Asianet Suvarna News Asianet Suvarna News

ಮಾತುಕತೆಗೆ ಸಿದ್ಧ, ಉಗ್ರವಾದ ನಿಲ್ಲಿಸಿ: ಕೆನಡಾಗೆ ಜೈಶಂಕರ್ ತಿರುಗೇಟು

ಭಾರತದ ಜೊತೆ ನಿಕಟ ಸಂಬಂಧ ಹೊಂದಲು ನಾವು ಬದ್ಧ, ಆದರೆ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆ ತನಿಖೆಗೆ ಭಾರತ ಸಹಕಾರ ನೀಡಬೇಕು’ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಮಾತಿಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೂಕ್ತ ತಿರುಗೇಟು ನೀಡಿದ್ದಾರೆ.

Ready to Talk, Stop terrorism external Affair Minister S. Jaishankar hits back to Canada akb
Author
First Published Oct 1, 2023, 8:40 AM IST

ವಾಷಿಂಗ್ಟನ್‌: ಭಾರತದ ಜೊತೆ ನಿಕಟ ಸಂಬಂಧ ಹೊಂದಲು ನಾವು ಬದ್ಧ, ಆದರೆ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆ ತನಿಖೆಗೆ ಭಾರತ ಸಹಕಾರ ನೀಡಬೇಕು’ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಮಾತಿಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೂಕ್ತ ತಿರುಗೇಟು ನೀಡಿದ್ದಾರೆ.

ಖಲಿಸ್ತಾನಿ ಪ್ರತ್ಯೇಕತಾವಾದಿ (Khalistani Militant) ಹತ್ಯೆ ವಿಷಯದಲ್ಲಿ ಸೃಷ್ಟಿಯಾಗಿರುವ ವಿವಾದ ಇತ್ಯರ್ಥ್ಯಕ್ಕೆ ಎರಡೂ ದೇಶಗಳು ಪರಸ್ಪರ ಮಾತುಕತೆ ನಡೆಸಬೇಕು, ಆದರೆ ಇದಕ್ಕೂ ಮುನ್ನ ಭಯೋತ್ಪಾದನೆಗೆ, ತೀವ್ರವಾದಿಗಳಿಗೆ ಮತ್ತು ಹಿಂಸಾಚಾರಕ್ಕೆ ಅನುಮತಿ ನೀಡುವುದನ್ನು ಕೆನಡಾ ಸರ್ಕಾರ (Canada Govt) ನಿಲ್ಲಿಸಬೇಕು ಮತ್ತು ಈ ವಿಷಯದಲ್ಲಿ ಭಾರತದ ಕಳವಳ ಇತ್ಯರ್ಥಪಡಿಸಬೇಕು ಎಂದಿದ್ದಾರೆ.

ಡ್ರಗ್ಸ್‌ ವಹಿವಾಟು ಸಂಬಂಧ ರಾಹತ್‌, ನಿಜ್ಜರ್‌ ವೈಷಮ್ಯ: ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಪಾಕ್‌ ಐಎಸ್‌ಐ ಕೈವಾಡ?

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್‌ (S Jaishankar), ‘ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಸಂಭವನೀಯ ಕೈವಾಡದ ಕುರಿತ ಕೆನಡಾ ಆರೋಪದ ಕುರಿತು ಪರಿಶೀಲಿಸಲು ನಾವು ಸಿದ್ಧ. ಆದರೆ ಆರೋಪ ಮಾಡಿದ ವಿಷಯಗಳು ನಮ್ಮ ನೀತಿಯಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಇದರ ಹೊರತಾಗಿಯೂ ಅವರು ಆರೋಪಕ್ಕೆ ಪೂರಕವಾದ ನಿರ್ದಿಷ್ಟ ಸಾಕ್ಷ್ಯಗಳನ್ನು ನೀಡಿದರೆ ಅದನ್ನು ಪರಿಶೀಲಿಸಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಆದರೆ ಇದೊಂದು ವಿಶೇಷ ಪ್ರಕರಣ ಎಂಬಂತೆ ಬಿಂಬಿಸುವುದು ಇಡೀ ಬೆಳವಣಿಗೆ ಕುರಿತು ಸೂಕ್ತ ಚಿತ್ರಣ ನೀಡಿದಂತಾಗದು’ ಎಂದು ಹೇಳಿದರು.

ಕೋಕೇನ್ ಅಮಲಿನಲ್ಲೇ ಇದ್ರಾ ಜಿ20ಗೆ ಬಂದಿದ್ದ ಕೆನಡಾ ಪ್ರಧಾನಿ: ಮಾಜಿ ರಾಯಭಾರ ಸಿಬ್ಬಂದಿ ಹೇಳೋದೇನು?

‘ಕೆನಡಾದಲ್ಲಿ ಇಂದು ಏನಾಗುತ್ತಿದೆಯೋ ಅದನ್ನೆಲ್ಲಾ ಸಾಮಾನ್ಯವೆಂದು ಪರಿಗಣಿಸಲಾಗದು. ಇಂದು ಕೆನಡಾದಲ್ಲಿ (Canada) ಏನಾಗುತ್ತಿದೆಯೋ ಅದು ವಿಶ್ವದ ಬೇರೆ ಭಾಗಗಳಲ್ಲಿ ಸಂಭವಿಸಿದ್ದರೆ, ಇಡೀ ವಿಶ್ವ ಅದನ್ನು ಇದೇ ರೀತಿ ಪರಿಗಣಿಸುತ್ತಿತ್ತೇ?’ ಎಂದು ಜೈಶಂಕರ್‌ ಪ್ರಶ್ನಿಸಿದರು.

ಜೊತೆಗೆ, ‘ಕೆಲ ವರ್ಷಗಳಿಂದ ನಾವು ಕೆನಡಾ ಮತ್ತು ಅಲ್ಲಿನ ಸರ್ಕಾರದ ಜೊತೆಗೆ ನಾವು ಕೆಲವೊಂದು ಸಮಸ್ಯೆ ಹೊಂದಿದ್ದೇವೆ. ಇಲ್ಲಿ ನಿಜವಾದ ಸಮಸ್ಯೆ ಎಂದರೆ ಭಯೋತ್ಪಾದನೆ, ತೀವ್ರವಾದ ಮತ್ತು ಹಿಂಸೆಯ ಘಟನೆಗಳಿಗೆ ನೀಡುತ್ತಿರುವ ಅನುಮತಿ. ಇಂಥ ಅನುಮತಿ, ನಾವು ಕೆಲ ವ್ಯಕ್ತಿಗಳ ಗಡಿಪಾರಿಗೆ ಸಲ್ಲಿಸಿದ ಅರ್ಜಿಗಳಲ್ಲೂ ಪ್ರತಿಫಲಿಸಿದೆ. ಇದನ್ನೆಲ್ಲಾ ಕೆನಡಾ ಸರ್ಕಾರ ತಡೆಯಬೇಕು’ ಎಂದು ಜೈಶಂಕರ್‌ ಕೆನಡಾ ಪ್ರಧಾನಿಗೆ ತಿರುಗೇಟು ನೀಡಿದರು.

ಭಾರತ ಸರ್ಕಾರ ವಿರುದ್ಧ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ: ಭಾರತದ ಧ್ವಜ, ಮೋದಿ ಫೋಟೋಕ್ಕೆ ಬೆಂಕಿ

 

Follow Us:
Download App:
  • android
  • ios