ಬಾಲಿವುಡ್‌ನಲ್ಲಿ ಮರೆಯಾದ ಸುಶಾಂತ್ ಸಿಂಗ್ ಹಾಲಿವುಡ್‌ಗೆ ಎಂಟ್ರಿ ಕೊಡುವ ಕನಸು ಕಾಣುತ್ತಿದ್ದರು. ಅಲ್ಲದೇ 2020ರ ವರ್ಷಾಂತ್ಯದ ವೇಳೆಗೆ 50 ಕೋಟಿ ರುಪಾಯಿ ಆಸ್ತಿ ಸಂಪಾದಿಸುವ ಗುರಿ ಹಾಕಿಕೊಂಡಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಆ.14): ಎರಡು ತಿಂಗಳ ಹಿಂದೆ ಮುಂಬೈನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್, ಈ ವರ್ಷಾಂತ್ಯದ ವೇಳೆಗೆ ಹಾಲಿವುಡ್ ಪ್ರವೇಶ ಮತ್ತು 50 ಕೋಟಿ ರುಪಾಯಿ ಆಸ್ತಿ ಸಂಪಾದಿಸುವ ಗುರಿ ಹಾಕಿಕೊಂಡಿದ್ದರು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಸುಶಾಂತ್‌ರ ಖಾಸಗಿ ಡೈರಿಯ ಆಯ್ದ ಪುಟಗಳು ಬಹಿರಂಗಗೊಂಡಿದ್ದು, ಅದರಲ್ಲಿ ಅವರ ಕೆಲ ಕನಸು, ಗುರಿ ಮತ್ತು ವ್ಯಕ್ತಿತ್ವದ ಪರಿಚಯ ನೀಡುವ ಕೆಲ ಸಂಗತಿಗಳು ಪತ್ತೆಯಾಗಿವೆ. ಡೈರಿಯ ಅಡಕದ ಅನ್ವಯ, ತಮ್ಮ ಕೆಲಸದ ಬಗ್ಗೆ ಸುಶಾಂತ್ ಹೆಚ್ಚಿನ ಗಮನ ಹರಿಸಿದ್ದು, ತಾವು ಅಭಿನಯಿಸಿದ ಪಾತ್ರಗಳ ವಿಶ್ಲೇಷಣೆ ಮಾಡಿಕೊಂಡಿದ್ದು ಕಂಡುಬಂದಿದೆ.
ಜಸ್ಟಿಸ್ ಫಾರ್ ಸುಶಾಂತ್ ಕ್ಯಾಂಪೇನ್‌ಗೆ ವರುಣ ಧವನ್, ಪರಿಣತಿ ಸಾಥ್
ತಮ್ಮ ಪಾತ್ರಗಳ ಬಗ್ಗೆ ಸುಶಾಂತ್ ಸುದೀರ್ಘ ಟಿಪ್ಪಣಿ ಮಾಡಿಕೊಂಡಿದ್ದು, ವರ್ಷಾಂತ್ಯದ ವೇಳೆಗೆ ಹಾಲಿವುಡ್ ಪ್ರವೇಶದ ಗುರಿ ಹಾಕಿಕೊಂಡಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಅಭಿನಯ ಸುಧಾರಿಸಿಕೊಳ್ಳುವ, ಹಾಲಿವುಡ್‌ನ ಟಾಪ್ ಸಂಸ್ಥೆಗಳೊಂದಿಗೆ ಸಂಪರ್ಕ ಪಡೆಯುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಪ್ರತಿಯೊಬ್ಬ ವ್ಯಕ್ತಿ ಕೂಡ ಗುರಿ ಈಡೇರಿಸಿಕೊಳ್ಳಲು ಶ್ರಮಿಸಬೇಕು, ಅದು ಆತನ ಪಾಲಿಗೆ ಸಕಾರಾತ್ಮಕ ಸಂಗತಿ ಎಂದು ನಮೂದಿಸಿದ್ದಾರೆ.
