀಗೆ ಗೂಳಿಯ ದಾಳಿಯಿಂದ ಪ್ರಾಣ ಬಿಟ್ಟ ವ್ಯಕ್ತಿಯನ್ನು 75 ವರ್ಷದ ಕೃಷ್ಣಾನಂದ ಪಾಂಡೆ ಎಂದು ಗುರುತಿಸಲಾಗಿದೆ. ಇವರು ಸೆಂಟ್ರಲ್ ಸ್ಟೇಟ್ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು, ಶುಗರಲ್ ಮಿಲ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಬರೀ ಇವರಲ್ಲದೇ ಇದೇ ದಾರಿಯಲ್ಲಿ ಬಂದ ಅನೇಕರ ಮೇಲೆ ಈ ಗೂಳಿ ದಾಳಿ ಮಾಡಿದೆ. ಎಲ್ಲರೂ ಅದೃಷ್ಟವಶಾತ್ ಜೀವ ಉಳಿಸಿಕೊಂಡಿದ್ದಾರೆ. ಗೂಳಿಯ ಅವಾಂತರ ಕಂಡು ಆ ಪ್ರದೇಶದ ಜನ ಸ್ಥಳೀಯಾಡಳಿತಕ್ಕೆ ಕರೆ ಮಾಡಿದ್ದು, ಗೂಳಿಯನ್ನು ಹಿಡಿಯಲು ಮನವಿ ಮಾಡಿದ್ದಾರೆ. ಆದರೆ  ಹೀಗೆ ಗೂಳಿ ಹಿಡಿಯುವುದಕ್ಕೆ ಬಂದವರು ಹಾಕಿದ್ದ ಹಗ್ಗ ಗೂಳಿಯ ಕತ್ತನ್ನು ಬಿಗಿದ ಪರಿಣಾಮ ಗೂಳಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಬೆಳಗಾವಿ: ತರಕಾರಿ ಖರೀದಿಯಲ್ಲಿ ತೊಡಗಿದ್ದ ಮಹಿಳೆ, ವ್ಯಕ್ತಿಗೆ ಸದ್ದಿಲ್ಲದೇ ಗುದ್ದಿದ ಗೂಳಿ

 

 

Follow Us:
Download App:
  • android
  • ios