Asianet Suvarna News Asianet Suvarna News

ತಮಿಳುನಾಡಿನಲ್ಲಿ ಇನ್ನು ಐಪಿಎಲ್ ಮಾದರಿ ಜಲ್ಲಿಕಟ್ಟು ಪಂದ್ಯಾವಳಿ!

ಗೂಳಿಗಳನ್ನು ಓಡಿಸುವ ಸಾಂಪ್ರಾದಾಯಿಕ ಆಟವಾದ ಜಲ್ಲಿಕಟ್ಟು ಕ್ರೀಡೆಗೆ ಕಳೆದ ವರ್ಷ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಆಟಕ್ಕೆ ಕಾರ್ಪೊರೆಟ್ ಟಚ್ ನೀಡಿ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ಆಡಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.

Jallikattu tournament like IPL in Tamil Nadu A separate stadium was started for the bull run akb
Author
First Published Jan 25, 2024, 9:52 AM IST

ಚೆನ್ನೈ: ಗೂಳಿಗಳನ್ನು ಓಡಿಸುವ ಸಾಂಪ್ರಾದಾಯಿಕ ಆಟವಾದ ಜಲ್ಲಿಕಟ್ಟು ಕ್ರೀಡೆಗೆ ಕಳೆದ ವರ್ಷ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಆಟಕ್ಕೆ ಕಾರ್ಪೊರೆಟ್ ಟಚ್ ನೀಡಿ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ಆಡಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.

ಇದಕ್ಕೆ ನೆರವಾಗಬಹುದಾದಂಥ ರಾಜ್ಯದ ಮೊದಲ ಅತ್ಯಾಧುನಿಕ ಕ್ರೀಡಾಂಗಣವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬುಧವಾರ ಉದ್ಘಾಟಿಸಿದ್ದಾರೆ. ಮಧುರೈನ ಅಲಂಗಾನಲ್ಲೂರ್‌ನಲ್ಲಿ 66.8 ಎಕರೆ ವಿಸ್ತೀರ್ಣದಲ್ಲಿ ನೂತನ ಜಲ್ಲಿಕಟ್ಟು ಕ್ರೀಡಾಂಗಣ ನಿರ್ಮಿಸಲಾಗಿದೆ. ಇದರಲ್ಲಿ 5 ಸಾವಿರ ಮಂದಿ ಕೂರುವ ವ್ಯವಸ್ಥೆ ಇದ್ದು, ಜಲ್ಲಿಕಟ್ಟು ಕ್ರೀಡೆಯ ಮಹತ್ವವನ್ನು ತಿಳಿಸುವ ವಸ್ತುಸಂಗ್ರಹಾಲಯವನ್ನು ಸಹ ಹೊಂದಿದೆ. ಇದಲ್ಲದೆ ಗೂಳಿಗಳು ಗಾಯಗೊಂಡರೆ ಅವುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಸೇರಿದಂತೆ ಹಲವಾರು ಆಧುನಿಕ ಸೌಲಭ್ಯಗಳನ್ನು ಕ್ರೀಡಾಂಗಣ ಹೊಂದಿದೆ.

ತಮಿಳುನಾಡಲ್ಲಿ ಸಂಕ್ರಾಂತಿ ಸಂಭ್ರಮ, ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ದಾಳಿಗೆ 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಐಪಿಎಲ್ ಸ್ಪರ್ಶ: ಜಲ್ಲಿಕಟ್ಟು ಈಗಾಗಲೇ ತಮಿಳುನಾಡಿನಲ್ಲಿ ಬಹು ಜನಪ್ರಿಯ ಕ್ರೀಡೆಯಾದರೂ ಅದಕ್ಕೆ ಆಧುನಿಕತೆ ಸ್ಪರ್ಶ ನೀಡಲು ತಮಿಳುನಾಡು ಸರ್ಕಾರ ಮತ್ತು ಕೆಲ ಜಲ್ಲಿಕಟ್ಟು ಆಯೋಜಿಸುವ ಸಂಘಟನೆಗಳು ಮುಂದಾಗಿವೆ. ಈ ಮೂಲಕ ಉದ್ಯಮಗಳನ್ನೂ ಈ ಕ್ರೀಡೆಯತ್ತ ಸೆಳೆಯುವ, ಕ್ರೀಡೆಯನ್ನು ಪ್ರವಾಸೋದ್ಯಮದ ಭಾಗ ಮಾಡುವ, ಗೆದ್ದವರಿಗೆ ಚಿನ್ನ, ಬೈಕ್, ಕಾರಿನ ಜೊತೆಗೆ ಇನ್ನೂ ಹೆಚ್ಚಿನ ಮೊತ್ತ ಬಹುಮಾನ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ.

ಜಲ್ಲಿಕಟ್ಟು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಎಂದ ಸುಪ್ರೀಂಕೋರ್ಟ್‌: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಗೆ ಕಾನೂನು ಮಾನ್ಯತೆ

Follow Us:
Download App:
  • android
  • ios