ಮುಂಬೈ(ಆ.17): ಮುಂಬೈನ 77ನೇ ಮೇಯರ್ ಹಾಗೂ ಲೋವರ್ ಪರೇಲ್‌ನಲ್ಲಿ ಸತತ ಮೂರು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದ ಕಿಶೋರಿ ಪೆಡ್ನೇಕರ್ ಕೊರೋನಾ ವಿರುದ್ಧದ ಬಿಎಂಸಿ ನಡೆಸುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮೊದಲು ಅವರು JNPT ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಕೊರೋನಾತಂಕ ನಡುವೆ ಕೊರೋನಾ ವಾರಿಯರ್ಸ್‌ಗೆ ಮನೋಬಲ ತುಂಬುವ ನಿಟ್ಟಿನಲ್ಲಿ ಅವರು ಮತ್ತೊಮ್ಮೆ ತಮ್ಮ ಶ್ವೇತ ಬಣ್ಣದ ಸಮವಸ್ತ್ರ ಧರಿಸಿದ್ದಾರೆ. ಅಲ್ಲದೇ 57 ವರ್ಷದ ಕಿಶೋರಿಯವರು ಈಗಾಘಲೇ ಸೋಂಕಿತರ ಸಂಪರ್ಕಕ್ಕೆ ಬಂದ ಹಿನ್ನೆಲೆ ಎರಡು ಬಾರಿ ಕ್ವಾರಂಟೈನ್ ಆಗಿದ್ದಾರೆ. ಮುಂಬೈನಲ್ಲಿ ಕೊರೋನಾ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ.

ಬ್ಯಾಡ್ಮಿಂಟನ್‌ ಪಟು ಸಿಕ್ಕಿ ರೆಡ್ಡಿಗೆ ಕೊರೋನಾ ಪಾಸಿಟಿವ್

ಇನ್ನು ಅನೇಕ ಅಡ್ಡಿ ಆತಂಕ, ಸಮಸ್ಯೆಗಳ ನಡುವೆಯೂ ಮುಂಬೈ ಕೊರೋನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಧಾರಾವಿಯೇ ಸೂಕ್ತ ಉದಾಹರಣೆ. ಆತಂಕ ಹರೆಚ್ಚುತ್ತಿರುವ ನಡುವೆಯೇ ನಾವು ಸೂಕ್ತ ಕ್ರಮ ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಲಾಕ್‌ಡೌನ್ ಘೋಷಿಸುವುದಕ್ಕೂ ಮೊದಲೇ ಉದ್ಧವ್ ಠಾಕ್ರೆಯವರು ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ್ದರು. ಹೀಗಿದ್ದರೂ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಕೊರೋನಾ ಹರಡಲಾರಂಭಿಸಿತು. ಹೀಗಿರುವಾಗ 1.25 ಕೋಟಿ ಜನಸಂಖ್ಯೆಯುಳ್ಳ, ಸಾಮಾಜಿಕ ಅಂತರವಿಲ್ಲದ, ಸ್ವಚ್ಛತೆ ಇಲ್ಲದ ಸ್ಲಂಗಳಿರುವ ಮುಂಬೈನಂತಹ ಸಿಟಿಗೆ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೆ ‘4T’ ಅಭಿಯಾನದಿಂದ ಎಲ್ಲವೂ ಬದಲಾಗಲಾರಂಭಿಸಿತು. ಎಲ್ಲಾ ಕಡೆ ಸೋಂಕು ಕಡಿಮೆಯಾಗಲಾರಂಭಿಸಿತು. ಸದ್ಯ ಸಾವಿನ ಪ್ರಮಾಣ ಕಡಿಮೆಗೊಳಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ ಎಂಬುವುದು ಕಿಶೋರಿಯವರ ಮಾತಾಗಿದೆ.

ಈ ಮಾಮಾರಿ ನಮಗೆಲ್ಲರಿಗೂ ಬಹುದೊಡ್ಡ ಪಾಠ ಕಲಿಸಿದೆ. ಮಸೀದಿ, ಮಂದಿರ, ಚರ್ಚ್ ಹಾಗೂ ಗುರುದ್ವಾರಗಳನ್ನು ಕಟ್ಟಿಸಲು ಹಣ ಸುರಿಸುವುದಕ್ಕಿಂತ ನಾವು ಆರೋಗ್ಯ ಕ್ಷೇತ್ರಕ್ಕೆ ಇದನ್ನು ಬಳಸಕೊಳ್ಳಬೇಕಿದೆ. ಆಸ್ಪತ್ರೆ, ನರ್ಸಿಂಗ್ ಹೋಂ ನಿರ್ಮಾಣಕ್ಕೆ ಇದನ್ನು ವ್ಯಯಿಸಬೇಕು. ಧಾರ್ಮಿಕ ಕ್ಷೇತ್ರಗಳು ನಮಗೆ ಮುಖ್ಯ. ಆದರೆ ಈಗ ನಾವು ಆರೋಗ್ಯ ಕ್ಷೇತ್ರಕ್ಕೆ ಅದಕ್ಕಿಂತ ಹೆಚ್ಚು ಮಹತ್ವ ನೀಡಲೇಬೇಕಾದ ಸಮಯವಾಗಿದೆ ಎಂದಿದ್ದಾರೆ ಮೇಯರ್ ಕಿಶೋರಿ.

50 ಕೋಟಿ ಸಂಪಾದನೆ, ಹಾಲಿವುಡ್ ಪ್ರವೇಶಿಸುವ ಗುರಿ ಹೊಂದಿದ್ದ ಸುಶಾಂತ್..!

ಐಸಿಯು ಹಾಗೂ ಆಕ್ಸಿಜನ್ ವ್ಯವಸ್ಥೆಯುಳ್ಳ ಬೆಡ್‌ಗಳ ಕೊರತೆ ಇದೆ. ಅನೇಕ ಬಾರಿ ರೋಗಿಗಳು ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ತಲುಪಿದ್ದಾರೆ. ಇಂತಹ ಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ? ಕೇಂದ್ರದಿಂದ ಬಂದ ತಂಡಕ್ಕೆ ಅಂದು ನಗರದಲ್ಲಿದ್ದ ಪರಿಸ್ಥಿತಿ ಬಗ್ಗೆ ಸಮಾಧಾನವಿರಲಿಲ್ಲ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಪರಿಸ್ಥಿತಿ ನಿಭಾಯಿಸಲು ನಾವು ಹಿಂದೆ ಬಿದ್ದಿಲ್ಲ, ಸಾಧ್ಯವಾದಷ್ಟು ವೇಗವಾಗಿ ಐಸಿಯು ಹಾಗೂ ಆಕ್ಸಿಜನ್ ಸೌಲಭ್ಯವಿರುವ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಈ ಮೂಲಕ ನಿಧಾನವಾಗಿ ಪರಿಸ್ಥಿತಿ ಸುಧಾರಿಸಿತು. ವಿಶ್ವಸಂಸ್ಥೆಯೂ ನಮ್ಮ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದಿದ್ದಾರೆ.  

"