Asianet Suvarna News Asianet Suvarna News

ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ್ದ ಚಟ್ನಿಯಲ್ಲಿ ಮುಳುಗೇಳುತ್ತಾ ಈಜಾಡಿದ ಇಲಿ: ವೀಡಿಯೋ ವೈರಲ್

ನೀರಲ್ಲಿ ಮೀನು ಈಜಾಡೋದನ್ನಾ ನೋಡಿರ್ತಿರಾ ಆದ್ರೆ ಚಟ್ನಿಯಲ್ಲಿ ಇಲಿ ಈಜಾಡಿದ್ದನ್ನಾ ಯಾವತ್ತಾದ್ರೂ ನೋಡಿದ್ರಾ ನೋಡಿಲ್ಲ ಅಂದ್ರೆ ಈ ಸ್ಟೋರಿಲಿ ಇದೆ ವೀಡಿಯೋ ನೋಡಿ. 

Rat swimming in chutney which prepared for serve student of sultanpur JNTUH  engineering college hostel akb
Author
First Published Jul 10, 2024, 4:26 PM IST

ನೀರಲ್ಲಿ ಮೀನು ಈಜಾಡೋದನ್ನಾ ನೋಡಿರ್ತಿರಾ ಆದ್ರೆ ಚಟ್ನಿಯಲ್ಲಿ ಇಲಿ ಈಜಾಡಿದ್ದನ್ನಾ ಯಾವತ್ತಾದ್ರೂ ನೋಡಿದ್ರಾ ನೋಡಿಲ್ಲ ಅಂದ್ರೆ ಈ ಸ್ಟೋರಿಲಿ ಇದೆ ವೀಡಿಯೋ ನೋಡಿ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ರೆಡಿ ಮಾಡಿದ್ದ ಚಟ್ನಿ ಪಾತ್ರೆಗೆ ಇಲಿಯೊಂದು ಬಿದ್ದು ಈಜಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಚಟ್ನಿ ತುಂಬಿಸಿ ಇಟ್ಟಿದ ಕಠಾರದ ಒಳಗೆ ಬಿದ್ದ ಇಲ್ಲಿ ಸ್ವಿಮ್ಮಿಂಗ್ ಫುಲ್‌ನಲ್ಲಿ ಈಜಾಡುವಂತೆ ಅತ್ತಿಂದಿತ್ತ ಓಡಾಡಿದೆ. ತೆಲಂಗಾಣದ ಸುಲ್ತಾನ್‌ಪುರದಲ್ಲಿ ಜೆಎನ್‌ಟಿಯುಹೆಚ್‌ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಾಸ್ಟೆಲ್ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 

ಇಲಿ ಚಟ್ನಿಯಲ್ಲಿ ಈಜಾಡ್ತಿರುವ ದೃಶ್ಯವನ್ನು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೇ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 'ಚಟ್ನಿಯಲ್ಲಿ ಇಲಿ. ಜೆಎನ್‌ಹೆಚ್‌ಟಿಯು ಸುಲ್ತಾನ್ಪುರ, ಹಾಸ್ಟೆಲ್‌ನಲ್ಲಿ ಸಿಬ್ಬಂದಿ ಯಾವ ರೀತಿ ಶುಚಿತ್ವ ಕಾಪಾಡ್ತಿದ್ದಾರೆ ನೋಡಿ' ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.  ಇದನ್ನು ನಾನು ಬರಿಗಣ್ಣಿನಿಂದ ನೋಡಿದರೆ ಈ ಆಘಾತದಿಂದ ಹೊರಗೆ ಬರಲು ನನಗೆ ಒಂದು ತಿಂಗಳಾದರೂ ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಸುಲ್ತಾನ್ಪುರ ಜೆಎನ್‌ಯುಟಿಯಲ್ಲಿ ಇದೇನೂ ಹೊಸದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 2016ರಿಂದ 2020ರ ಅವಧಿಯಲ್ಲಿ ನಾವು ಬಹುತೇಕ ಪ್ರತಿದಿನವೂ ಹಾಸ್ಟೆಲ್ ಮ್ಯಾನೇಜ್‌ಮೆಂಟ್ ಜೊತೆ ಒಳ್ಳೆಯ ಆಹಾರ ನೀಡುವುದಕ್ಕಾಗಿ ಫೈಟ್ ಮಾಡುತ್ತಿದ್ದೆವು.  ಆದರೆ ಅದು 2024ರಲ್ಲೂ ಮುಂದುವರಿದಿರುವುದನ್ನು ನೋಡುವುದಕ್ಕೆ ಬೇಸರವಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಬ್ಲೇಡ್‌, ಚೇಳು, ಬೆರಳು, ಬಳಿಕ ಚಾಕೋಲೇಟ್ ಸಿರಪ್‌ನಲ್ಲಿ ಸತ್ತ ಇಲಿ.. ಚಿಪ್ಸ್‌ ಪ್ಯಾಕೇಟ್‌ನಲ್ಲಿ ಫ್ರೈಡ್ ಕಪ್ಪೆ ಪತ್ತೆ

ಇದನ್ನು ನಂಬುವುದಕ್ಕೂ ಆಗಲ್ಲ, ಸಹಿಸುವುದಕ್ಕೂ ಆಗುತ್ತಿಲ್ಲ, ಮೊದಲಿಗೆ ನಮ್ಮ ಆಹಾರದಲ್ಲಿ ಕೀಟಗಳು ಸಿಗುತ್ತಿದ್ದವು, ಈಗ ಇಲಿ ಸಿಗುತ್ತಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ತರಲಿದೆ. ಈ ಆಹಾರ ನೈರ್ಮಲ್ಯತೆಯ ನಿರಂತರ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ. 

ತೆಲಂಗಾಣ ಟುಡೇ ವರದಿಯ ಪ್ರಕಾರ, ತೆಲಂಗಾಣ ಆರೋಗ್ಯ ಸಚಿವ ಸಿ. ದಾಮೋದರ್ ರಾಜ ನರಸಿಂಹ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಹಿಂದೆ ಜೂನ್ 29 ರಂದು ತೆಲಂಗಾಣದ ಆಹಾರ ಸುರಕ್ಷತಾ ವಿಭಾಗವೂ ಸುಲ್ತಾನ್‌ಪುರ ಜೆಎನ್‌ಟಿಯುವಿಗೆ ಭೇಟು ನೀಡಿತ್ತು. ಈ ವೇಳೆ ಹಲವು ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿತ್ತು. ಈ ವೇಳೆಯೂ ಕಠಿಣ ಕ್ರಮಕ್ಕೆ ಸೂಚಿಸಲಾಗಿತ್ತು. ಆದಾಗ್ಯೂ ಈಗ ಮತ್ತೆ ಅಲ್ಲಿ ಆಹಾರ ವಿತರಣೆಯಲ್ಲಿ ಶುಚಿತ್ವದ ಕೊರತೆ ಕಾಣುತ್ತಿದೆ. 

ಇಲಿಗಳನ್ನ ಫ್ರೈ ಮಾಡಿ ಸಮೋಸದಂತೆ ಬಾಯಿ ಚಪ್ಪರಿಸಿ ತಿಂತಿದ್ದಾರೆ ಜನ

 

Latest Videos
Follow Us:
Download App:
  • android
  • ios