ಕೋಕೇನ್ ಅಮಲಿನಲ್ಲೇ ಇದ್ರಾ ಜಿ20ಗೆ ಬಂದಿದ್ದ ಕೆನಡಾ ಪ್ರಧಾನಿ: ಮಾಜಿ ರಾಯಭಾರ ಸಿಬ್ಬಂದಿ ಹೇಳೋದೇನು?
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿಮಾನದಲ್ಲಿ ಕೊಕೇನ್ ಪತ್ತೆಯಾಗಿತ್ತು. ಭಾರತದಲ್ಲಿದ್ದಷ್ಟೂ ದಿನ ಅವರು ಮಾದಕ ವಸ್ತು ಸೇವನೆ ಮಾಡಿಕೊಂಡೇ ಇದ್ದರು. ಹೀಗಾಗಿ ಅವರು ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ ಎಂದು ಭಾರತದ ಮಾಜಿ ರಾಯಭಾರ ಕಚೇರಿ (Former Indian diplomat) ಸಿಬ್ಬಂದಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ: ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿಮಾನದಲ್ಲಿ ಕೊಕೇನ್ ಪತ್ತೆಯಾಗಿತ್ತು. ಭಾರತದಲ್ಲಿದ್ದಷ್ಟೂ ದಿನ ಅವರು ಮಾದಕ ವಸ್ತು ಸೇವನೆ ಮಾಡಿಕೊಂಡೇ ಇದ್ದರು. ಹೀಗಾಗಿ ಅವರು ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ ಎಂದು ಭಾರತದ ಮಾಜಿ ರಾಯಭಾರ ಕಚೇರಿ (Former Indian diplomat) ಸಿಬ್ಬಂದಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಸೂಡಾನ್‌ನಲ್ಲಿನ ಭಾರತದ ಮಾಜಿ ರಾಯಭಾರಿ (former ambassador of India) ದೀಪಕ್ ವೋಹ್ರಾ (Deepak Vohra), ‘ಟ್ರುಡೋ ಇನ್ನೂ ಎಳಸು ವ್ಯಕ್ತಿ. ಆತನ ತಲೆಯಲ್ಲಿ ಏನು ಆಲೋಚನೆ ಇದೆ ಎಂಬುದು ಯಾರಿಗೂ ಅರ್ಥವಾಗದು. ಅವರು ಭಾರತಕ್ಕೆ ಬಂದಾಗ ಅವರ ವಿಮಾನದಲ್ಲಿ ಕೊಕೇನ್ ಇತ್ತು. ಇದನ್ನು ಭದ್ರತಾ ಪಡೆಗಳ ಶ್ವಾನಗಳು ಪತ್ತೆ ಮಾಡಿದ್ದವು ಎಂದರು.
ಮಹಿಳಾ ಮೀಸಲು ಬಿಲ್ ರಕ್ಷಾ ಬಂಧನಕ್ಕೆ ನನ್ನ ಗಿಫ್ಟ್: ಪ್ರಧಾನಿ ಮೋದಿ
ವಿಶ್ವಸಂಸ್ಥೆಯಲ್ಲಿ ಕೆನಡಾಗೆ ಭಾರತ ಪ್ರಹಾರ: ರಾಜಕೀಯ ಅನುಕೂಲಕ್ಕೆ ಉಗ್ರರಿಗೆ ಬೆಂಬಲ ಸಲ್ಲ
ವಿಶ್ವಸಂಸ್ಥೆ: ರಾಜಕೀಯ ಅನುಕೂಲಕ್ಕಾಗಿ ಭಯೋತ್ಪಾದನೆಯನ್ನು ಬೆಂಬಲಿಸುವುದು ಸರಿಯಲ್ಲ. ಅಲ್ಲದೆಒಂದು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಬೇಡ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಹೇಳಿದ್ದಾರೆ. ಈ ಮೂಲಕ ಭಾರತದಿಂದ ಹೊರಬಂದು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಟ್ಟಿರುವ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವ ಕೆನಡಾ ವಿರುದ್ಧ ಪರೋಕ್ಷವಾಗಿ ಪ್ರಹಾರ ನಡೆಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆ, ವಿಧ್ವಂಸಕತೆ ಮತ್ತು ಹಿಂಸೆಗೆ ಅನುಮೋದನೆ ನೀಡುವುದು ಸರಿಯಲ್ಲ. ಅದೇ ರೀತಿ ಒಂದು ದೇಶದ ಆಂತರಿಕ ವ್ಯವಹಾರದಲ್ಲಿ ಮತ್ತೊಂದು ದೇಶ ಮೂಗು ತೂರಿಸಬಾದರು. ಪ್ರಾಮಾಣಿಕವಾದ ಏಕತೆ ಇಲ್ಲದ ಕಡೆ ನಿಜವಾದ ನಂಬಿಕೆ ಇರುವುದಿಲ್ಲ’ ಎಂದು ಹೇಳಿದರು.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿದೆ. ಈ ಹಿನ್ನೆಲೆಯಲ್ಲಿ ಜೈಶಂಕರ್ ಮಾತಿಗೆ ಮಹತ್ವ ಬಂದಿದೆ.
ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ ನೀಡಿ:
ಈ ನಡುವೆ, ಭಾರತವು ಇತ್ತೀಚೆಗೆ ಆಫ್ರಿಕಾ ದೇಶಗಳು ಜಿ-20 ಸಮೂಹದಲ್ಲಿ ಸೇರಲು ಶ್ರಮಿಸಿತು. ಅದಕ್ಕೆ ತಕ್ಕಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲೂ ಬದಲಾವಣೆ ಆಗಬೇಕು ಹಾಗೂ ಭಾರತಕ್ಕೆ ಆ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗಬೇಕು ಎಂದು ಜೈಶಂಕರ್ ಆಗ್ರಹಿಸಿದರು.
ಭಾರತದಿಂದ ನಮಸ್ತೆ!:
ಭಾಷಣದ ಆರಂಭದಲ್ಲಿ ಜೈಶಂಕರ್ ಅವರು ‘ಇಂಡಿಯಾ’ ಎನ್ನುವ ಬದಲು ‘ನಮಸ್ತೆ ಫ್ರಂ ಭಾರತ್’ ಎಂದಿದ್ದು ವಿಶೇಷವಾಗಿತ್ತು.
ಭಾರತಕ್ಕೆ ಬಂದ ಮೇಲೂ ಎರಡು ದಿನ ಟ್ರುಡೋ ಕೊಠಡಿಯಿಂದ ಹೊರಗೆ ಬರಲಿಲ್ಲ. ರಾಷ್ಟ್ರಪತಿಗಳು (President) ಆಯೋಜಿಸಿದ್ದ ಔತಣ ಕೂಟ ಸೇರಿದಂತೆ ಹಲವು ಅಧಿಕೃತ ಕಾರ್ಯಕ್ರಮಗಳಿಗೆ ಗೈರಾಗಿದ್ದರು ಎಂದು ವೋಹ್ರಾ ಆರೋಪಿಸಿದರು. ವಿಶೇಷವೆಂದರೆ, ಪ್ರಧಾನಿಯಾದ ಬಳಿಕ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಯನ್ನು ಕ್ರಿಮಿನಲ್ ಮುಕ್ತಗೊಳಿಸಿ ಟ್ರುಡೋ ನಿರ್ಧಾರ ಕೈಗೊಂಡಿದ್ದರು.