ಡ್ರಗ್ಸ್ ವಹಿವಾಟು ಸಂಬಂಧ ರಾಹತ್, ನಿಜ್ಜರ್ ವೈಷಮ್ಯ: ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಪಾಕ್ ಐಎಸ್‌ಐ ಕೈವಾಡ?
ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಪಾಕಿಸ್ತಾನಿ ಕೈವಾಡ ಇದೆ ಎಂಬ ಗುಮಾನಿಗಳ ನಡುವೆಯೇ ಕೆನಡಾ ಪೊಲೀಸರು, ಸರ್ರೆ ನಗರದಲ್ಲಿರುವ ಶಂಕಿತ ಐಎಸ್‌ಐ ಏಜೆಂಟ್ ರಾಹತ್ ರಾವ್ (ISI agent Rahat Rao)ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಒಟ್ಟಾವಾ: ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಪಾಕಿಸ್ತಾನಿ ಕೈವಾಡ ಇದೆ ಎಂಬ ಗುಮಾನಿಗಳ ನಡುವೆಯೇ ಕೆನಡಾ ಪೊಲೀಸರು, ಸರ್ರೆ ನಗರದಲ್ಲಿರುವ ಶಂಕಿತ ಐಎಸ್‌ಐ ಏಜೆಂಟ್ ರಾಹತ್ ರಾವ್ (ISI agent Rahat Rao)ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದ ಭಾರತ-ಕೆನಡಾ (India-Canada relations) ಸಂಬಂಧ ಹಾಳು ಮಾಡಲು ನಿಜ್ಜರ್ ಹತ್ಯೆಯನ್ನು ಪಾಕಿಸ್ತಾನವೇ ನಡೆಸಿದೆ ಎಂಬ ಗುಮಾನಿಗೆ ಪುಷ್ಟಿ ಸಿಕ್ಕಂತಾಗಿದೆ.
ಗುರುವಾರ ಸುಮಾರು 2 ತಾಸು ರಾಹತ್‌ನನ್ನು ಪೊಲೀಸರು ವಿಚಾರಣೆ ನಡೆಸಿದರು. ಇದೇ ವೇಳೆ ತಮ್ಮೆದುರು ಎಲ್ಲ ಸೋಷಿಯಲ್ ಮೀಡಿಯಾ ಪೇಜ್‌ಗಳನ್ನು ಅಳಿಸಿ ಹಾಕುವಂತೆ ಆತನಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ. ವಿಚಾರಣೆ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಬಹುಶಃ ನಿಜ್ಜರ್ (Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆಯೇ ಈ ವೇಳೆ ಆತನ ವಿಚಾರಣೆ ನಡೆದಿದೆ ಎಂದು ಅವು ಹೇಳಿವೆ.
ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ
ಡ್ರಗ್ಸ್ ವ್ಯವಹಾರ ಕಾರಣ?:
ರಾಹತ್ ರಾವ್ ಹಾಗೂ ಇನ್ನೊಬ್ಬ ಐಎಸ್‌ಐ ಏಜೆಂಟ್ ತಾರೀಖ್ ಕಿಯಾನಿ (ISI agent Tariq Kiani) ಕೆನಡಾದಲ್ಲಿ ಡ್ರಗ್ಸ್ ವ್ಯವಹಾರ ನಡೆಸುತ್ತಾರೆ. ಅಲ್ಲದೆ, ಭಾರತ-ಪಾಕ್‌ನಿಂದ ಬಂದ ವಲಸಿಗರನ್ನು ಉಗ್ರ ಸಂಘಟನೆಗೆ (terrorist organization) ಸೇರಿಸಲು ಶ್ರಮಿಸುತ್ತಾರೆ. ಡ್ರಗ್ಸ್ ವಹಿವಾಟಿನಲ್ಲಿ ತಮಗೆ ಪ್ರತಿಸ್ಫರ್ಧಿ ಆಗಿದ್ದ ನಿಜ್ಜರ್‌ನನ್ನು ಮುಗಿಸಬೇಕು ಎಂದು ಸಂಚು ರೂಪಿಸಿದ್ದ ಇಬ್ಬರೂ, ಈ ಕೊಲೆ ಮಾಡಿಸಿರಬಹುದು. ಇವರಿಗೆ ಇನ್ನೊಬ್ಬ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ (Gurupatwant Singh Pannun)ಸಾಥ್ ನೀಡಿದ್ದ. ಈ ಎಲ್ಲಾ ಬೆಳವಣಿಗೆ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಕೈವಾಡವಿದೆ ಎಂದು ಮೂಲಗಳು ಹೇಳಿವೆ.
ದೇಶಕ್ಕೆ ಆಹಾರ ಭದ್ರತೆ ನೀಡಿದ್ದ ಸ್ವಾಮಿನಾಥನ್ ಸಾಧನೆ ಒಂದೇ ಎರಡೇ...
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಅವರು ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ ಭಾರತ ಸರ್ಕಾರ ಅದನ್ನು ನಿರಾಕರಿಸಿತ್ತು. ಬಳಿಕ ಈ ಹತ್ಯೆ ಹಿಂದೆ ಪಾಕಿಸ್ತಾನದ ಐಎಸ್‌ಐ ಗುಪ್ತಚರ ಸಂಸ್ಥೆ ಕೈವಾಡ ಇದೆ. ಬಾರತ-ಕೆನಡಾ ಸಂಬಂಧ ಹಾಳು ಮಾಡಲು ಅದು ಈ ತಂತ್ರ ರೂಪಿಸಿತ್ತು ಎಂದು ಮಾಧ್ಯಮವೊಂದು ಬುಧವಾರ ವರದಿ ಮಾಡಿತ್ತು.