ಹೈದರಾಬಾದ್(ಆ.14)‌: ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಸಿಕ್ಕಿ ರೆಡ್ಡಿ ಹಾಗೂ ರಾಷ್ಟ್ರೀಯ ತಂಡದ ಫಿಸಿಯೋ ಡಾ.ಕಿರಣ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಇಲ್ಲಿನ ಪುಲ್ಲೇಲಾ ಗೋಪಿಚಂದ್‌ ಅಕಾಡೆಮಿಯಲ್ಲಿ ಸಿಕ್ಕಿ ಕೆಲ ದಿನಗಳ ಹಿಂದಷ್ಟೇ ಅಭ್ಯಾಸ ಆರಂಭಿಸಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದ ಮಾರ್ಗಸೂಚಿ ಅನುಸಾರ ಕೋವಿಡ್‌ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಖಚಿತವಾಗಿದ್ದು, ಇಬ್ಬರನ್ನೂ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ. ಇದೇ ಅಕಾಡೆಮಿಯಲ್ಲಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಸೇರಿದಂತೆ ಅಗ್ರ ಶಟ್ಲರ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ.

ಕೊರೋನಾದಿಂದ ಕ್ರಿಕೆಟಿಗ ಕರುಣ್‌ ಗುಣಮುಖ

ನವದೆಹಲಿ: ಕರ್ನಾಟಕದ ಕ್ರಿಕೆಟಿಗ ಕರುಣ್‌ ನಾಯರ್‌ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಳೆದ ತಿಂಗಳು ಅವರಿಗೆ ಸೋಂಕು ತಗುಲಿತ್ತು ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಐಪಿಎಲ್‌ನಲ್ಲಿ ಅವಕಾಶ ಸಿಗದ್ದಕ್ಕೆ ಕ್ರಿಕೆಟಿಗ ಆತ್ಮಹತ್ಯೆ!

2 ವಾರಗಳ ಕ್ವಾರಂಟೈನ್‌ ಹಾಗೂ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದು, ಆ.8ರಂದು ನಡೆಸಿದ ಕೋವಿಡ್‌ ಪರೀಕ್ಷೆಯ ವರದಿ ನೆಗೆಟಿವ್‌ ಬಂದಿದೆ ಎಂದು ತಿಳಿದು ಬಂದಿದೆ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಐಪಿಎಲ್‌ ತಂಡದಲ್ಲಿರುವ ಕರುಣ್‌, ಟೂರ್ನಿಗಾಗಿ ಯುಎಇಗೆ ತೆರಳುವ ಮುನ್ನ ಅವರು ಇನ್ನೂ 3 ಬಾರಿ ಪರೀಕ್ಷೆಗೆ ಒಳಗಾಗಬೇಕಿದ್ದು, ಮೂರೂ ವರದಿ ನೆಗೆಟಿವ್‌ ಬರಬೇಕಿದೆ.